ಟೀಕೆಯನ್ನು, ವಿಮರ್ಶೆಯನ್ನು ಹಾಗೂ ಪ್ರಶ್ನೆಗಳನ್ನು ಸಹಿಸದೇ ಬ್ಲಾಕ್ ಮಾಡುತ್ತಿರುವ ಗಣೇಶ್ ಚೇತನ್ @ganeshchetan ಹಾಗೂ ಅನ್ ಫಾಲೋ ಮಾಡುತ್ತಿರುವ ಇತರ ಕನ್ನಡ ಹೋರಾಟಗಾರರಿಗೆ ಈ ಕೆಲವು ಘಟನೆಗಳನ್ನು ನೆನಪಿಸಿಕೊಡುತ್ತೇನೆ ಬಹುಶಃ ಇಷ್ಟವಾಗಬಹುದು.
ಘಟನೆ ೧: ೩೦ರ ದಶಕ, ಐನ್ಸ್ಟೀನ್ ಬೆಳಕಿನ ಕಿರಣಗಳು ಗುರುತ್ವಾಕರ್ಷಣದಿಂದ ಬಾಗುತ್ತವೆ ಎಂದು ಪ್ರತಿಪಾದಿಸಿದ!

ಬೆಳಕಿನ ಕಿರಣಗಳು ಬಾಗಲು ಸಾಧ್ಯವಿಲ್ಲ, ಸಾಕ್ಷಿ ನೀಡಿ ಎಂದು ವಿಜ್ಞಾನಿಗಳು ಟೀಕಿಸಿದರು.

ಸೂರ್ಯಗ್ರಹಣ ವಾದಾಗ ಸೂರ್ಯನ ಹಿಂದಿನ ನಕ್ಷತ್ರಗಳು ಸಿಗುತ್ತವೆ ಎಂದು ಸಾಕ್ಷಿ ಸಮೇತ ತೋರಿಸಲಾಯಿತು.

ಗುರುತ್ವ ಮತ್ತು ಬೆಳಕಿನ ಸಂಬಂಧ ಹೀಗೆ
ಕಂಡು ಹಿಡಿಯಲಾಯಿತು.

ಹಾಗಿದ್ದರೆ ಟೀಕಿಸಿದ ವಿಜ್ಞಾನಿಗಳು ಮಾರಕರೇ?

ಅವರು ಯಾವಾಗಲೂ ಪೂರಕರು.

ಘಟನೆ ೨.‌

ದ‌.ರಾ ಬೇಂದ್ರೆಯವರ ಮೇಲೆ ಒಬ್ಬ ಹುಡುಗ ತುಂಬಾ ಕಟುವಾಗಿ ಟೀಕಿಸುತ್ತಾ ಬರೆಯುತ್ತಿದ್ದ!

ಬೇಂದ್ರೆಯವರು ಅವನನ್ನು ಭೇಟಿ ಮಾಡಿದಾಗ,"ನೀನ ಯಪ್ಪಾ ಬರೆಯಾಂವ. ಬರಿ. ಬರಿ" ಎಂದು ಹುರಿದುಂಬಿಸಿದರು.

ನೀವು ಟೀಕೆಗೆ ಹುರಿದುಂಬಿಸುತ್ತೀರಾ?
ಘಟನೆ ೩: ಇದನ್ನು ನನ್ನ ಕಣ್ಣಾರೆ ಕಂಡಿದ್ದೇನೆ.

೨೦೧೦ ರ ಆಳ್ವಾಸ್ ವಿರಾಸತ್ ವೇದಿಕೆಯಲ್ಲಿ ಪ್ರವೀಣ್ ಗೋಡ್ಕಿಂಡಿ ಶಾಸ್ತ್ರೀಯ ರಾಗ ಎಂದು ಹೇಳಿ ಮಿಶ್ರ ಸಂಗೀತ ನುಡಿಸುತ್ತಿದ್ದರ!

ಮಾರನೇ ದಿನ ನಮ್ಮ ತಂದೆ ನನ್ನ ಬಳಿ ಹೇಳಿದರು. ನಾನು ," ಅಪ್ಪ ನನ್ನ ಬಳಿ ಹೇಳಿದರೆ ಏನು ಪ್ರಯೋಜನ , ಪ್ರವೀಣ್ ಗೋಡ್ಕಿಂಡಿ ಅವರ ಹತ್ತಿರ ಹೇಳಿ" ಎಂದೆ!
ತಂದೆ ವೇದಿಕೆಯ ಬಳಿ ಬಂದು( ಆಗಿನ್ನೂ ಕಾರ್ಯಕ್ರಮ ಶುರುವಾಗಿರಲಿಲ್ಲ!) ಪ್ರವೀಣ್ ಗೋಡ್ಕಿಂಡಿ ಅವರ ಬಳಿ ಹೇಳಿದರು. ಪ್ರವೀಣ್ ಗೋಡ್ಕಿಂಡಿ," ಜೋಶ್ ನ್ಯಾಗ ಹೊಂಟ ಬಿಡ್ತೈತಿ ಸರಾ." ಎಂದರು.

ಆ ದಿನದ ಕಾರ್ಯಕ್ರಮದಲ್ಲಿ ಎರಡು ಶುದ್ಧವಾದ ರಾಗ ಬಾರಿಸಿದರು.

ಇಲ್ಲಿ ವಿಮರ್ಶೆ ಹೇಳದಿದ್ದರೆ ಸಂಗೀತ ರಸದೌತಣ ಆಗುತ್ತಿತ್ತೇ?!
ಘಟನೆ ೪:
ವಿ.ಪಿ.ಸಿಂಗ್ ಪ್ರಧಾನಿಯಾಗಿದ್ದ ಕಾಲ ಹಿಂದುಳಿದವರಿಗೆ ಮೀಸಲಾತಿ ನೀಡಬೇಕು ಎಂದು ಬಿಲ್ ಪಾಸು ಮಾಡಿದರು. ತುಂಬಾ ಟೀಕೆ ವ್ಯಕ್ತವಾಯಿತು. ನಂತರ ಸುಪ್ರೀಂ ಕೋರ್ಟ್ ತಡೆಯಾಜ್ನೆ ನೀಡಿ ನಂತರ ಪರಿಶೀಲಿಸಿ ಅನುಮೋದನೆ ನೀಡಿದಾಗ ಮೀಸಲಾತಿ ವ್ಯವಸ್ಥಿತವಾಗಿ ಹೊರಬಂದಿತು.

ಟೀಕೆಯಿಂದಲೇ ಇಂದಿಗೂ ಸಹ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತಿದೆ.
೫: ಪವನ್ ಒಡೆಯರ್ ಅವರು ಹಿಂದಿ ಹೇರಿಕೆಯ ಬಗ್ಗೆ ಮಾತನಾಡುತ್ತಿರುವಾಗ ಏನೋ ಅಪಾರ್ಥ ಬರುವಂತೆ ಮಾತನಾಡಿದರು. ಆಗ ವ್ಯಾಪಾಕವಾದ ಟೀಕೆ ವ್ಯಕ್ತವಾಯಿತು. ಟೀಕಿಸಿದವರ ಜೊತೆ @shruthihm1 & ರಕ್ಷಿತ್ ಪೊನ್ನಥಪುರದ ಜೊತೆ ಚರ್ಚೆ ಮಾಡಿ ಸೆನ್ಸಾರ್ ಬೋರ್ಡ್ ಕನ್ನಡದಲ್ಲಿರಬೇಕು ಎಂದು ವಿನೂತನ ಹಿಂದಿ ವಿರೋಧ ವ್ಯಕ್ತಪಡಿಸಿದರು.

ಟೀಕಾಕಾರರು ಹೊರಗಿನವರೇನು?
ಸಂವಿಧಾನದ ಉಚ್ಛತಮ ಪೂಜೆ ಅಭಿವ್ಯಕ್ತಿ ಸ್ವಾತಂತ್ರ್ಯ. ಅಭಿವ್ಯಕ್ತಿ ಸ್ವಾತಂತ್ರ್ಯದಿಂದ ಸದಾ ಬದಲಾವಣೆ ಸಾಧ್ಯ. ಸ್ವಾತಂತ್ರ್ಯ ಬಂದ ನಂತರ ಎಷ್ಟು ಬದಲಾವಣೆಗಳು ಸಾಧ್ಯ. ಟೀಕೆ, ವಿಮರ್ಶೆ ಮತ್ತು ಪ್ರಶ್ನೆಗಳು ಯಾವಾಗಲೂ ಪೂರಕವೆಂಬಂತೆ ಭಾವಿಸಿ ಅವುಗಳನ್ನು ಸ್ವಾಗತಿಸಬೇಕು.

ಒಂದೊಂದು ಸಲ ಯಶಸ್ಸು ವ್ಯಕ್ತಿತ್ವ ಮೀರಿ ದಕ್ಕಿಬಿಡುತ್ತದೆ.
ಆದರೆ ಅದರಿಂದ ನಾವು ವಿನಯವಂತ ಹಾಗೂ ವಿನಮ್ರ ಆಗಬೇಕೇ ಹೊರತು.

ನಿರಂಕುಶ ಪ್ರಭುತ್ವವಾದಿಗಳ ಹಾಗೆ ಅಲ್ಲ.

"ನಿನ್ನ ಟೀಕೆ ನನ್ನನ್ನು ಹೆಚ್ಚು ಕಾರ್ಯಶೀಲನನ್ನಾಗಿಸುತ್ತದೆ, ನಿನ್ನ ಮೌನ ನನ್ನ ಮೂಕನನ್ನಾಗಿಸುತ್ತದೆ." -ಗಾಂಧಿ (ಕೃಷ್ಣ ಶಾಸ್ತ್ರಿಗಳ ಬಗ್ಗೆ!)

ಈ ಸರಪಣಿಯನ್ನು ಸ್ವಾಗತಿಸುತ್ತೀರಿ ಎಂಬ ಆಸೆಯಿಂದ.

ಕನ್ನಡದವ,
ಡಾ.ಭಾರತಶ್ರೀ

💛❤️
You can follow @Bharatashree.
Tip: mention @twtextapp on a Twitter thread with the keyword “unroll” to get a link to it.

Latest Threads Unrolled: