ಇನ್ನೊಬ್ಬರ ವಾದಕ್ಕೆ ಪ್ರತಿವಾದ ನೀಡಿ. ಬೇಕಾದರೆ ಅವರ ವಾದವೇ ಟೊಳ್ಳು ಎಂದು ಸಾಬೀತು ಪಡಿಸಿ. ಆದರೆ ನಮ್ಮ ಅಭಿಪ್ರಾಯ ಒಪ್ಪಲಿಲ್ಲ ಅನ್ನೋ ಒಂದೇ ವಿಚಾರಕ್ಕೆ ಇನ್ನೊಬ್ಬರ ತೇಜೋವದೆ ಮಾಡುವುದು, ಸರಿಯಾಗಿ ಗುರುತು ಪರಿಚಯವೇ ಇಲ್ಲದವರ ಮೇಲೆ ಮೋಸ, ಸುಳ್ಳಿನ ಆಪಾದನೆ ಹಾಕುವುದು ಸರಿಯಲ್ಲ. ಕಾನೂನಿನ ದೃಷ್ಟಿಯಿಂದನೂ ಒಪ್ಪಿತವಲ್ಲ.
2011 ರಿಂದ ಕನ್ನಡದಲ್ಲಿ ಜ್ಞಾನ-ಮನರಂಜನೆಗೆ ಸಿಗಲು ಕಾನೂನು ಹೋರಾಟ ಮಾಡಿಕೊಂಉ ಬಂದಿದ್ದ ಕನ್ನಡ ಗ್ರಾಹಕ ಕೂಟಕ್ಕೆ 2015 ಜೂನ್ ನಲ್ಲಿ ಸುಪ್ರೀಂ ಕೋರ್ಟ್ ಡಬ್ಬಿಂಗ್ ಪರ ತೀರ್ಪು ಕೊಟ್ಟಿತ್ತು. ಅದಾಗಿಯೇ ಡಬ್ಬಿಂಗ್ ಚಿತ್ರಗಳು ಶುರುವಾಗುತ್ತವೆ ಎಂಬ ಆಸೆ ಈಡೇರದಿದ್ದಾಗ ಸಾಲು ಸಾಲಾಗಿ ಸೋಶಿಯಲ್ ಮಿಡಿಯಾ ಅಭಿಯಾನಗಳನ್ನು ಶುರುಮಾಡಿದೆವು,
ಮೀಡಿಯಾ ಸಂಸ್ಥೆಗಳಿಗೆ ಪತ್ರ ಬರೆದವು. ಆದರೆ ದಶಕಗಳಿಂದ ಬೇರೂರಿದ್ದ ಡಬ್ಬಿಂಗ್ ವಿರೋಧಿ ಬಣದ ಕದಂಬ ಬಾಹುಗಳು ಎಲ್ಲಾ ಕಡೆ ಚಾಚಿದ್ದರಿಂದ ಡಬ್ಬಿಂಗ್ ಚಿತ್ರಗಳಾಗಲೀ, ಚಾನೆಲ್ ಗಳಾಗಲೀ ಬರುವ ವಿಚಾರದಲ್ಲಿ ಒಂದಿಷ್ಟೂ ಪ್ರಗತಿ ತೋರಲಿಲ್ಲ.
ನಾವೆಲ್ಲಾ ಹೊಳೆಗೆ ಇಳಿದಾಗಿತ್ತು. ಡಬ್ಬಿಂಗ್ ಇಲ್ಲದೇ ಕನ್ನಡನಾಡಿನಲ್ಲಿ ಮನರಂಜನೆಗೂ ಕೂಡ ಕನ್ನಡದ ಅಗತ್ಯ ಇಲ್ಲ ಎನ್ನುವ ವಾತಾವರಣ ಗಡಿನಾಡಲ್ಲದೇ, ಒಳನಾಡು, ತಾಲೂಕು ಕೇಂದ್ರಗಳಲ್ಲೂ ಎದ್ದು ತೋರುತ್ತಿದುದು ನಾವು ಎಷ್ಟೇ ಮನಸ್ಸು ಮಾಡಿದರೂ ಡಬ್ಬಿಂಗ್ ಹೋರಾಟವನ್ನು ಬಿಟ್ಟು ಬಿಡಲು ಮನಸ್ಸು ಒಪ್ಪಲಿಲ್ಲ.
ಇನ್ನೇನು? ನಾವೇ ಚಿತ್ರ ತಯಾರಿಸೋಣ.. ಒಂದು ಹತ್ತು ಜನ ಐಟಿ ಯಲ್ಲಿ ಕೆಲಸ ಮಾಡುವ ಹುಡುಗರೆಲ್ಲಾ ಸೇರಿ ಹಣ ಹಾಕಿ ಡಬ್ಬಿಂಗ್ ಚಿತ್ರ ಕ್ಕೆ ಕೈ ಹಾಕಿದೆವು. ಪ್ರತಿ ಹಂತದಲ್ಲೂ ತಡೆ, ವಿರೋಧ. ಸ್ಟುಡಿಯೋ ಸಿಗುವುದರಿಂದ ಹಿಡಿದು, ದನಿಕಲಾವಿದರನ್ನು ಹೊಂದಿಸುವವರೆಗೆ.
ಇಲ್ಲಿ ಎಲ್ಲರೂ ಗಮನಿಸ ಬೇಕಾದ ವಿಷಯವೆಂದರೆ ಹತ್ತು ಜನರಿಲ್ಲಿ ಒಬ್ಬರಿಗೂ ಕೂಡ ಸಿನಿಮಾ ನಿರ್ಮಾಣದಲ್ಲಿ ತೊಡಗಿಸಿಕೊಳ್ಳಬೇಕು, ಕಾಸು ಮಾಡಬೇಕು ಎಂಬ ಆಲೋಚನೆ ಇದ್ದವರಲ್ಲ. ಕನ್ನಡದಲ್ಲಿ ಡಬ್ಬಿಂಗ್ ಬರಲೇಬೇಕು ಎಂದು ಟೊಂಕ ಕಟ್ಟಿ ನಿಂತಿದೊಂದು‌ ಬಿಟ್ಟರೆ ನಮಗಾಗಲೀ, ಚಿತ್ರರಂಗಕ್ಕಾಲಿ‌ ಯಾವುದೇ ಸಂಬಂಧ ಇರಲಿಲ್ಲ.
ಎಲ್ಲರಿಗೂ ಇದ್ದದ್ದು ಒಂದೇ ವರಮಾನ. ಸಾಫ್ಟ್‌ವೇರ್ ಉದ್ಯೋಗ. ಟ್ಯಾಕ್ಸ್ ಕಟ್ಟಿ ಬಂದುಳಿದ ಉಳಿತಾಯದಲ್ಲಿ ಒಂದು ದೊಡ್ಡ ಮೊತ್ತವನ್ನೇ ವಿನಿಯೋಗಿಸಿದೆವು. ಮನೆಯಲ್ಲಿ, ಮಿಕ್ಕ ಸ್ನೇಹಿತರಲ್ಲಿ ,ನಿಮಗೊಂದು ಹುಚ್ಚು, ಮರಳು ಎಂಬ ಮಾತು ಕೂಡ ಕೇಳಿಸಿಕೊಳ್ಳಬೇಕಾಯಿತು.
ಸತ್ಯದೇವ್ ಐಪಿಎಸ್ ಚಿತ್ರ ಬಿಡುಗಡೆಯಾಗಿದನ್ನು ಥಿಯೇಟರ್ ಗೆ ಜನ ಕಳುಹಿಸಿ ನಿಲ್ಲಿಸಲಾಯಿತು. ಆದರೂ ಹಟ ಬಿಡದೇ ಧೀರ, ಕಮಾಂಡೋ, ಜಗಮಲ್ಲ ಎಂಬ ಚಿತ್ರ ಗಳನ್ನು ಮಾಡುತ್ತಾ ಸಾಗಿದೆವು.
2015 ರಲ್ಲಿ ಒಬ್ಬೊಬ್ಬರು ಎಷ್ಟು ಹಣ ಹಾಕಬೇಕು ಎಂದು ತೀರ್ಮಾನ ಮಾಡಿದ್ದೆವೋ.. ಅದರ ನಾಲ್ಕು ಪಟ್ಟು ಹಣ ಹಾಕಿ ಆಗಿತ್ತು. ಹಿಂದಕ್ಕೆ ಒಂದು ರೂಪಾಯಿ ಕೂಡ ಬಂದಿರಲಿಲ್ಲ. ಅದರ ಜೊತೆಗೆ ಕನ್ನಡದಲ್ಲಿ ಸ್ಟಾರ್ ಸ್ಪೋರ್ಟ್ಸ್ ಚಾನೆಲ್, ಡಿಸ್ಕವರಿ, ಕಾರ್ಟೂನ್ ಚಾನೆಲ್ ಗಳು ಬರಬೇಕೆಂದು ಪದೇ ಪದೇ ಮುಂಬಯಿಗೆ ನಮ್ಮದೇ ಕಾಸಿಂದ ಹೋಗಿ ಬರಲಾರಂಬಿಸಿದೆವು.
ಸ್ಟಾರ್ ಸ್ಪೋರ್ಟ್ಸ್ ಚಾನೆಲ್ ಗಾಗಿ ಜನರಿಂದ ಸರ್ವೇ ನಡೆಸಿ, 40 ಪುಟದ ವಿಸ್ತೃತ ವರದಿಯನ್ನು ಮಾಡಿಕೊಟ್ಟೆವು. ಎಲ್ಲವೂ ನಮ್ಮದೇ ಹಣ, ನಮ್ಮದೇ ಸಮಯ.
ನಮ್ಮ ಹಣ, ಅದರಲ್ಲಿ ಆದ ನಷ್ಟದ ಮಾಹಿತಿಯನ್ನು‌ ಯಾರಿಗೂ ‌ಕೊಡುವ ಅಗತ್ಯ ಇಲ್ಲ. ‌ಯಾಕೆಂದರೆ ಯಾರೋ‌ ಕೇಳಿ‌ ನಾವು‌ ಹಾಕಿದ್ದಲ್ಲ. ನಮ್ಮ ನಿರ್ಧಾರ, ನಾವೇ ಹೊಣೆ. ಒಂದಂತೂ‌ ನಿಜ.
ಹಾಕಿದ್ದರಲ್ಲಿ 25% ಕೂಡ ವಾಪಾಸ್ ಬಂದಿಲ್ಲ.
ಡಬ್ಬಿಂಗ್ ಬೇಕು, ಬೇಡ ಎನ್ನುದರ ಬಗ್ಗೆ ಮಾತಾಡಿ.‌ಆದರೆ ಆಧಾರಗಳಿಲ್ಲದೇ ಆಪಾದನೆ ಮಾಡಬೇಡಿ. ಮನಸ್ಸು ‌ಮಾಡಿದರೆ ಕಾನೂನಾತ್ಮಕವಾಗಿ ಹೋರಾಡಲೂ ಗೊತ್ತು.
You can follow @kodlady.
Tip: mention @twtextapp on a Twitter thread with the keyword “unroll” to get a link to it.

Latest Threads Unrolled: