LONG THREAD

ನಾವು ಭಾರತೀಯರ ದೊಡ್ಡ ದೌರ್ಬಲ್ಯ ಏನು ಗೊತ್ತಾ ? ನಮ್ಮವರ, ನಮ್ಮ ಸ್ವಂತ ಬುದ್ಧಿ ಹೇಳಿದ್ದು ಬಿಟ್ಟು ಬೇರೆಲ್ಲವನ್ನು, ಬೇರೆಲ್ಲರನ್ನು (ಹೇಚ್ಚಾಗಿ ಅಮೇರಿಕನ್ನರು, ಬ್ರಿಟಿಷರು (ಈಗಲೂ)) ಹೇಳಿದನ್ನೇ ಪರಮ ಸತ್ಯ ಎಂದು ನಂಬಿ ಶಿರಸಾವಹಿಸಿ ಪಾಲಿಸುವುದು, ಇದಕ್ಕೆ ನಾವು ತೆತ್ತ ಬೆಲೆ ದೊಡದ್ದು ಅದುವೇ ನಮ್ಮ ಶಿಕ್ಷಣ ವ್ಯವಸ್ಥೆ.
ಭಾರತವನ್ನು ಬಡ ರಾಷ್ಟ್ರ, ಮೌಢ್ಯದ ನೆಲೆ ಎಂದು ಕೇಕೆ ಹಾಕಿ ನಕ್ಕರು ಪರದೇಶಿಯರು, ನಾವೂ ಕೂಡ ನಂಬಿ, ಒಪ್ಪಿ ಅವರನ್ನೇ ಬುದ್ಧಿವಂತರು ಎಂದು ಸ್ವೀಕರಿಸಿಬಿಟ್ಟೆವು. ಆದರೆ ನಮ್ಮ ಜ್ಞಾನ ಭಂಡಾರ, ಗ್ರಂಥಾಲಯಗಳಿಂದ ಕದ್ದುಕೊಂಡು ಹೋದ ಕಚ್ಚಾ ಪ್ರತಿಯಿಂದಲೇ ಅವರು ಬೆಳೆದದ್ದು ಎಂದು ತಿಳಿದಿದ್ದು ಬೆರಳೆಣಿಕೆಯಷ್ಟು ಮಂದಿ ಮಾತ್ರ ಆ ಕಾಲಕ್ಕೆ.
ಇಲ್ಲಿಂದ ಕೊಳ್ಳೆ ಹೊಡೆದ ಜ್ಞಾನ ಸಂಪತ್ತಿಂದ ಅವರು ಬೆಳೆದರು ನಾವು ಜಡರಾಗಿ, ಪೆದ್ದರಾಗಿ ಉಳಿದುಬಿಟ್ಟೆವು.
ನಾನು ಇಲ್ಲಿ ಹೇಳುತ್ತಿರುವ ವಿಷಯವೆಲ್ಲವೂ ನನ್ನ ಅಜ್ಜ ' ಬರೀಯ ಪ್ರಮಾಣಪತ್ರಕ್ಕಾಗಿ ಓದುವ ವಿದ್ಯಾರ್ಥಿಗಳ ಬಗ್ಗೆ, ಹಣ್ಣಕ್ಕಾಗಿಯೇ ಬದುಕುತ್ತಿರುವ ವೃತ್ತಿಪರರ ಬಗ್ಗೆ, ಸಂಸ್ಕಾರ ಹಾಗು ವೃತ್ತಿ ಧರ್ಮ ಮರೆತಿರುವ ಭ್ರಷ್ಟರ ' ಬಗ್ಗೆ ಅಸಮಾಧಾನ ವ್ಯಕ್ತಪಡಿಸುವಾಗ ಹೇಳಿದ್ದು.
ಯಾವುದಾದರು ಬೃಹತ್ ಕಟ್ಟಡವನ್ನು ಅಲುಗಾಡಿಸಿಲು ಅದರ ಅಡಿಪಾಯವನ್ನು ಮೊದಲು ಕೆಡವಬೇಕು. ಅಡಿಪಾಯ ಅಲುಗಾಡದಂತೆ ಇದ್ದಾಗ ಮಾತ್ರ ಕಟ್ಟಡ ನೇರ, ಸ್ಥಿರವಾಗಿ ನಿಲ್ಲಲು ಸಾಧ್ಯ. ಆದರೆ ನಾವೇ ಇಲ್ಲಿ ಅಡಿಪಾಯ ಅಲ್ಲಾಡಿಸಲು ಸಾವಕಾಶವಾಗಿ ಅನುವು ಮಾಡಿ ಕೊಟ್ಟೆವು.
ಪುರಾತನ ಭಾರತದಲ್ಲಿ ಗುರುಕುಲ ಪದ್ಧತಿ ಇತ್ತು. ವಿಶಿಷ್ಠ, ದಿಟ್ಟ ವ್ಯವಸ್ಥೆ ಅದು. ರಾಜರ ಮಕ್ಕಳಿಂದ ಹಿಡಿದು ಗುಲಾಮರ ಮಕ್ಕಳವರೆಗೂ ಏಕಭಾವ. ಗುರುಕುಲದ ಗಡಿಯೊಳಗೆ ಕಾಲಿಟ್ಟವರೆಲ್ಲರು ಅವರವರ ಹಿನ್ನೆಲೆ ಮರೆತು ಬಿಡಬೇಕು, ಎಲ್ಲರು ವಿದ್ಯಾರ್ಜನೆಗೆ ಬಂದ ವಿದ್ಯಾರ್ಥಿಗಳಷ್ಟೆ. ಯಾರ ಮಧ್ಯಸ್ತಿಕೆ ರಾಜಕೀಯ ಪ್ರಭಾವಕ್ಕೊಳಪಡದ ಸುಸೂತ್ರ ವ್ಯವಸ್ಥೆ ಅದು
ಭಾರಿ ಕಟ್ಟುನಿಟ್ಟಿನ ದಿನಚರಿ, ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ನಿತ್ಯ ಕರ್ಮಗಳನ್ನ ಮುಗಿಸಿ ವಿದ್ಯಾರ್ಜನೆಗೆ ಸಜ್ಜಾಗುತ್ತಿದರು. ಬ್ರಾಹ್ಮಿ ಮುಹೂರ್ತ ಬಹಳ ವೈಶಿಷ್ಟ್ಯ ಕಡಿಮೆಯೇನಿಲ್ಲ, ಏನೇ ಅಭ್ಯಸಿಸಿದರು ಸುಲಭವಾಗಿ ಸ್ಮೃತಿ ಪಟಲದಲ್ಲಿ ಉಳಿದುಹೋಗುತ್ತದೆ
ಯೋಗ ಧ್ಯಾನ ಮನಸ್ಸನ್ನು ಪ್ರಫುಲ್ಲವಾಗಿಡುತಿತ್ತು, ಭಿಕ್ಷೆಯಲ್ಲಿ ಅರ್ಧ ಮುಕ್ಕಾಲು ಭಾಗ ಗುರುವಿಗೆ ಮೀಸಲಿಡುತ್ತಿದ್ದರು ಉಳಿದಿದ್ದುದರಲ್ಲಿ ತಾವು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು. ತಾತ್ಪರ್ಯ ? ಬಹುಶಃ ಬೇಡುವಾಗ ಮನಸ್ಸಿಗೆ ಬರುವ ಮೃದುತನ ಬೇರಾವ ಕಾರ್ಯ ಮಾಡಿದಾಗಲು ಬರಲಾರದು, ಅಹಂ ಸಂಪೂರ್ಣ ಶಮನವಾಗಿ ಬಿಡುತ್ತದೆ.
ಪ್ರತಿಯೊಂದರಲ್ಲು ಪ್ರಗತಿ ಹೊಂದುತ್ತಿರುವ ಭಾರತೀಯ ಯುವಕರ ಮರ್ಮವೇನೆಂದರಿಯಲು ಬ್ರಿಟಿಷರು ಭಾರತಕ್ಕೆ ಲಾರ್ಡ್ ಮೆಕಾಲೆಯನ್ನು ಕರೆಸಿಕೊಂಡರು. ಅವನು ಹೇಳಿದು ಮತ್ತಿನ್ನೇನಲ್ಲ ' ಭಾರತೀಯ ಶಿಕ್ಷಣ ವ್ಯವಸ್ಥೆ ಅಧ್ಬುತವಾಗಿದೆ, ವಿದ್ಯೆ ಮಾತ್ರವಲ್ಲದೆ ಜ್ಞಾನ, ಶಿಸ್ತು, ಶ್ರದ್ಧೆ, ಆರೋಗ್ಯ ಎಲ್ಲವನ್ನೂ ಒಳಗೊಂಡಿದೆ.
ಇವರನ್ನು ಮಣಿಸಬೇಕೆಂದರೆ ಶಿಕ್ಷಣ ವ್ಯವಸ್ಥೆ ಬುಡ ಸಮೇತ ಹಾಳುಗೆಡವಬೆಕು ' ಎಂದು. ಅಲ್ಲಿಂದ ಮೆಕಾಲೆ ಶಿಕ್ಷಣ ವ್ಯವಸ್ಥೆ ಜಾರಿಗೆ ಬಂತು. ಸತ್ವವಿಲ್ಲದ, ಜ್ಞಾನವಿಲ್ಲದ ಬರಡು ಶಿಕ್ಷಣವನ್ನು ವೈಭವೀಕರಿಸಲಾಯಿತು. ಇಂಗ್ಲಿಷ್ ಬಲ್ಲವರು ಜಾಣರೆಂದು ಘೋಷಿಸಲಾಯಿತು ಭಾರತೀಯರು ಕಣ್ಣು ಬಾಯಿ ಬಿಟ್ಟುಕೊಂಡು ಕಿವಿ ನಿಮಿರಿಸಿಕೊಂಡು ಕುಳಿತರು.
ಜೊತೆಗೆ ಭಾನುವಾರ ರಜೆಯ ಪದ್ಧತಿ ಶುರುವಾಯಿತು. ಭಾನುವಾರವೇ ಏಕೆ ? ಅಧ್ಬುತ ಕಾರಣವೊಂದಿದೆ. ಸೋಮವಾರ ಸೂರ್ಯನ ಕಿರಣ ಚಂದ್ರನನ್ನು ದಾಟಿ ಬರುತ್ತವೆ, ಮಂಗಳವಾರ ಸೂರ್ಯನ ಕಿರಣ ಮಂಗಳನನ್ನು ದಾಟಿ ಬರುತ್ತವೆ ಹೀಗೇಯೇ ಉಳಿದ ದಿನಗಳು ಕೂಡ.
ಆದರೆ ಭಾನುವಾರ ಸೂರ್ಯನ ಕಿರಣಗಳು ನೇರವಾಗಿ ಭೂಮಿಯ ಮೇಲೆ ಬೀಳುತ್ತವೆ. ಉಳಿದ ದಿನಗಳಿಗೆ ಹೋಲಿಸಿದರೆ ಭಾನುವಾರ ಪ್ರಶಸ್ತವಾದ ದಿನ ವಿದ್ಯಾರ್ಜನೆಗೆ, ಆ ದಿನವೇ ರಜೆ ಘೋಷಿಸಿ ಬಿಟ್ಟರು ಭಾರತಿಯರೆಲ್ಲರು ಹೊದ್ದು ಮಲಗಿಬಿಟ್ಟರು.
ಇದಕ್ಕೂ ಮೊದಲು ೧೫ ದಿನಕ್ಕೊಮ್ಮೆ ೩ ದಿನ ರಜೆಯಿತ್ತು ಚತುರ್ದಶಿ, ಅಮಾವಾಸ್ಯೆ/ಹುಣ್ಣಿಮೆ, ಪಾಡ್ಯ, ಏಕೆಂದರೆ ಚಂದ್ರನ ಚಲನವಲನಗಳನ್ನು ಹಾಗು ಅವು ಭೂಮಿಯ ಮೇಲೆ ಬೀರುವ ಪ್ರಭಾವವನ್ನು ಆಗಲೇ ಬಲ್ಲವರಾಗಿದ್ದರು ನಮ್ಮವರು.
ಅಂತಹ ದೈತ್ಯ ಮರದಂತಿದ್ದ ಶಿಕ್ಷಣ ವ್ಯವಸ್ಥೆಯ ಬೇರುಗಳನ್ನೇ ಕತ್ತರಿಸಿ ಪಳಿಯುಳಿಕೆಯಲ್ಲಿ ಮತ್ತೆ ಮರ ಬೆಳೆಸುವ ಪ್ರಯತ್ನದಲ್ಲಿದೇವೆ ನಾವು ಎಂತಹ ಅವಿವೇಕತನ ಅಲ್ಲವೇ ?
ಅಸತೋಮ ಸದ್ಗಮಯ
ತಮಸೋಮ ಜ್ಯೋತಿರ್ಗಮಯ
ಮೃತ್ಯೋರ್ಮಾ ಅಮೃತಂಗಮಯ
ಓಂ ಶಾಂತಿ ಶಾಂತಿ ಶಾಂತಿಃ 🙏
You can follow @durga_putri.
Tip: mention @twtextapp on a Twitter thread with the keyword “unroll” to get a link to it.

Latest Threads Unrolled: