ಕಾಳಿಂಗ ನಾವಡ ರು ನಮ್ಮನ್ನೆಲ್ಲ ಬಿಟ್ಟು ೩೦ ವರ್ಷ ಆದರೂ ಅವರ ನೆನಪು ಇವತ್ತಿಗೂ ಅಜರಾಮರ 😢
ಕಾಳಿಂಗ ನಾವಡರು ಹುಟ್ಟಿದ್ದು ಜೂನ್ ೬ ೧೯೫೮ನೇ ಇಸವಿಯಲ್ಲಿ. ಸಾಲಿಗ್ರಾಮ ಸಮೀಪದ ಗುಂಡ್ಮಿ ಅನ್ನುವ ಪುಟ್ಟ ಹಳ್ಳಿಯಲ್ಲಿ
ರಾಮಚಂದ್ರ ನಾವುಡ ಪದ್ಮಾವತಿ ದಂಪತಿಗಳ ಐದನೇ ಮಗ ಮತ್ತು ಕೊನೆಯ ಪುಟ್ಟು ಮಾಣಿ😁

ತುಂಟ, ವಿನೋದ ಮಿಮಿಕ್ರಿ ಹಾಗೂ ವ್ಯಂಗ್ಯದಲ್ಲಿ ಎತ್ತಿದ ಕೈ
ಅತ್ತಿಬೆಲೆ ಯಲ್ಲಿ ಹೋಟೆಲ್ ಅಲ್ಲಿ ಕೆಲಸ ಮಾಡ್ತಾ ಇದ್ದ ನಾವುಡರು ತುಂಬ ಕಾಲ ಆ ಕೆಲಸ ಅಲ್ಲಿಯೇ ಬಿಟ್ಟು, ಅವರಲ್ಲಿದ್ದ ಆಸಕ್ತಿಗೆ ನೀರೆರೆದ ಪೋಷಕರು ಅವರನ್ನು ಆ ಕಾಲದ ಸುಪ್ರಸಿದ್ಧ ಭಾಗವತರಾದ ನಾರಾಯಣ ಉಪ್ಪೂರರ ಗರಡಿಯಲ್ಲಿ ಬಿಟ್ಟರು
ಅಲ್ಲಿಂದ ಮುಂದೆ ಸಾಲಿಗ್ರಾಮ ಮೇಳಕ್ಕೆ ಪದಾರ್ಪಣೆ ಮಾಡಿದ ನಾವುಡರು ಆ ಬಳಿಕ ಹಿಂದಿರುಗಿ ನೋಡಿದ್ದೇ ಇಲ್ಲ
ಯಕ್ಷಗಾನ ರಂಗದ ತುಂಬೆಲ್ಲಾ ಅತಿರಥ-ಮಹಾರಥರಂತಹ ಘಟಾನುಘಟಿಗಳು ವಿಜೃಂಭಿಸುತ್ತಿದ್ದ ಉತ್ತುಂಗದ ಕಾಲದಲ್ಲಿ, ಎಳೆಯ ವಯಸ್ಸಿನಲ್ಲಿಯೇ ತನ್ನ ಜನ್ಮಜಾತ ಪ್ರತಿಭೆಯ ಬಲದಿಂದ ಬಹುಬೇಗನೆ ಕೀರ್ತಿಯ ಉತ್ತುಂಗ ಶಿಖರವನ್ನೇರುವ ಸೌಭಾಗ್ಯ ಪಡೆದು ಬಂದವರು ಕಾಳಿಂಗ ನಾವುಡರು
ಮೊದಲನೆಯ ಸಂಬಳ ಕೇವಲ ೬ರೂಪಾಯಿ ಆದರೂ ಯಕ್ಷ ರಸಿಕರಿಗೆ ಸಿಕ್ಕಿದ ಅನುಭವ ಅಷ್ಟಿಷ್ಟಲ್ಲ!
ಮುಂದೆ ಬೆಳೆಯುತ್ತಾ, ಬಹಳ ಜನಪ್ರಿಯತೆ ಗಳಿಸುತ್ತಾ, ಮುಂಬೈ ಮದರಾಸು ಬೆಂಗಳೂರಿಗೂ ವಿಮಾನದಲ್ಲಿ ಹೋಗಿ ಬರುತ್ತಿದ್ದ ಕಾರಣ ' ವಿಮಾನ ಭಾಗವತರು ' ಎಂದೇ ಪ್ರಸಿದ್ದಿಯಾದ ರು
ವಾಮನ ನಾಗಿದ್ದ ನಾವುಡರು ನೋಡ ನೋಡುತ್ತಿದ್ದಂತೆ ತ್ರಿವಿಕ್ರಮ ರಂತೆ ಬೆಳೆದರು
ನವೆಂಬರ್ ೧೯೮೮ ರಲ್ಲಿ ಬಹ್ರೈನ್ ನಲ್ಲಿ ನಡೆದ ಕನ್ನಡ ಕೂಟದ ಸಮಾರಂಭದ ಯಕ್ಷಗಾನದಲ್ಲಿ ಶ್ರೀ ಕಾಳಿಂಗ ನಾವಡರ ಭಾಗವತಿಕೆ ಎಲ್ಲರ ಮನ ಸೂರೆಗೊಂಡಿತ್ತು.
ಅಮೃತಮತಿ, ಕಾಂಚನಶ್ರೀ, ವಿಜಯಶ್ರೀ, ರೂಪಶ್ರೀ, ಭಾಗ್ಯಶ್ರೀ, ನಾಗಶ್ರೀ ಎಂಬ ಪ್ರಸಂಗ ಗಳನ್ನು ರಚಿದ್ದಾರೆ
ಬಡಗು ತಿಟ್ಟು ಮಾತ್ರವಲ್ಲದೆ ತೆಂಕಿನ ಭಾಗವತರು ನಾವುಡರ ಶೈಲಿ ಅನುಸರಿಸಿ, ಅನುಕರಣೆ ಕೂಡ ಮಾಡಿದ್ದಾರೆ
ಕೇವಲ ಶೈಲಿ ಅಲ್ಲದೆ, ಅದೆಷ್ಟೋ ರಾಗಗಳನ್ನು ನಾವುಡರು ರಂಗಕ್ಕೆ ತಂದಿದ್ದಾರೆ😍

ಯಕ್ಷ ರಸಿಕರು ಆ ರಾಗ ಕೇಳಲೆಂದೆ ಬರುತ್ತಿದ್ದರು
ವಿಪರ್ಯಾಸ ಎಂದರೆ ಇಷ್ಟು ಹೆಸರಾಂತ ಭಾಗವತರ ಬಗ್ಗೆ ಯಾವುದೇ ಪುಸ್ತಕ ಹೊರಬಂದಿಲ್ಲ.
ಒಂದು ಸಂಕಲನ ರಚನೆ ಯಾದದ್ದು ಕಳೆದ ವರ್ಷವೇ 😢

https://amzn.to/2ZDbmAy 
ಜೀವಮಾನವಿಡೀ ಪ್ರಯತ್ನಿಸಿದರೂ ಸಾಧಿಸಲು ಅಸಾಧ್ಯವಾದುದನ್ನು ಕೆಲವೇ ಕೆಲವು ವರ್ಷಗಳಲ್ಲಿ ಸಾಧಿಸಿದವರು
ಮೇ ೨೭ ೧೯೯೦ ನೇ ಇಸವಿಯಲ್ಲಿ ೩೨ರ ಹರೆಯದ ತರುಣ ಗಾನ ಕೋಗಿಲೆಯ - ಗಾನ ಸರಸ್ವತಿ ಹಾಡು ಸ್ತಬ್ಧವಾಯಿತು😢😢. ರಸ್ತೆ ಅಪಘಾತವೊಂದರಲ್ಲಿ ನಾವಡರು ವಿಧಿವಶರಾದಾಗ ಯಕ್ಷಗಾನಲೋಕದ ಸುವರ್ಣಯುಗವೊಂದು ಅಂತ್ಯವಾಯಿತು🙏
ಅಂತಹ ಗಾನ ಸರಸ್ವತಿ ನಾವುಡರಿಗೊಂದು ಭಾವ ಪೂರ್ಣ ಶ್ರದ್ಧಾಂಜಲಿ😢🙏💐💐
You can follow @Puttu_Maani.
Tip: mention @twtextapp on a Twitter thread with the keyword “unroll” to get a link to it.

Latest Threads Unrolled: