*--Thread on Savarkar (ಕನ್ನಡದಲ್ಲಿ) --*

"ಬಹುರತ್ನ ಪ್ರಸವಿ ಭಾರತಿ"

ನಮ್ಮನ್ನೆಲ್ಲಾ ಸಲಹಿ, ಜೀವನದ ಪಾಠವನ್ನು ನೀಡುವ ಭಾರತಮಾತೆಯ ಗರ್ಭದಲ್ಲಿ ಹಲವು ರತ್ನದಂತಹ ವೀರ ಪುತ್ರರು ಜನಿಸಿದ್ದರು, ಜನಿಸುತ್ತಲೇ ಇರುತ್ತಾರೆ. ಅಂಥವರಲ್ಲಿ ಅಗ್ರಗಣ್ಯರಾದ ವೀರ ಸಾವರ್ಕರ್ ಬಗ್ಗೆ ತಿಳಿದುಕೊಳ್ಳೋಣ.
👇 Read..
ಸಾವರ್ಕರರು 1883 ಮೇ 28 ರಂದು ಮಹಾರಾಷ್ಟ್ರದ ಭಗೂರಿನಲ್ಲಿ ಜನಿಸಿದರು. ಸಂಸ್ಕೃತ ಪಂಡಿತರ ಪೀಳಿಗೆಯಲ್ಲಿ ಜನಿಸಿದ್ದರಿಂದ ಇತಿಹಾಸ, ರಾಜನೀತಿ,ಭಾರತೀಯ ಸಂಸ್ಕೃತಿ, ಸಂಸ್ಕಾರಗಳಲ್ಲಿ ಬಹಳ ಆಸಕ್ತಿ. ಚಿಕ್ಕಂದಿನ ದಿನಗಳಲ್ಲಿ ಬಾಪುಕಾಕನಿಂದ ಛತ್ರಪತಿ ಶಿವಾಜಿ ಮಹಾರಾಜರು, ಝಾನ್ಸೀ ರಾಣಿ ಲಕ್ಷ್ಮಿಭಾಯಿ, ರಾಜಮಹಾರಾಜರ ಕಥೆಗಳನ್ನು ಕೇಳುತ್ತಿದ್ದರು.
ಶಿವಾಜಿ ಮಹಾರಾಜರ ಹಾಡು, ಲಾವಣಿ,ನಾಟಕ ಮಾಡುವುದೆಂದರೆ ಪಂಚಪ್ರಾಣ.ಮಿತ್ರಮೇಳ ಸ್ಥಾಪಿಸಿ ಅಲ್ಲಿ ಎಲ್ಲ ಸಂಗಡಿಗರಿಗೂ ಕಥೆಗಳನ್ನು ಹೇಳುತ್ತಾ ಆನಂದ ಪಡುತ್ತಿದ್ದರು. ಇವರು 9 ನೇ ವಯಸ್ಸಿನಲ್ಲಿ ಇದ್ದಾಗಲೇ ಅವರ ತಾಯಿ ಕಾಲರಾ ತುತ್ತಾಗಿ ಅಸುನೀಗಿದರು.ನಂತರ 1899 ರಲ್ಲಿ ಭಗೂರಿಗೆ ಪ್ಲೇಗ್ ಹೆಮ್ಮಾರಿ ಸಾವರ್ಕರ್ ತಂದೆ ದಾಮೋದರಪಂತರನ್ನು ಕಿತ್ತುಕೊಂಡಿತು
ಪುಣೆ ನಗರ ಪ್ಲೇಗಿನ ಕಾಟದ ಜೊತೆಗೆ ಕಮಿಷನರ್ ರ್ಯಾಂಡ್ ನ ಕಾಟವೂ ಅಧಿಕವಾದಾಗ, ಸಿಂಹದ ಮರಿಗಳಂತಿದ್ದ ಚಾಫೆಕರ್ ಬ್ರದರ್ಸ್ ಹೊಂಚು ಹಾಕಿ ರಾತ್ರೋ ರಾತ್ರಿ ಆ ಕ್ರೂರಿ ಅಧಿಕಾರಿಯನ್ನು ಸಂಹರಿಸಿದರು, ನಂತರ ಚಾಫೆಕರರ ಮರಣದ ಸುದ್ದಿ ಕೇಳಿ, ಸಾವರ್ಕರರ ಸ್ವಾತಂತ್ರ್ಯ ಕಿಚ್ಚು ಹೆಚ್ಚಾಯಿತು.
ಆಗ ಅವರು ನುಡಿದ ಮಾತಿದು: "ಸ್ವಂತ ಹಿತಕ್ಕಾಗಿ ಯಾರನ್ನಾದರು ಕೊಂದರೆ ಅದು ಕೊಲೆ, ಸಮಾಜದ ಹಿತಕ್ಕಾಗಿ ಪ್ರಾಣ ತೆಗೆದರೆ ಅದು ಸಂಹಾರ(ವಧೆ)".
ಪುಣೆಯಲ್ಲಿ ಹೆಚ್ಚಿನ ಕಲಿಕೆಗಾಗಿ ಮುಂದಿನ ಜೀವನ ನಡೆಸಲು ನಿರ್ಧರಿಸಿದರು, ಅಲ್ಲಿ "ಅಭಿನವ ಭಾರತ" ಸ್ಥಾಪಿಸಿ ಸ್ವದೇಶ ಚಿಂತನೆಯಲ್ಲಿ ಮುಳುಗಿದರು. ಕೊನೆಗೆ ಪರದೇಶ ವಸ್ತುಗಳನ್ನು ಬೆಂಕಿಗೆ ಆಹುತಿ ನೀಡಿ, ಬಾಲಗಂಗಾಧರ ತಿಲಕರಿಂದ ಪ್ರಶಂಸೆ ಪಡೆದರು.
ಆಗ ಪರ್ಗೂಸನ್ ಕಾಲೇಜಿನಲ್ಲಿ ಇರುವ ಅಭಿನವ ಭಾರತ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಮಯ, ಆಗ ಸಾವರ್ಕರರು ಎಲ್ಲ ಸಹಪಾಠಿಗಳಿಗೆ ಕಟ್ಟಾಜ್ಞೆ ನೀಡಿದರು, ಎಲ್ಲರೂ ಉತ್ತೀರ್ಣರಾಗದೇ ಇದ್ದಲ್ಲಿ ನಮ್ಮ ಅಭಿನವ ಭಾರತದ ಮರ್ಯಾದೆ ಹೋಗುವುದೆಂದು ಹೇಳಿ. ತಾನು ಹೇಗೋ ಓದಿ ಉತ್ತಮ ಅಂಕ ಪಡೆದು ಉತ್ತೀರ್ಣರಾದರು.
ಇಂಗ್ಲಿಷರ ಮೂಲವನ್ನೇ ಅಲುಗಾಡಿಸುವ ಸಲುವಾಗಿ, ಹೆಚ್ಚಿನ ಓದಿಗಾಗಿ ಇಂಗ್ಲೆಂಡಿಗೆ ಪ್ರಯಾಣ ಬೆಳೆಸಿದರು. ಅಲ್ಲಿ "ಭಾರತಭವನ" ದಲ್ಲಿ ಎಲ್ಲಾ ಭಾರತದ ಪುತ್ರರಿಗೆ ಸ್ವಾತಂತ್ರ್ಯ ಜ್ಯೋತಿಯ ಕಿಚ್ಚನ್ನು ಹಚ್ಚಿದರು. ಮದಲಾಲ್ ಧಿಂಗ್ರಾ ಸ್ವತಃ ಸಾವರ್ಕರ್ ಪರಾಕ್ರಮ ನೋಡಿ ಬದಲಾದನು, ವೀರಮರಣ ಪಡೆದನು.
ಸಾವರ್ಕರ್ ಲಂಡನ್ನಿನಲ್ಲಿ ಸುಮ್ಮನೆ ಕೂರಲಿಲ್ಲ, "ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ 1857" ಎನ್ನುವ ಉತ್ಕೃಷ್ಟವಾದ ಗ್ರಂಥ ಬರೆದರು. ಅದರ ವಿರೋಧ ಆಕಾಶಕ್ಕೇರಿತು, ಬ್ರಿಟಿಷರು ಅದನ್ನು ತಡೆ ಹಿಡಿದರು, ಅವರ ಕಣ್ಣು ತಪ್ಪಿಸಿ ಪ್ರಾನ್ಸ್, ಹಾಲೇಂಡ್ ಗಳಲ್ಲಿ ಪುಸ್ತಕ ಮುದ್ರಿಸಿದರು.
ಭಾರತಕ್ಕೆ ಪುಸ್ತಕ ಬಂದ ನಂತರ ಸಾವರ್ಕರರಿಗೆ ಅಂಡಮಾನ್ ಕರಿನೀರ ಶಿಕ್ಷೆ ವಿಧಿಸಿದರು, ಅಭಿನವ ಭಾರತದ ಜನರು ದಂಗೆಯೆದ್ದರು. ಬಂಧಿಯಾದ ನಂತರ ಪ್ರಯಾಣ ಮಧ್ಯೆ ಹಡಗಿನಿಂದ ಹಾರಿ ಮೈಯೆಲ್ಲ ಗಾಯಗೊಂಡ ಸಾವರ್ಕರ್, ಸಮುದ್ರದಲ್ಲಿ ಈಜಿ ಪ್ರಾನ್ಸ್ ಸೇರಿದರು ಆದರೆ ಏನೂ ಉಪಯೋಗವಾಗಲಿಲ್ಲ.
1910ರಿಂದ - 1960 ರ ತನಕ ಕರಿನೀರ ಶಿಕ್ಷೆ ನೀಡಬೇಕೆಂದು ಆಗ್ರಹವಾಯಿತು. ಅಂಡಮಾನಿಗೆ ಕರೆದುಕೊಂಡು ಹೋಗುವ ಮೊದಲು ಸಾವರ್ಕರರ ಪತ್ನಿ ಯಮುನಾ ಭೇಟಿಗೆ ಬಂದಾಗ "ಬ್ಯಾರಿಸ್ಟರ್ ಆಗಿ ಬರಬೇಕಿದ್ದ ಪತಿ ಇಂತಹ ಪರಿಸ್ಥಿತಿಯಲ್ಲಿ, ಭಾರವಾದ ಸರಪಳಿ, ಕೈಕಾಲಿಗೆ ಕೋಳ, ಸಾವರ್ಕರರಿಗೆ ಅದನ್ನು ಹೊತ್ತು ನಡೆಯಲು ಆಗಲಿಲ್ಲ, ಅವರ ವೇದನೆಯನ್ನು ಪತ್ನಿಗೆ ತೋರಿಸದೆ,
ಬುದ್ದಿವಾದ ನೀಡಿ ಅವಳನ್ನು ಮನೆಗೆ ಕಳುಹಿಸಿದರು. ಕ್ರೂರ ಕ್ರಿಮಿನಲ್ಸ್ ಜೊತೆ ಅವರನ್ನು ಪುಟ್ಟ ಹಡಗಿನ ಕೋಣೆಯಲ್ಲಿ ಕರೆದುಕೊಂಡು ಹೋಗಲಾಯಿತು, 50 ಜನ ಕೂರುವ ಜಾಗದಲ್ಲಿ 200 ಜನರನ್ನು ತುಂಬಿದರು, ಅದೇ ಕೋಣೆಯಲ್ಲಿ ಅರ್ಧ ಸೀಳಿದ ಪ್ಲಾಸ್ಟಿಕ್ ಡ್ರಮ್ ನಲ್ಲಿ ಶೌಚಕ್ಕೆ ವ್ಯವಸ್ಥೆ ಮಾಡಲಾಯಿತು,
ನಾಲ್ಕೂ ದಿನ 200 ಮಂದಿಯ ಶೌಚವು ಅದೇ ಜಾಗದಲ್ಲಿ.ನಮಗೆ ಇದನ್ನು ಓದುವಾಗಲೇ ವಾಕರಿಕೆ ಬರುತ್ತದೆ, ಆ ಜಾಗದಲ್ಲಿ ಅದನ್ನು ಅನುಭವಿಸಿದ ಸ್ವಾತಂತ್ರ್ಯ ಸೇನಾನಿ ಸಾವರ್ಕರರಿಗೆ ಏನಾಗಿರಬೇಡ ಯೋಚಿಸಿ.? ಆದರೆ ಅವರು ಕುಗ್ಗಲಿಲ್ಲ, ಇಂತಹ ಸನ್ನಿವೇಶಗಳು ಇನ್ನು ಸರ್ವೇ ಸಾಮಾನ್ಯವೆಂದು ತಿಳಿದು ಮನಸ್ಸನ್ನು ಕಲ್ಲು ಮಾಡಿಕೊಂಡು ಇನ್ನೂ ಧೃಢ ನಿರ್ಧಾರ ಮಾಡಿದರು.
ಅಂಡಮಾನಿಗೆ ಬಂದಿಳಿದ ಸಾವರ್ಕರ್ ಆ ಸುಂದರ ದ್ವೀಪವನ್ನು ನೋಡಿ " ಅಂಡಮಾನ್ ನೀನು ದ್ವೀಪಗಳ ರಾಣಿ, ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಇಲ್ಲೊಂದು ನೌಕಾನೆಲೆ ನಿರ್ಮಿಸಬೇಕೆಂದು" ಹೇಳಿ ಆ ಕಾಲದಲ್ಲೇ ಕನಸು ಕಟ್ಟಿದ್ದರು.ನಂತರದ ದಿನಗಳಲ್ಲಿ ಅವರಿಗೆ ಬಿಗಿದ ಬೇಡಿಗಳ ಸಂಖ್ಯೆಯಲ್ಲಿ ಹೆಚ್ಚಳವಾಯಿತು.
ಯಾವುದಕ್ಕೂ ಬಗ್ಗಲಿಲ್ಲ. ಅಲ್ಲಿಯೇ ಕುಳಿತು ಕಾವ್ಯಗಳನ್ನು ಬರೆದರು. ಅಲ್ಲಿರುವ ದೈತ್ಯ ರಾಕ್ಷಸ " ಬ್ಯಾರಿ" ಎನ್ನುವ ಅಧಿಕಾರಿ ಸಾವರ್ಕರರನ್ನು ಅತ್ಯಂತ ಕಠಿಣವಾಗಿ ಶಿಕ್ಷಿಸಿದ. ಇನ್ನು ಮುಂದೆ ಸಾವರ್ಕರರದು ಕತ್ತಲೆ ಕೋಣೆಯ ಜೀವನ, ಉಪ್ಪು ನೀರಿನ ಸ್ನಾನ, ಗಾಣದಿಂದ ಎಣ್ಣೆ ತೆಗೆಯುವುದು, ನಾರನ್ನು ಬಿಚ್ಚಿ ಹೊಸೆಯುವ ಕೆಲಸ.
ದಣಿವಾಯಿತೆಂದು ಒಂದು ನಿಮಿಷ ನಿಂತರೆ ಹಿಂದಿನಿಂದ ಛಾಟಿ ಏಟು, ಕೈಗಳು ರಕ್ತದ ಮಡುವಿನಲ್ಲಿ ಮರುಗಿದವು. ನಾಲ್ಕು ತಿಂಗಳು ಹಗಲು-ರಾತ್ರಿಗಳ ಕಾಲ ಕೈಗೆ ಬೇಡಿ ಹಾಕಿ ಗೋಡೆಯ ಕಡೆ ಬಗ್ಗಿ ನಿಲ್ಲಬೇಕು, ನಿಂತರು, ಅನುಭವಿಸಿದರು. ಜೈಲಿನಲ್ಲಿ ಊಟ ಹೇಗಿತ್ತೆಂದರೆ ಕಾಡಿನಿಂದ ತಂದ ಸೊಪ್ಪು, ಸದೆಗಳನ್ನು ಕೊಚ್ಚಿ ಬೇಯಿಸಿ ನೀಡುತ್ತಿದ್ದರು.
ಚೇಳು ಮತ್ತು ಹಾವು ಆ ಊಟದಲ್ಲಿ ಸಾವರ್ಕರರಿಗೆ ಎಷ್ಟೋ ಬಾರಿ ಸಿಕ್ಕಿದ್ದವು.
ನಂತರ "ನನ್ನನ್ನು ಬಿಡುಗಡೆ ಮಾಡಿ" ಎಂದು 6 ಸಲ ಬ್ರಿಟಿಷರಿಗೆ ಪತ್ರಗಳನ್ನು  ಬರೆದರು. ಈ ವಿಚಾರ ಬಹಳ ಸುದ್ದಿಯಾಯಿತು. ಬ್ರಿಟಿಷ್ ಮೇಲಧಿಕಾರಿ ಇಂಗ್ಲೆಂಡಿನಿಂದ ಅಂಡಮಾನಿಗೆ ಬಂದು ವಿಚಾರಣೆ ಮಾಡಿದಾಗ ಆ ಪತ್ರ ಕ್ಷಮಾಪಣೆಯ ಪತ್ರವಾಗಿರಲಿಲ್ಲ,
ಏನಾದರೂ ಅವರನ್ನು ಬಿಡುಗಡೆ ಮಾಡಿದ್ದರೆ ಸ್ವದೇಶಕ್ಕೆ ತೆರಳಿ ಇನ್ನೂ ಹೆಚ್ಚಿನ ಕ್ರಾಂತಿ ಕೆಲಸ ಮಾಡುವ ಹುನ್ನಾರವಾಗಿತ್ತು ಆ ಪತ್ರ. ಈ ವಿಷಯವೇ ಇನ್ನೂ ಕಮ್ಮಿನಿಷ್ಠರಿಗೆ ಅರ್ಥವೇ ಆಗಿಲ್ಲ. ನಂತರ ಅವರನ್ನು ಬಿಡುಗಡೆ ಮಾಡಬಾರದೆಂದು ಮೇಲಧಿಕಾರಿಗಳ ಆಜ್ಞೆಯಾಯಿತು.
ಜೈಲಿನಲ್ಲಿ ಕುಳಿತು ಸುಧಾರಣೆ ಮಾಡಿದರು, ಪುಸ್ತಕ ಪ್ರಿಯರಿಗೆ ಪುಸ್ತಕ ಓದುವ ಹಾಗೆ ಸಹಾಯ ಮಾಡಿದರು, ಮಂತಾಂತರ ತಡೆದರು, ಆಹಾರ ಪದ್ಧತಿ ಬದಲಾವಣೆ ಆಗುವ ಹಾಗೆ ಚಳುವಳಿ ನಡೆಸಿದರು, ಅನಕ್ಷರಸ್ಥ ಜನರಿಗೆ ಶಿಕ್ಷಣ ನೀಡಿದರು, ಇವರ ಜೊತೆ ಒಡನಾಟ ಇಟ್ಟು ಕೊಂಡವರಿಗೆ ಸ್ವಾತಂತ್ರ್ಯ ಕಿಚ್ಚು ಹಚ್ಚಿದರು.
ಸಾವರ್ಕರರಿಗೆ ಕವನ ಬರೆಯಲು ಪೆನ್ನು ನೀಡಲಿಲ್ಲ,ಕಬ್ಬಿಣದ ಕಡ್ಡಿಯಲ್ಲಿ ಕಲ್ಲಿನ ಗೋಡೆಯ ಮೇಲೆ ಹತ್ತು ಸಾವಿರ ಸಾಲಿನ ಕವನಗಳನ್ನು ಬರೆದರು.ಕೊನೆಗೂ ಅವರಿಗೆ ಅಂಡಮಾನಿನಿಂದ ಬಿಡುಗಡೆಯಾಯಿತು,ಭಾರತಕ್ಕೆ ತಂದು ಮತ್ತೆ ಸೆರೆವಾಸ ಮುಂದುವರಿಸಿದರು ಆ ಕ್ರೂರ ಬ್ರಿಟಿಷರು.ನಂತರ ಸ್ವಲ್ಪ ವರ್ಷಗಳ ನಂತರ ಕೆಲವು ಒಪ್ಪಿಗೆಯ ಮೇರೆಗೆ ಸಾವರ್ಕರ್ ಬಿಡುಗಡೆಯಾಯಿತು.
ಬಿಡುಗಡೆ ನಂತರ ಅವಧಿಯಲ್ಲಿ ಸಮಾಜ ಸುಧಾರಣೆಯಲ್ಲಿ ದೊಡ್ಡ ಕೆಲಸ ಮಾಡಿದರು, ಪತಿತ ಪಾವನ ಎಂಬ ಮಂದಿರ ನಿರ್ಮಾಣ ಮಾಡಿಸಿ, ಎಲ್ಲರಿಗೂ ಮಂದಿರ ಪ್ರವೇಶಕ್ಕೆ ಅವಕಾಶ ನೀಡಿದರು. ಸುಭಾಷ್ ಚಂದ್ರ ಬೋಸರಿಗೆ ಸ್ವದೇಶ ಸೈನ್ಯವನ್ನು ಕಟ್ಟಲು ಉಪಾಯ ನೀಡಿ, ಭಾರತವನ್ನು ಸ್ವತಂತ್ರ ನಂತರ ಪಾಕಿಸ್ತಾನದಿಂದ ಕಾಪಾಡಲು ಪ್ರಮುಖ ಕಾರಣ ಸಾವರ್ಕರ್ ಅಲ್ಲದೇ ಮತ್ಯಾರು..?
ಗಾಂಧಿ ಹತ್ಯೆ ಮತ್ತು ಸಾವರ್ಕರರಿಗೆ ಏನೂ ಸಂಬಂಧವಿಲ್ಲದದ್ದರೂ ಅವರ ಮನೆಯ ಮೇಲೆ ಕಲ್ಲಿನ ಸುರಿಮಳೆಯಾಯಿತು, ತಮ್ಮನಿಗೆ ಅಮಾನವೀಯವಾಗಿ ಹೊಡೆದರು. ಎಲ್ಲವನ್ನೂ ಸಹಿಸಿಕೊಂಡು ಮುನ್ನಡೆದರು.
ಗಾಂಧೀಜಿ ಕೊಲೆಯಲ್ಲಿ ಇವರ ಪಾತ್ರವಿದೆಯೆಂದು ತಪ್ಪು ತಿಳುವಳಿಕೆಯಲ್ಲಿದ್ದ ನೆಹರು ದ್ವೇಷದ ರಾಜಕಾರಣ ಮಾಡಿ, ಇವರನ್ನು ಜೈಲಿಗಟ್ಟಿದ, ಕೊನೆಗೂ ತುಂಬಾ ವಿಚಾರಣೆ ನಂತರ ಹೈಕೋರ್ಟ್ನಲ್ಲಿ ಜಡ್ಜ್ ಹೇಳಿದರು " ಸಾವರ್ಕರ್ ನಿಷ್ಕಳಂಕ ವ್ಯಕ್ತಿ " ನಂತರ ಇವರ ಬಿಡುಗಡೆಯಾಯಿತು.
ಸುಖಾಸುಮ್ಮನೆ ಪಾಕ್ ಪ್ರಧಾನಿ ಭಾರತಕ್ಕೆ ಭೇಟಿ ಕೊಡುವಾಗ ಮತ್ತೆ ಇವರಿಂದ ಏನು ಕಾನೂನಿಗೆ ತೊಂದರೆಯಾಗಬಾರದೆಂದು  ಇವರ 1951 ರಲ್ಲಿ ಜೈಲುವಾಸ ನೀಡಲಾಯಿತು. ಪಾಕ್ ಪ್ರಧಾನಿ ವಾಪಸ್ ಆದ ಬಳಿಕ ಬಿಡುಗಡೆಯಾಯಿತು. ಲಾಲ್ ಬಹದ್ದೂರ್ ಶಾಸ್ತ್ರಿಯವರಿಗೆ ಟಾಶ್ಕೆಂಟಿಗೆ ಹೋಗಬೇಡಿ ಎಂದು ತಿಳಿಸಿದರು, ಆದರೆ ಸಾವರ್ಕರ್ ಮಾತನ್ನು ಕೇಳದೇ ಅವರು ಅಲ್ಲಿಗೆ ಹೋದರು.
ತನ್ನ ತಾಯಿಗೆ ಹೇಳಿದ್ದ ಮಾತನ್ನು ಉಳಿಸಿಕೊಂಡೆ, ಭಾರತ ಸ್ವತಂತ್ರ್ಯವಾಯಿತು ಇನ್ನು ನನ್ನ ಅವಶ್ಯಕತೆ ಇಲ್ಲವೆಂದು, 21 ದಿನಗಳ ಕಾಲ ಅನ್ನ, ನೀರು ತ್ಯಜಿಸಿ 1966 ಫೇಬ್ರವರಿ 26 ರಂದು ಭಾರತಮಾತೆಗೆ ತನ್ನ ಪ್ರಾಣಾರ್ಪಣೆಗೈದರು ವೀರ ಸಾವರ್ಕರ್.
ಕರ್ನಾಟಕದ ಜೊತೆ ನಂಟು.

ಸಾವರ್ಕರರ ಜೊತೆ ಪರ್ಗೂಸನ್ ಕಾಲೇಜಿನಲ್ಲಿ ಓದಿದ್ದರು ನಮ್ಮ ಆಲೂರು ವೆಂಕಟರಾಯರು,  ನರಕಯಾತನೆ ಕಾಲಾಪಾನಿ ಶಿಕ್ಷೆಯ ನಂತರ ಸಾವರ್ಕರರನ್ನು ವೆಂಕಟರಾಯರು ಧಾರವಾಡ ಆಹ್ವಾನಿಸಿ, ಭಾಷಣ ಮಾಡಿಸಿದ್ದರು.
ಸಾವರ್ಕರ್ ಭಾಷಣದಲ್ಲಿ ಹೀಗೆಂದರು
" ನಾನು ಮರಾಠಿಯಲ್ಲಿ ಮಾತನಾಡುತ್ತೇನೆ, ಕನ್ನಡ ಬರಲ್ಲ, ಕನ್ನಡ ಮಾತನಾಡಬೇಕೇಂದು ಆಸೆ ಆದರೆ ಅಂಡಮಾನಿನಲ್ಲಿ ಇದ್ದಾಗ ಒಬ್ಬ ಕನ್ನಡಿಗನೂ ಸಿಗಲಿಲ್ಲ, ಯಾವ ಯಾವ ಭಾಷೆಯವರು ಬಂದಿದ್ದರೋ ಎಲ್ಲಾ ಭಾಷೆ ಕಲಿತೆ ಕರ್ನಾಟಕದಿಂದ ಯಾರಾದರೂ ಒಬ್ಬರು ಬಂದಿದ್ದರೆ ಕನ್ನಡ ಕಲಿಯುತ್ತಿದ್ದೆ"
ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದ ವೀರ.

ಬ್ಯಾರಿಸ್ಟರ್ ಆಗಬೇಕೆಂದು ಇಂಗ್ಲೆಂಡಿಗೆ ಹೋದವರೆಲ್ಲರೂ ಬ್ಯಾರಿಸ್ಟರ್ ಆದರು ಆದರೆ ಇವರ ಮೊದಲಿನ ಬಿ. ಎ. ಪದವಿಯನ್ನೂ ಕಿತ್ತುಕೊಳ್ಳಲಾಯಿತು, ಪ್ರಕಟಣಾ ಪೂರ್ವದಲ್ಲಿ ಎರಡೆರಡು ದೇಶಗಳಲ್ಲಿ ನಿಷೇಧಕ್ಕೆ ಒಳಗಾದಂತಹ ಕೃತಿಯ ಮೊಟ್ಟಮೊದಲ ಲೇಖಕ ಸಾವರ್ಕರ್,
ಅಂತಾರಾಷ್ಟ್ರೀಯ ನ್ಯಾಯಾಲಯ ಪ್ರವೇಶ ಮಾಡಿದ ಮೊಟ್ಟಮೊದಲ ಕ್ರಾಂತಿಕಾರಿ ಸಾವರ್ಕರ್, ಹಡಗಿನ ಪುಟ್ಟ ರಂಧ್ರದಿಂದ ತೂರಿ ಫಲಾಯನ ಮಾಡಿದ ಮಹಾಪುರುಷ ಸಾವರ್ಕರ್.
ನಾವು ಸಾವರ್ಕರರ ಮರಣದ ನಂತರವೂ ಅವರಿಗೆ ನೆಮ್ಮದಿಯಿಂದಿರಲು ಬಿಡಲಿಲ್ಲ, ಈಗಲೂ ಸಹ ಇವರಿಗೆ ಕಪ್ಪು ಮಸಿಯನ್ನು ಬಳಿಯುವ ಕೆಲಸ ನಡೆಯುತ್ತಲೇ ಇದೆ.
ನಾವು ಏನೂ ಕಲ್ಮಶವಿಲ್ಲದ ಶುದ್ಧ ಮನಸ್ಸಿನಿಂದ ಈ ಮಹಾಪುರುಷನನ್ನು ಸ್ಮರಿಸೋಣ.

#ಸ್ವಾತಂತ್ರ್ಯ_ಲಕ್ಷ್ಮೀ_ಕೀ_ಜೈ..!
#ವಂದೇ_ಮಾತರಮ್
You can follow @mebhargav.
Tip: mention @twtextapp on a Twitter thread with the keyword “unroll” to get a link to it.

Latest Threads Unrolled: