Thread on "ಮುಮ್ಮಡಿ ಕೃಷ್ಣರಾಜ ಒಡೆಯರ್"🙏🏻

ಮೈಸೂರು ಅರಸರ ಸಾಲಿನಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರು ಅಗ್ರಗಣ್ಯರು.
ಕರ್ನಾಟಕದ ಸಾಂಸ್ಕೃತಿಕ ಲೋಕಕ್ಕೆ ಅವರ ಕೊಡುಗೆ ಅತ್ಯುನ್ನತವಾದುದು. ಆದ್ದರಿಂದ ಅವರನ್ನು "ಕನ್ನಡ ಭೋಜರಾಜ" ನೆಂಬ ಬಿರುದಿನಿಂದ ಗೌರವಿಸಲಾಯಿತು.
ಮು. ಕೃ. ಒಡೆಯರ್ ಹುಟ್ಟಿದಾಗ ತಂದೆ ಚಾಮರಾಜ ಒಡೆಯರ್ ರಾಜ್ಯಾಧಿಕಾರ ಕಳೆದುಕೊಂಡಿದ್ದರು. ಬಾಣಂತಿ ತಾಯಿ ಕೆಂಪನಂಜಮ್ಮಣ್ಣಿ ಕೆಲ ತಿಂಗಳಲ್ಲೇ ಮೃತರಾದರು. ಎರಡು ವರ್ಷ ನಂತರ ತಂದೆ ಕೂಡ ಸಿಡುಬು ರೋಗದಿಂದ ದೈವಾಧೀನರಾದರು. ಕೃಷ್ಣರಾಜರ ಒಡೆಯರನ್ನು ಸಾಕಿದ್ದು ಅಜ್ಜಿ ಲಕ್ಷ್ಮಮ್ಮಣ್ಣಿ.
ಟಿಪ್ಪುವಿನ ಮರಣಾನಂತರ ಬ್ರಿಟಿಷ್‌ರೊಂದಿಗೆ ರಾಜಮಾತೆ ಒಪ್ಪಂದ ಮಾಡಿಕೊಂಡಿದ್ದರಿಂದ ಮತ್ತೆ ರಾಜ್ಯಾಧಿಕಾರ ಇವರಿಗೆ ದೊರೆಯಿತು. ಕೇವಲ ಐದು ವರ್ಷದಲ್ಲಿರುವಾಗಲೇ ಕೃ. ಒಡೆಯರ್ ಸಿಂಹಾಸನವನ್ನೇರಿದರು. ಸಭೆಯಲ್ಲಿ ನಡೆಯುವ ಮಾತು ಮತ್ತು ವಿಚಾರಗಳುಯಾವುದೂ ಅರ್ಥವಾಗದ ಸ್ಥಿತಿಯಲ್ಲಿ ಅಂದು ಪಟ್ಟಾಭಿಷೇಕವೂ ನೆರವೇರಿತು.
ಅಜ್ಜಿ ರಾಜಮಾತೆಯ ಪ್ರೀತಿ ವಾತ್ಸಲ್ಯದಲ್ಲಿ ಬೆಳೆದ ಒಡೆಯರ್ ಜೊತೆಗೆ ರಾಜ್ಯಾಧಿಕಾರದ ರೀತಿ ರಿವಾಜು ಕಲಿಯುತ್ತಾ ಕಲಿಯುತ್ತಿರುವಾಗಲೇ, 16 ನೇ ವಯಸ್ಸಿನಲ್ಲಿ ಅಜ್ಜಿಯನ್ನು ಕಳೆದುಕೊಂಡು ಪರಿತಪಿಸಿದರು.
ಹದಿಹರೆಯದ ವಯಸ್ಸಿನಲ್ಲಿ ಯಾರನ್ನು ನಂಬಬೇಕು, ಯಾರನ್ನು ಬಿಡಬೇಕೆಂಬ ಗೊಂದಲದಲ್ಲೆ ರಾಜ್ಯಾಡಳಿತ ನಡೆಸುವಂತಾಯಿತು.
ಆಗಿನ ದಿವಾನರಾಗಿದ್ದವರು ವ್ಯವಹಾರದಲ್ಲಿ ಸಣ್ಣಪುಟ್ಟ ತಪ್ಪುಗಳನ್ನು ಮಾಡಿದ್ದರೂ, ಮಾನವೀಯತೆ ದೃಷ್ಟಿಯಿಂದ ಸನ್ಮಾನಿಸಿ ಬಿಳ್ಕೊಟ್ಟರು.
ಪೂರ್ಣಯ್ಯನವರ ನಂತರದಲ್ಲಿ ಅನೇಕ ದಿವಾನರು ಬಂದುಹೋದರು. ಆ ಅವಧಿಯಲ್ಲಿ ಆರ್ಥಿಕ ಸ್ಥಿತಿ ತುಂಬಾ ಕ್ಷೀಣಿಸುವ ಹಂತದಲ್ಲಿತ್ತು. ವರ್ಷದಿಂದ ವರ್ಷಕ್ಕೆ ಬೊಕ್ಕಸಕ್ಕೆ ಬರುವ ಆದಾಯ ಕಡಿಮೆಯಾಗಿ ಬ್ರಿಟಿಷ್ ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಬೇಕಾಯಿತು.
ಬರಗಾಲ, ವ್ಯವಸಾಯ ಯೋಗ್ಯ ಭೂಮಿ ಕೊರತೆಯಿಂದಾಗಿ ಹೆಚ್ಚಿನ ಕರ ನೀಡಲು ನಿರಾಕರಿಸಿದ ರೈತರು ಮಹಾರಾಜರ ವಿರುದ್ಧ ದಂಗೆ ಏಳುವ ಪರಿಸ್ಥಿತಿಯೂ ಉದ್ಭವಿಸಿತು.ದಂಗೆ ಅಜ್ಜಂಪುರ, ಹೊನ್ನಾಳಿ, ಶಿಕಾರಿಪುರ, ಅನವಟ್ಟಿ, ಚೆನ್ನಗಿರಿ, ಬಸವಾಪಟ್ಟಣ, ಹರಿಹರ, ಚಿಕ್ಕಮಗಳೂರು ಮತ್ತು ಕಡೂರುಗಳಲ್ಲಿ ಕಾಣಿಸಿಕೊಂಡಿತು.
ಒಡೆಯರ್ ಬ್ರಿಟಿಷರ ಸಹಾಯ ಕೋರಿದಾಗ ಬ್ರಿಟಿಷರು ದಂಗೆಯೆದ್ದ ಜನರನ್ನು ನಿಗ್ರಹಿಸಿದರು. ಹಾಗೆ ಬ್ರಿಟಿಷರ ದುಷ್ಟಬುದ್ಧಿ ಮಹಾರಾಜರ ಆಡಳಿತವನ್ನು ಕಬಳಿಸಿತು. ನಂತರದ ದಿನಗಳಲ್ಲಿ ಅಲ್ಲಿ ಕಮಿಷನರ್ ಆಳ್ವಿಕೆ ಜಾರಿಗೊಳಿಸಲಾಯಿತು.
ನಂತರ ಸುಮಾರು 37 ವರ್ಷ ಕಾಲ, ತಮ್ಮ ಜೀವಿತಾವಧಿವರೆಗೂ ಸ್ವಾತಂತ್ರ್ಯಕ್ಕಾಗಿ ನ್ಯಾಯಯುತ ಹೋರಾಟ ನಡೆಸಿದ ರೀತಿ ಮನನೀಯ. ಇದಕ್ಕಾಗಿ ಚಾಣಾಕ್ಷ ರಾಜ ತಾಂತ್ರಿಕತೆ ಹೆಣೆಯಲು ಭಾರತದಲ್ಲಿರುವ ಬ್ರಿಟಿಷ್ ಅಧಿಕಾರಿ ಸಮೂಹದಿಂದ ಹಿಡಿದು ಲಂಡನ್‌ನ ರಾಣಿ ವಿಕ್ಟೋರಿಯಾ ಆಪ್ತ ವಲಯದವರೆಗೂ ಸ್ನೇಹ ಸಂಪಾದಿಸಿದ್ದರು.
ಗಂಡು ಮಕ್ಕಳಿಲ್ಲದ ಮುಮ್ಮಡಿ ಕೃಷ್ಣರಾಜ ಒಡೆಯರ್ ತಮ್ಮ ಹತ್ತಿರದ ಸಂಬಂಧಿ (ಚಿಕ್ಕಕೃಷ್ಣ ಅರಸರ ಮಗ) ಚಾಮರಾಜೇಂದ್ರ ಒಡೆಯರ್ ಅವರನ್ನು ದತ್ತು ಸ್ವೀಕರಿಸಲು ಸಹ ಬ್ರಿಟೀಷರು ಅನುಮತಿ ನೀಡಲಿಲ್ಲ. ಬ್ರಿಟಿಷ್ ಅಧಿಕಾರಿಗಳ ವಿರೋಧದ ನಡುವೆಯೂ ಎರಡು ವರ್ಷ ಆರು ತಿಂಗಳ ವಯಸ್ಸಿನ ಚಾಮರಾಜೇಂದ್ರ ಒಡೆಯರನ್ನು ದತ್ತುಪುತ್ರನಾಗಿ ಸ್ವೀಕರಿಸಿದರು.
ಸುಮಾರು 37 ವರ್ಷ ಕಾಲ ಸ್ವಾತಂತ್ರ್ಯಕ್ಕೆ ಹಂಬಲಿಸಿ ಸಾತ್ವಿಕ ಹೋರಾಟ ನಡೆಸಿದ ಮುಮ್ಮಡಿ ಕೃಷ್ಣರಾಜ ಒಡೆಯರ್ ಕೊನೆಗೂ ಅಧಿಕಾರದ ಸವಿ ಕಾಣದೆ ಕಣ್ಮುಚ್ಚಿದರು. ಆದರೆ ಅವರು ಹಚ್ಚಿದ ಸ್ವಾತಂತ್ರ್ಯದ ದೀಪ ಕೆಲವರ್ಷಗಳಲ್ಲೆ ಪ್ರಜ್ವಲವಾಗಿ ಬೆಳಗಿ ದತ್ತುಪುತ್ರ 10ನೇ ಚಾಮರಾಜೇಂದ್ರ ಒಡೆಯರ್‌ ಅವರಿಗೆ ಬ್ರಿಟಿಷರಿಂದ ಮತ್ತೆ ಅಧಿಕಾರ ದೊರೆಯಿತು.
ಚಿತ್ರಸಹಿತ ಕನ್ನಡದ ಅನುವಾದಉಳ್ಳ ತತ್ವನಿಧಿಯ 9 ಸಂಪುಟ,ಅಖಂಡ ಕಾವೇರಿ ಮಹಾತ್ಮೆ,ಅಧ್ಯಾತ್ಮ ರಾಮಾಯಣ,ಉತ್ತರರಾಮ ಚರಿತ್ರೆ,ಉಷಾಪರಿಣಯ,ಕಾಶಿಕಾಂಡ,ಕೃಷ್ಣಕಥಾ ಸಾರ ಸಂಗ್ರಹ,ಜೈಮಿನಿ ಭಾರತದ ಅಶ್ವಮೇಧಿಕ ಪರ್ವದ ಟೀಕೆ,ಬೇತಾಳ ಪಂಚವಿಂಶತಿ,ಸೌಗಂಧಿಕ ಪರಿಣಯ,ರತ್ನಾವಳಿ ಅಥವಾ ವತ್ಸರಾಜನ ಕಥೆ ಸೇರಿದಂತೆ 58 ಕೃತಿಗಳನ್ನ ಮು. ಕೃ. ಒಡೆಯರ್ ರಚಿಸಿದ್ದಾರೆ.
ಆಡಳಿತ ತುಂಬಾ ಜನಪರವಾಗಿತ್ತು.ಅವರ ಕಾಲದಲ್ಲಿಯೇ ಮೈಸೂರು ನಗರದಲ್ಲಿ ಪ್ರಥಮವಾಗಿ ಸಾರ್ವಜನಿಕ ಉಚಿತ ವೈದ್ಯಶಾಲೆಗಳು ಆರಂಭವಾದವು.ಆಂಗ್ಲ ವಿದ್ಯಾಭ್ಯಾಸಕ್ಕಾಗಿ ಶಾಲೆಗಳು ಆರಂಭವಾದವು. ಶಿವನಸಮುದ್ರದ ಬಳಿ ಕಾವೇರಿ ನದಿಗೆ ಸೇತುವೆ ನಿರ್ಮಾಣವಾಯಿತು. ನಗರದಲ್ಲಿ ಅನೇಕ ಹೊಸ ಬಡಾವಣೆಗಳು ತಲೆ ಎತ್ತಿದವು .ಸಾಹಿತ್ಯಕ್ಷೇತ್ರಕ್ಕೆ ಅವರ ಸೇವೆ ಅತ್ಯಂತ ಗಣನೀಯ
You can follow @mebhargav.
Tip: mention @twtextapp on a Twitter thread with the keyword “unroll” to get a link to it.

Latest Threads Unrolled: