Covid ಕಥೆಗಳು
ಎಲ್ಲೋ,ಚೈನಾ ಅಲ್ಲಿ ಬಂದಿದ್ಯಂತೆ,ನಮ್ಗೆ ಬರಲ್ವಂತೆ, ನಮ್ ದೇಶ ಸೇಫ್ ಅಂತ ಹೇಳ್ಕೊಂಡು ಆರಾಮಾಗಿ ಜೀವನ ನಡೀತಾ ಇತ್ತು!
ಒಂದೆರಡು ತಿಂಗಳಿಗೆ ನಮ್ಗೂ ಇದರ ಕಾಟ ಶುರು ಆಯ್ತು,ಚೈತ್ರ,ವೈಶಾಕ,ಜ್ಯೇಷ್ಠ ಮಾಸಕ್ಕೆ ಇದ್ದ ಎಷ್ಟೋ ಸಮಾರಂಭಗಳಿಗೆ ದೊಡ್ಡ ಪೆಟ್ಟು ಬಿತ್ತು, ಎಚ್ಚರಿಕೆ,ಮುನ್ನೆಚ್ಚರಿಕೆ ಸ್ಟೇಜ್ ಹೋಗಿ ಲಾಕ್ಡೌನ್ ಬಂದೇ ಬಿಡ್ತು

ಭಯ ಆತಂಕ 4-5 ದಿನ ಮನೆ ಬಿಟ್ಟು ಆಚೆ ಬರದ ಹಾಗೆ ಇದ್ದಿದ್ದು ಉಂಟು !
ಹೊಸ ಸಮಸ್ಯೆಗಳು ಶುರು ! ನಮ್ಮ ಹಿರಿಯರು ಮಾರ್ಗದರ್ಶಿಗಳು ನಮ್ಮ ಮೇಲೆ ನಂಬಿಕೆ ಇಟ್ಟು ಕೆಲವು ಜವಾಬ್ದಾರಿಗಳನ್ನ ಕೊಟ್ಟಾಯ್ತು, ಮನೇಲಿ ಇರೋದ ಹೊರಗೆ ಬರೋದ ?
"Duty calls" ಅನ್ನೋ ತರ ಶುರು ಆಯ್ತು ನಮ್ ಕೆಲ್ಸಾ,ಇಂತಾ ಪರಿಸ್ಥಿತಿ ಅಲ್ಲಿ ನಮ್ಮ ಒಳ್ಳೆ ಟೀಂ ನಮ್ಗೆ ಧೈರ್ಯ .

ಟೀಂ ಕೆಲ್ಸಾ ಮಾಡಕ್ಕೆ ರೆಡಿ ಆದ್ರೆ ಮನೆಯಲ್ಲಿ "ಸಣ್ಣ ಮಕ್ಕಳು,ವಯಸ್ಸಾಗಿರೋರು,ಅಸ್ತಮ ಇನ್ನಷ್ಟು ಕಾಯಿಲೆಗಳ ಸಮಸ್ಯೆ" ಸ್ವಯಂಸೇವಕರ ಧರ್ಮಸಂಕಟ ಕೇಳೋರು ಯಾರು ? ಇದೆಲ್ಲಾ ಲೆಕ್ಕಿಸದೆ ಕೆಲ್ಸಾ ಮಾಡಲು ಮುಂದಾಗಿದ್ದು ಸಂತಸದ ಸುದ್ದಿ. ದೇವ್ರು,ಸ್ಯಾನಿಟೈಸರ್ ಮತ್ತೆ ಮಾಸ್ಕ್ ಮೇಲೆ ಭಾರ ಹಾಕಿ MLA, Corporator ಮಾರ್ಗದರ್ಶನದಲ್ಲಿ ಕೆಲ್ಸಾ ಶುರು.
ಮಾಧ್ಯಮದ ಸುದ್ದಿ,ಜನರ ಮಾತುಗಳು ಇದೆಲ್ಲದರ ನಡುವೆ ಹೊರ ರಾಜ್ಯದ/ಜಿಲ್ಲೆಯ ಕಾರ್ಮಿಕರನ್ನು ಗುರುತಿಸಿ ಮೊದಲನೆಯ ಕಂತಿನ ದಿನಸಿ ಪದಾರ್ಥಗಳನ್ನು ಹಂಚಲಾಯಿತು,ಹತ್ತಾರು ಬಾರಿ sanitizer,ದಿನ ಪೂರ್ತಿ mask,ಎರಡು ಮೂರು ಬಾರಿ ಸ್ನಾನ,ಮನೆ ಮಕ್ಕಳು, ವೃದ್ದರಿಂದ ಅಂತರ ಇಷ್ಟೆಲ್ಲಾ ರಿಸ್ಕ್ ಅಲ್ಲಿ ಕೆಲ್ಸಾ ಮಾಡಿದ್ರೂ ಮನಸ್ಸಿಗೆ ಸ್ವಲ್ಪ ಸಮಾಧಾನ.
ದಿನಸಿ ಜೊತೆ CM,Mayor ನಿರ್ಧಾರದಂತೆ ಉಚಿತ ಹಾಲು,ಮೂರು ಬಾರಿ ಊಟದ ಪೊಟ್ಟಣಗಳು ಹಂಚುವ ಹೊಸ ಜವಾಬ್ದಾರಿ ! ದಿನೇ ದಿನೆ ಜನರ ಮಧ್ಯೆ ಹೋಗುವುದು ಜಾಸ್ತಿ ಆಯ್ತು,ನಿಲ್ಲಿಸ ಬೇಕು/ಬೇಡ ಅನ್ನೋ ವಾದಗಳು,ಒಂದು ತಿಂಗಳ ಕಾಲ ಈ ಕೆಲಸವನ್ನ ಕೂಡ ಶಿಸ್ತಿನಿಂದ ನೆರವೇರಿಸಿದರು ನಮ್ಮ ಟೀಂ ನವರು.ಸಾವಿರಾರು ಲೀಟರ್ ಹಾಲು ಊಟದ ಪೊಟ್ಟಣಗಳು ಹಂಚಿದ್ದು ಪುಣ್ಯ

"ಎರಡನೇ ಕಂತಿಗೆ ರಾಜಕೀಯ ತಿರುವು" SM ರೀತೀಲಿ ರಾಜಕೀಯ ಮಾಡೋದು,ಎತ್ತಿಕಟ್ಟೋಡು ಎಲ್ಲವೂ ನೋಡೋ ಸಮಯ ಬಂತು.ವಲಸಿಗರು vs ನಾವು,ಅವ್ರು ಮಾತ್ರ ಮುಖ್ಯಾನ ? ನಾವು ಬೇಡ್ವಾ ? ಇರ್ಲಿ ನಮ್ಗೂ ಸಮಯ ಬರುತ್ತೆ, ಎಲೆಕ್ಷನ್ ಬರುತ್ತೆ ! ಕೆಲವು ವ್ಯಕ್ತಿಗಳು ಈ ರೀತಿಯ ಸಂಚು ಪಿತೂರಿಗಳನ್ನು ಕೂಡ ಮಾಡಿದ್ದು ಉಂಟು.ಇವೆಲ್ಲಾ ನಿಭಾಯಿಸ್ತಾ ಕೆಲ್ಸಾ ಮುಂದುವರೀತು
ಇಂಗ್ಲೆಂಡಿಂದ ಸಹೋದರನ ಮದುವೆ ಕಾರ್ಯಕ್ಕೆ ಬಂದ @KrishnamurthyVK ಇಲ್ಲಿ ವಲಸಿಗರ ಸಹಾಯಕ್ಕೆ ಬಂದರು, 70 ದಿನಗಳ ಕಾಲ ಸುಮಾರು 360 ಜನಕ್ಕೆ ಹಾಲು, ಊಟ,ದಿನಸಿ ವ್ಯವಸ್ಥೆ ಮಾಡಿ ಕೊಟ್ಟು,ಅವರನ್ನು ಶ್ರಮಿಕ್ ಎಕ್ಸ್ಪ್ರೆಸ್ ಮುಖೇನ ಊರಿಗೆ ಕಳುಹಿಸಿಕೊಟ್ಟರು. ನಮ್ಮ ಶಾಸಕರು ಮತ್ತೆ ಕಾರ್ಪೊರೇಟರ್ ಅವರ ಸಹಾಯ ಮರೆಯಬಾರದು

ಜವಾಬ್ದಾರಿ ತೆಗೆದುಕೊಂಡು ನಾಲ್ಕು ಜನಕ್ಕೆ ಸಹಾಯಮಾಡಬೇಕಾದ ಜನ ಬಂದು ಸರ್ಕಾರ ಕೊಟ್ಟ ಹಾಲು ದಿನಸಿಗೆ ಬಂದು ಸಾಲಲ್ಲಿ ನಿಂತಿದ್ದು, ಅವ್ರಿಗೆ ಬೇಕಾದವರಿಗೆ ಕೊಡಿ,ಏಕೆ ಕೊಟ್ಟಿಲ್ಲ ಅಂತ ಪ್ರಶ್ನಿಸಿದ್ದು,ಗಲಾಟೆ ಮಾಡಿದ್ದು ರಾಜಕೀಯ "Scope"ತಗೊಂಡಿದ್ದು ಕೂಡ ನಡೆದಿದೆ. ಈ ಜನರಿಗೆ ಮುನುಷ್ಯತ್ವ ಇದಿಯ ಅನ್ನೋ ಅನುಮಾನ ! ಆದ್ರೆ ಸೇವೆ ಮುಂದುವರಿಯಬೇಕು
ಕೆಲವರಿಗೆ ಎಷ್ಟು ಬಾರಿ ಕಿಟ್ಗಳು ಕೊಟ್ಟರು ಕೊಟ್ಟಿಲ್ಲ ಅಂತ ಸುಳ್ಳು,ಬೇರೆ ಬೇರೆ ನಂಬರ್ನಿಂದ ಫೋನ್ ಮಾಡೋದು,ಶಾಸಕರ ಕಚೇರಿಗೆ ದೂರು ಕೊಡುವುದು,ಟಿವಿ ಚಾನೆಲ್ಗೆ ಫೋನ್ ಮಾಡೋದು !
ಇನ್ನು ಕೆಲವರು ನಮಗೆ ಕೊಟ್ಟಿರೋ ರೇಷನ್ ಸಾಕು ಬೇರೆ ಯಾರಾದ್ರೂ ಕಷ್ಟದಲ್ಲಿದ್ದರೆ ಅವ್ರಿಗೆ ಕೊಡಿ ಅಂತ ಹೇಳಿದ್ದು ಇದೆ.
ಇನ್ನು ಕೆಲವರು ನಮಗೆ ಕೊಟ್ಟಿರೋ ರೇಷನ್ ಸಾಕು ಬೇರೆ ಯಾರಾದ್ರೂ ಕಷ್ಟದಲ್ಲಿದ್ದರೆ ಅವ್ರಿಗೆ ಕೊಡಿ ಅಂತ ಹೇಳಿದ್ದು ಇದೆ.
3-4 ಬಾರಿ ಫುಡ್ ಕಿಟ್ಗಳನ್ನ ಹಂಚಿ ನಂತರ ನಮ್ಮ ಬಿಬಿಎಂಪಿ ವಾರ್ಡ್ ಆರಕ್ಷಕರು,ಆಶಾ ಕಾರ್ಯಕರ್ತೆಯರ, ಬಿಬಿಎಂಪಿ ಸಿಬ್ಬಂದಿ ಎಲ್ಲರಿಗೂ "ಕೊರೋನ ವಾರಿಯರ್ಸ್" ಅಂತ ಹೇಳಿ ಗೌರವ ವಂದನೆ ನೀಡಿದ್ದು ಸಂತಸದ ವಿಷಯ. ಲಾಕ್ ಡೌನ್ ಸಡಿಲವಾಯಿತು ಹೊರ ಜಿಲ್ಲೆ/ ರಾಜ್ಯದವರನ್ನ ತಮ್ಮ ತಮ್ಮ ಊರಿಗೆ ಕಳುಹಿಸೋ ಜವಾಬ್ದಾರಿ ಬಾಕಿ ಇತ್ತು.
@narendramodi @PiyushGoyal @BSYBJP ಶ್ರಮಿಕ್ ಎಕ್ಸ್ಪ್ರೆಸ್ ಶುರು ಆಯಿತು, "Seva Sindhu" app ಸ್ಥಳೀಯ ಪೊಲೀಸ್ ಸಿಬ್ಬಂದಿಯ ಸಹಾಯದಿಂದ ಒಬ್ಬೊಬ್ಬರನ್ನೇ ಅವರ ಊರಿಗೆ ಕಳುಹಿಸಿ ಕೊಡೋ ಕಾರ್ಯ ಶುರು ಆಯಿತು, ಅವರು ಟ್ರೈನ್ ಹತ್ತಿದ ಮೇಲೆ ಅವರು ಕಳುಹಿಸೋ ಫೋಟೋ ಊರಿಗೆ ತಲುಪಿದ ಮೇಲೆ ಕಳುಹಿಸೋ ಸಂದೇಶಗಳು ಮನಸ್ಸಿಗೆ ತೃಪ್ತಿ ಕೊಡುತ್ತೆ

@RSSorg ಮತ್ತು @HSGAURAV3 ಅವರ ಸೇವೆ,ಸಹಾಯ, ಕಾರ್ಯ ಬದ್ಧತೆ ಮರೆಯುವ ಹಾಗಿಲ್ಲ, ಊಟ,ಔಷದಿ, ಪ್ರಾಣಿಗಳಿಗೆ ಮೇವು ಎಲ್ಲವನ್ನೂ ಒದಗಿಸಿ ಕೊಟ್ಟರು
ಜನರ ಸೇವೆ ಜೊತೆಗೆ ಗೊಸೇವೆ ಮಾಡುವ ಅವಕಾಶ ಕೂಡ ಸಿಕ್ಕಿತು ಧನ್ಯವಾದಗಳು @c_H_i_N_k_U ಅವ್ರೆ

ಜನರ ಸೇವೆ ಜೊತೆಗೆ ಗೊಸೇವೆ ಮಾಡುವ ಅವಕಾಶ ಕೂಡ ಸಿಕ್ಕಿತು ಧನ್ಯವಾದಗಳು @c_H_i_N_k_U ಅವ್ರೆ

ಜೀವನದಲ್ಲಿ ಈ 70 ದಿನಗಳು ಹಲವು ಪಾಠಗಳನ್ನ ಕಲಿಸಿದೆ, ನಮಗೆ ಆದರ್ಶ ನೀಡಿದ ನಮ್ಮ ನೆಚ್ಚಿನ ಶಾಸಕರು, ನಮ್ಮ ಕಾರ್ಪೊರೇಟರ್,ಊರಿನ ಹಿರಿಯರು,ಸಹಪಾಠಿಗಳು ಎಲ್ಲರೂ ಒಗ್ಗಟ್ಟಿನಿಂದ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೀವಿ ! ಕೆಲವು ರಾಜಕಾರಣಿಗಳು ಹೇಳಿದ ಹಾಗೆ ರಾಜಕೀಯ ಮಾಡಬೇಕು ಅಂದಿದ್ರೆ "Aadhar ಆಲ್ಲ Voter ID ನೋಡಿ ರೇಷನ್ ಕೊಡ್ತಾ ಇದ್ವಿ !
ಇಡೀ ಪ್ರಪಂಚದ/ದೇಶದ ಸಮಸ್ಯೆ ಬಗೆಹರಿಸೋಕೆ ಆಗುತ್ತ ಅನ್ನೋ ಕೊಂಕು ಪ್ರಶ್ನೆಗಳು ಕೂಡ ಬಂದಿವೆ, ನಮ್ಮ ಶಕ್ತಿ ಮೀರಿ ನಮ್ಮ ಸುತ್ತಮುತ್ತಲಿನ ಜನಕ್ಕೆ ಸೇವೆ ಮಾಡಿದ್ದೀವಿ,ಟೀಕೆ ಟಿಪ್ಪಣಿಗನ್ನ ಲೆಕ್ಕಿಸದೆ ಕೆಲಸ ಮಾಡಿದ್ದೀವಿ.ಎಲ್ಲಾ ಲೆಕ್ಕಗಳನ್ನ ದೇವರು ನೋಡಬೇಕು
@DilipR0207 @KrishnamurthyVK @rajesh_mudali

@DilipR0207 @KrishnamurthyVK @rajesh_mudali