ರೀ ಸ್ವಾಮೀ..ನಿಮ್ ಮನೆ ನಡೀತಿರೋದು ನೀವು ಸಾವಿರಕ್ಕಿಂತ ಹೆಚ್ಚು ದಾಸರ ಪದ ಹೇಳ್ತಿರಿ ಅನ್ನೋ ಕಾರಣಕ್ಕೆ ಅಲ್ಲ. ಅದು ನಡೀತಿರೋದು @Amara_Bengaluru, @ganeshchetan ಅಂತಹ ಅನೇಕರು ಸತತವಾಗಿ ೧೦-೧೫ ವರ್ಷಗಳು ನಡೆಸಿರುವ ಹೋರಾಟದಿಂದ. ಕನ್ನಡ ಕಾಮೆಂಟರಿ ಹುಟ್ಟಿಕೊಂಡಮೇಲೆ ನೀವು ಟ್ವಿಟ್ಟರ್ನಲ್ಲಿ, ಕಾಮೆಂಟರಿbox ನಲ್ಲಿ ಸಕ್ರಿಯರಾಗಿದ್ದೀರಿ. https://twitter.com/VijayRBharadwa1/status/1305191530328547329
ಅಮರ್, ಗಣೇಶ್, ಅರುಣ್, ಆನಂದ್, ವಸಂತ್ ಅಂತಹ ಅನೇಕಾನೇಕರು, #ಬನವಾಸಿ_ಬಳಗ, #ಕರವೇ ಮುಂತಾದವರು ಇಲ್ಲದಿದ್ದರೆ, ಇವತ್ತು ಕನ್ನಡ ಚಾನಲ್ಲೂ ಇರ್ತಿರ್ಲಿಲ್ಲ,ನಿಮ್ಮ ಕನ್ನಡ ಕಾಮೆಂಟರಿಗೆ ಮೂರ್ಕಾಸಿನ ಕಿಮ್ಮತ್ತೂ ಇರ್ತಿರ್ಲಿಲ್ಲ.ಅಷ್ಟೇ ಅಲ್ಲ...ಇವತ್ತಿಗೂ ನಿಮ್ಮ ಪ್ರತಿ ಟ್ವೀಟಿಗು,ಪೋಡ್ಕಾಸ್ಟಿಗೂ ಬೆನ್ನು ತಟ್ಟಿ , ಪ್ರೋತ್ಸಹಿಸುತ್ತಿರುವುದೂ ಇವರೇ!
ಇಂಥ ಮಹನೀಯರನ್ನೂ, ಇವರ ಕನ್ನಡ ಸೇವೆಯನ್ನೂ ಧಿಕ್ಕರಿಸಿ, ಯಾವುದೋ ರಾಜಕೀಯ ತತ್ವದ ತೆವಲಿಗೆ ಇವರನ್ನು ಹೀಯಾಳಿಸುವವರನ್ನ ನೀವು ಬೆಂಬಲಿಸುವುದೂ ಅಲ್ಲದೆ, ಅದನ್ನ ಪ್ರಶ್ನಿಸಿದವರಿಗೆ "ಚಮಡಿ" ಸುಲಿಯುವ ಹಾಗೆ ಉಗಿತಿನಿ ಅಂತ ಹೇಳಲಿಕ್ಕೆ ನಿಮಗೆ ಅದು ಹ್ಯಾಗೆ ಮನಸ್ಸು ಬಂತು ಸ್ವಾಮೀ?
ನಿಜವಾಗಿ ಹೇಳುವುದಾದರೆ ನಿಮ್ಮ ಮನೆ ನಡಿಯುತ್ತಿರುವುದು ಇಂತ 'ಓಲಾಟಗಾರ'ರಿಂದ ಮತ್ತು ಅವರ ನಿರಂತರ ಕನ್ನಡ ಸೇವೆಯಿಂದ. ಅವರು ಇದೇ ಟ್ವಿಟ್ಟರ್ನಲ್ಲಿ #ServeInMyLanguage ಅಂತ ನಡೆಸಿರುವ ಅಭಿಯಾನದಿಂದ. ಅಣ್ಣವರಾಗಿದ್ದರೆ ಇವರನ್ನು 'ಅಭಿಮಾನಿ ದೇವರುಗಳು' ಅಂತ ಕೊಂಡಾಡಿ ನಮಿಸುತ್ತಿದ್ದರು. ಇದು ಪ್ರಾಮಾಣಿಕರಾದವರೆಲ್ಲರಿಗೂ ತಿಳಿದಿರುವ ಸತ್ಯ.
ಇವರೂ ತಮ್ಮ ಬಿಡುವಿನಲ್ಲಿ, ನಿಮ್ಮಂತೆ ಕೂತು ದಾಸಶ್ರೇಷ್ಠರ,ವಚನಕಾರರ ಜ್ಞಾನದ,ಪದಪುಂಜದ ರಸದೌತಣವನ್ನ ಸವಿಯಬಹುದಿತ್ತು. ಅಥವಾ ತಮ್ಮ ಮಕ್ಕಳನ್ನ ಕನ್ನಡಕ್ಕೆ dub ಆಗದ Eng ಸಿನೆಮಾಗೆ ಕರೆದೊಯ್ಯಬಹುದಿತ್ತು.ಜಾಗತೀಕರಣದ ನೆಪವೊಡ್ಡಿ,ಅಸಹಾಯಕರಂತೆ ನಟಿಸಿ ತಮ್ಮ ಮಕ್ಕಳಿಗೆ ಇಂಗ್ಲಿಷ್ ಮಾಧ್ಯಮದಲ್ಲೇ ಹಿಂದಿ ಕಲಿಸಿ, ಕನ್ನಡದಿಂದ ದೂರವಿಡಬಹುದಿತ್ತು.
ಆದರೆ ಇವರು ತಮ್ಮ ಬಿಡುವಿನಲ್ಲಿ, ತಮ್ಮ ಖರ್ಚಿನಲ್ಲಿ, #ServeInMyLanguage, #StopHindiImposition, #ಡಬ್ಬಿಂಗ್_ಇದು_ಕನ್ನಡಪರ ಮುಂತಾದ ಹತ್ತು ಹಲವು ಅಭಿಯಾನಗಳನ್ನು ಹಮ್ಮಿಕೊಂಡು ಕನ್ನಡದಲ್ಲಿ, ಕನ್ನಡದಲ್ಲೂ, ಕನ್ನಡದಲ್ಲೇ ಸಕಲ ಸೇವೆಗಳು, ಸವಲತ್ತುಗಳೂ ದೊರೆಯಬೇಕು ಅಂತ ಹಗಲೂ ಇರುಳೂ ಶ್ರಮಿಸುತ್ತಿದ್ದಾರೆ.
ಒಂದು ಕಡೆ ಕನ್ನಡ ಹೋರಾಟ ಅಂದರೆ ಬರೇ ತಮಿಳರ ವಿರುದ್ಧ ಕತ್ತಿ ಮಸೆಯುವುದು ಅಂತ ಭಾವಿಸುವ ಮಂದಿ ಕೆಲರು. ಇನ್ನೊಂದು ಕಡೆ ಕನ್ನಡ ಹೋರಾಟ ಅಂದರೆ ಬರೀ ಕನ್ನಡ ಪುಸ್ತಕಗಳನ್ನ ತಿರುವು ಹಾಕಿ 'ವಚನ'ಗಳನ್ನೋ, 'ಪದ'ಗಳನ್ನೋ, 'ಕಗ್ಗ'ಗಳನ್ನೋ ಸವಿಯುವುದು, ಸಿಕ್ಕಲ್ಲೆಲ ಉದುರಿಸಿ, ಸ್ವ-ಪ್ರತಿಷ್ಠೆ ಮೆರೆಯುವುದು ಅಂತ ಭಾವಿಸುವವರು ಇನ್ನು ಕೆಲವರು.
(ಈ ಎರಡೂ ಗುಂಪುಗಳಿಂದ ಅಲ್ಪ-ಸ್ವಲ್ಪಾದರೂ ಉಪಕಾರಗಳು ಆಗಿಲ್ಲ ಅಂತ ಹೇಳುವುದು ಸುಳ್ಳಾಗಬಹುದು. ಆದರೆ ಒಂದು ಮಾತಂತೂ ಸತ್ಯ - ಈ ಎರಡೂ ಗುಂಪುಗಳಿಂದ ಶಾಶ್ವತವಾಗಿ, ಅಥವಾ ದೀರ್ಘಕಾಲಕ್ಕೆ ಉಳಿಯುವಂತ ಯಾವ ಪ್ರಯೋಜನವು ಆಗಿಲ್ಲ. ಆಗುವುದೂ ಇಲ್ಲ).
ಕನ್ನಡ ಹೋರಾಟಕ್ಕೆ ಹೊಸ ಅರ್ಥ ತಂದು ಕೊಟ್ಟವರೇ ಇಂದಿನ ನಿಮ್ಮ 'ಓಲಾಟಗಾರರು'. ಕನ್ನಡ ಹೋರಾಟ ಎಂದರೆ ಬರಿ ತಮಿಳ್ ದ್ವೇಷವೂ ಅಲ್ಲ, ಅಥವಾ ಬರೀ ಸಾಹಿತ್ಯ ಪ್ರೇಮವೂ ಅಲ್ಲ, ಆದರೆ ಅದಕ್ಕಿಂತ ಮಿಗಿಲಾಗಿ ಪ್ರತಿಯೊಬ್ಬ ಕನ್ನಡ ಪ್ರಜೆ ತನ್ನ ಕಾಲ ಮೇಲೆ ತಾನು ನಿಂತು,ಯಾರ ಹಂಗೂ ಇಲ್ಲದೆ, ತನ್ನ ಭಾಷೆಯಲ್ಲೇ ತನ್ನ ಜೀವನವನ್ನು ಕಟ್ಟಿಕೊಳ್ಳುವಂತೆ ಆಗಬೇಕು..
....ಮತ್ತು ಅದಕ್ಕೆ ಬೇಕಾಗುವ ಸಕಲ ಸೌಕರ್ಯ-ಸವಲತ್ತುಗಳು ಕನ್ನಡದಲ್ಲೇ ದೊರೆಯತಕ್ಕದ್ದು ಅಂತ ಪ್ರತಿಪಾದಿಸುವ ತತ್ವ. ಇದೇ ತತ್ವಗಳನ್ನು ಕುವೆಂಪು, #DVG, ತೇಜಸ್ವಿ, ಅನಕೃ ಅಂತಹ ಹಿರಿಯರೂ ಸಾರಿದ್ದರು. ಅವರ ವಾದಗಳನ್ನು, ತತ್ವಗಳನ್ನು, ಶ್ರಮವನ್ನು ಇವತ್ತು ಕಾರ್ಯರೂಪಕ್ಕೆ ತರುತ್ತಿರುವುದು, ನೀವು ಮೂದಲಿಸುತ್ತಿರುವ 'ಓಲಾಟಗಾರ'ರೇ ಸ್ವಾಮೀ!
ಒಂದು ಮಾತು ತಿಳಿದಿರಲಿ. ಕನ್ನಡ ಪ್ರೇಮವೆಂದರೆ ಕೇವಲ ಕನ್ನಡ ಸಾಹಿತ್ಯ ಅಲ್ಲ. ಒಬ್ಬ *ನಿರಕ್ಷರಸ್ಥ* ಕೂಡ ದೊಡ್ಡ ಕನ್ನಡ ಅಭಿಮಾನಿ ಆಗಬಲ್ಲ. ಒಂದು ವಿಧದಲ್ಲಿ ನಿರಕ್ಷರಸ್ತರೇ ಎಲ್ಲರಿಗಿಂತ ಮಿಗಿಲಾದ ಕನ್ನಡಾಭಿಮಾನಿಗಳು. ಯಾಕೆ ಅಂದರೆ, ಅವರಿಗೆ ತಿಳಿದಿರುವುದೊಂದೇ ಒಂದು - ಅದು ಕನ್ನಡದಲ್ಲಿ ಮಾತಾನಾಡುವುದು, ವ್ಯವಹರಿಸುವುದು.
ಅದರಿಂದಲೇ ಅವರ ಹೊಟ್ಟೆ ತುಂಬಬೇಕು. ಮನೆ ನಡಿಬೇಕು. ಅಂತವರಿಗೆ ಸಕಲ ಸರ್ವ ಸೇವೆಗಳೂ ಕನ್ನಡದಲ್ಲಿ ದೊರೆಯಬೇಕು. ಇದು ಸರ್ಕಾರದ ಕರ್ತವ್ಯ. ಆದರೆ ಇವತ್ತು ಹಿಂದಿ ಹೇರಿಕೆಯಿಂದಾಗಿ, ಕನ್ನಡ ಮೂಲೆಗುಂಪಾಗಿದೆ. ಕನ್ನಡಿಗರು, ಅದರಲ್ಲೂ ಕನ್ನಡ ಮಾತ್ರ ತಿಳಿದವರು ಎರಡನೇ ದರ್ಜೆಯ ಪ್ರಜೆಗಳಂತೆ ಜೀವನ ನಡೆಸುವಂತಾಗಿದೆ.
ಬ್ಯಾಂಕ್ ಗಳಲ್ಲಿ ಕನ್ನಡ ಬೇಕು ಅಂದರೆ ಹೋರಾಟ ಮಾಡಬೇಕು. ರೈಲ್ವೆ ಟಿಕೆಟ್ ಕನ್ನಡದಲ್ಲಿ ಬೇಕು ಅಂದರೆ ಹೋರಾಟ ಮಾಡಬೇಕು.ಕಡೆಗೆ ಒಂದು ಕ್ರಿಕೆಟ್ ಕಾಮೆಂಟರಿ ಕನ್ನಡದಲ್ಲಿ ಬೇಕು ಅಂದರೆ ಅದಕ್ಕೂ ದೊಡ್ಡ ಅಭಿಯಾನ ನಡೆಸಬೇಕು.ಇದು ಯಾವ ನ್ಯಾಯ ಸ್ವಾಮಿ?ಇದನ್ನು ಪ್ರಶ್ನಿಸುವುದು,ಈ ಅನ್ಯಾಯದ ವಿರುದ್ಧ ಹೋರಾಡುವುದು ತಪ್ಪಾ? ಇಂತವರು 'ಓಲಾಟಗಾರರಾ'?!
ಯಾವ ಸೌಕರ್ಯಗಳು ಸಹಜವಾಗಿ, ನಿರಾಯಾಸವಾಗಿ ನಮ್ಮದಾಗಬೇಕೋ, ಯಾವು ನಮ್ಮಜನ್ಮ ಸಿದ್ಧ ಹಾಕ್ಕೋ... ಅವೆಲ್ಲಕ್ಕೂ ದೊಡ್ಡ ದೊಡ್ಡ ಹೋರಾಟಗಳನ್ನೇ ಮಾಡಿ ದಕ್ಕಿಸಿಕೊಳ್ಳುವಂತ ಹೀನಾಯ ಪರಿಸ್ಥಿತಿ ಇದೆ ಇವತ್ತು.
ಈ ಪರಿಸ್ಥಿತಿಯನ್ನು ಪ್ರಶ್ನಿಸುವುದು, ಪರಿಹರಿಸುವುದು, ನ್ಯಾಯ ಒದಗಿಸುವುದು,ಅಕ್ಷರಸ್ಥರು,ಪ್ರಜ್ಞಾವಂತರು,ನಾಗರೀಕರು,ತಿಳಿದವರು, ಸ್ಥಿತಿವಂತರು ಅಂತ ಅನ್ನಿಸಿಕೊಂಡ ನಾವು, ನೀವು ಮತ್ತು ಎಲ್ಲ ಕನ್ನಡಿಗರು. ಈ ಗಂಭೀರ ಸತ್ಯಗಳನ್ನು ಅರಿತು,ಸ್ವಲ್ಪ ಅಳೆದು ತೂಗಿ ಮಾತನಾಡಿ. ನಿಮ್ಮ ಮೇಲೆ ಯಾರಿಗೂ ದ್ವೇಷವಿಲ್ಲ. ಎಲ್ಲ ಕನ್ನಡಿಗರೂ ನಮ್ಮ ಬಾಂಧವರೇ.
ಆದರೇ ಯಾವುದೋ ರಾಜಕೀಯ ಪಕ್ಷದ್ದೋ, ತತ್ವದ್ದೋ ತೆವಲಿಗೆ, ಮತ್ಯಾವುದೋ ಕಾರಣಕ್ಕೆ, ಕನ್ನಡಕ್ಕೆ ಧಕ್ಕೆ ತರುವಂತ ಕೆಲಸಕ್ಕೆ ಯಾರೂ ಇಳಿಯಬಾರದು. ನೀವೂ ಕೈ ಜೋಡಿಸಿ. ಕೈ ಕಟ್ಟಿ ಕೂರಬೇಡಿ. ಕೈ ಚೆಲ್ಲಿ ಕೂರಬೇಡಿ. ಕನ್ನಡಕ್ಕೆ ಸಲ್ಲಬೇಕಾದ ಸ್ಥಾನ-ಮಾನಗಳು ದೊರೆಯದಿದ್ದರೆ ಅದನ್ನು ನಿರ್ದಾಕ್ಷಿಣ್ಯವಾಗಿ ಪ್ರಶ್ನಿಸಿ. ಹಕ್ಕೊತ್ತಾಯಿಸಿ.
ಅದು ನಿಮಗೂ ಒಳ್ಳೇದು. ನಮಗೂ ಒಳ್ಳೇದು. ದೇಶಪ್ರೇಮದ, ಹಿಂದೂ ಧರ್ಮದ ಗುತ್ತಿಗೆ ತೆಗೆದುಕೊಂಡವರಂತೆ ಓಲಾಡೋ ಎರಡು ರುಪಾಯೀ ಭಕ್ತರಿಗೂ ಒಳ್ಳೇದು. ಸಮಾಜ ಸುಧಾರಣೆಯ, ದೀನ ದಲಿತರ ಉದ್ಧಾರದ ಗುತ್ತಿಗೆ ತೆಗೆದುಕೊಂಡವರಂತೆ ಪೋಸ್ ಕೊಡುವ 'ಎಡಪಂತೀ'ಯರಿಗೂ ಒಳ್ಳೆಯದು.
ಕನ್ನಡವಿದ್ದರೆ ದಾಸರು. ಕನ್ನಡವಿದ್ದರೆ ವಚನಕಾರರು. ಕನ್ನಡವಿಲ್ಲದೆ, ಕನ್ನಡಿಗರಿಲ್ಲದೆ ಅವರ ತತ್ವಗಳನ್ನ ವಿಶ್ವಕ್ಕೆ ಸಾರುವ ವಾರಸುದಾರರೇ ಇಲ್ಲವಂತಾಗುತ್ತದೆ. ಕನ್ನಡವಿಲ್ಲದೆ ಭಾರತವೂ ಇಲ್ಲ. ಹಿಂದೂ ಧರ್ಮವು ಇಲ್ಲ. ಎರಡೂ ಸುಟ್ಟು ಬೂದಿ ಆಗುತ್ತದೆ. ಎಚ್ಚರವಿರಲಿ.
You can follow @spccmvjc.
Tip: mention @twtextapp on a Twitter thread with the keyword “unroll” to get a link to it.

Latest Threads Unrolled: