ಪ್ರಧಾನ ಮಂತ್ರಿಗಳ ಭಾಷಣವನ್ನು ರಾಜ್ಯ ಸರಕಾರ translate ಮಾಡಬೇಕು ಎಂದು ನಂಬಿರುವ ಜನರು ಇದನ್ನು ಒಮ್ಮೆ ಓದಿ-

ಭಾರತ ಒಂದು ಒಕ್ಕೂಟ(Article 1 Indian Constitution)

ಭಾರತ ಒಕ್ಕೂಟದ ಸಂವಿಧಾನದಲ್ಲಿ Union Govt ಮತ್ತು State ‌Govt ಗಳಿವೆ. ಸಂವಿಧಾನದ ಯಾವ article ನಲ್ಲೂ Union Govt ಮೇಲೆ, ರಾಜ್ಯ ಸರಕಾರದ ಕೆಳಗೆ ಅಂತ ಹೇಳಿಲ್ಲಾ
.Union Govt ರಾಜ್ಯ ಸರಕಾರದ ಬಾಸ್ ಅಂತೂ ಅಲ್ಲವೇ ಅಲ್ಲ.

ಸುಪ್ರೀಂ ಕೊರ್ಟಿನ S. R. Bommai v. Union of India ತೀರ್ಪುನ್ನು ಒಮ್ಮೆ ಓದಿದ್ರೆ ರಾಜ್ಯ ಮತ್ತು union ಸರಕಾರಗಳ ನಡುವಿನ ಸಂಬಂಧ ತಿಳಿಯುತ್ತದೆ.

ಭಾರತ ಒಕ್ಕೂಟ ಸಂವಿಧಾನದ Seventh Schedule ನಲ್ಲಿ Union List/State List/Concurrent List ಎನ್ನುವ ವಿಂಗಡಣೆಯಿದೆ.
Union List ನ ಅಂಶಗಳ ಮೇಲೆ ಒಕ್ಕೂಟ ಸರಕಾರ ಕಾನೂನು ಮಾಡುತ್ತೆ, state list ಅಂಶಗಳ ಮೇಲೆ ರಾಜ್ಯ ಸರಕಾರ ಕಾನೂನು ಮಾಡುತ್ತೆ, Concurrent list ನಲ್ಲಿರುವ ಅಂಶಗಳ ಮೇಲೆ ಕಾನೂನು ಮಾಡುವ ಅಧಿಕಾರವನ್ನು ರಾಜ್ಯ ಮತ್ತು ಒಕ್ಕೂಟ ಸರಕಾರ ಎರಡೂ ಹೊಂದಿರುತ್ತೆ. ‌
UnionList ನ ವಿಚಾರದಲ್ಲಿ ರಾಜ್ಯಸರಕಾರದ ಹಿಡಿತ ಇರೊಲ್ಲಾ, ರಾಜ್ಯಪಟ್ಟಿಯ ವಿಚಾರದಲ್ಲಿ ಕೇಂದ್ರ ಸರಕಾರಕ್ಕೆ ಹಿಡಿತ ಇರೊಲ್ಲಾ.

ಕೇಂದ್ರಪಟ್ಟಿಯ ವಿಚಾರದಲ್ಲಿ ಕೇಂದ್ರ ನೇರವಾಗಿ ಜನರನ್ನು ತಲುಪಬೇಕು, ರಾಜ್ಯ ಪಟ್ಟಿಯ ಅಂಶಗಳ ವಿಚಾರವಾಗಿ ರಾಜ್ಯಸರಕಾರ ನೇರವಾಗಿ ಜನರನ್ನು ತಲುಪಬೇಕು, ರಾಜ್ಯಸರಕಾರವು ಕೇಂದ್ರ ಮತ್ತು ಜನರ ನಡುವಿನ ಮಧ್ಯವರ್ತಿಯಲ್ಲ
Article 343 ರ ಪ್ರಕಾರ ಹಿಂದಿ ಮತ್ತು ಇಂಗ್ಲೀಶ್ Union Govt ನ ಆಡಳಿತ ಭಾಷೆ. ಹಾಗಾಗಿ ಕೇಂದ್ರ ಸರಕಾರ ಹಿಂದಿಯಲ್ಲಿ ಭಾಷಣ ಮಾಡುವುದನ್ನು ಸಮರ್ತಿಸಿಕೊಳ್ಳಬಹುದು. ಆದರೆ ಇಂದು ತಂತ್ರಜ್ಞಾನ ಮುಂದುವರೆದಿದೆ, ಕೇಂದ್ರ ಸರಕಾರ ಹೆಚ್ಚಿನ ಜನರನ್ನು ತಲುಪಬೇಕು ಅಂದರೆ ಹೆಚ್ಚು ಹೆಚ್ಚು ಭಾಷೆಗಳನ್ನು ಬಳಸಬೇಕು.
ರಾಜ್ಯಪಟ್ಟಿಯ ವಿಚಾರವಾದರೆ ರಾಜ್ಯಸರಕಾರ ಜನರ ಭಾಷೆಯಲ್ಲಿ ಮಾಹಿತಿ ನೀಡಲು ಕ್ರಮ ಕೈಗೊಳ್ಳಬೇಕು, ಕೇಂದ್ರ ಪಟ್ಟಿಯ ವಿಚಾರವಾದರೆ ಕೇಂದ್ರ ಸರಕಾರ ಜನರ ಭಾಷೆಯಲ್ಲಿ ಮಾಹಿತಿ ನೀಡಲು ಕ್ರಮ ಕೈಗೊಳ್ಳಬೇಕು.
ಜಂಟೀಪಟ್ಟಿಯ ವಿಚಾರದಲ್ಲಿ ಕೇಂದ್ರ ಸರಕಾರ ಏನಾದರೂ ಬದಲಾವಣೆ ಮಾಡಿದರೆ ಕೇಂದ್ರ ಸರಕಾರ, ರಾಜ್ಯ ಸರಕಾರ ಕಾನೂನು ಬದಲಾವಣೆ ರಾಜ್ಯ ಸರಕಾರ ಜನರ ಭಾಷೆಯಲ್ಲಿ ಮಾಹಿತಿ ನೀಡಲು ಕ್ರಮ ಕೈಗೊಳ್ಳಬೇಕು
ಇನ್ನೂ language rights ಗೆ ಸಂಬಂಧಿಸಿದಂತೆ ತಿಳಿದುಕೊಳ್ಳಬೇಕೆಂದರೆ UNESCO ನ Universal Declaration of Linguistic Rights ಅನ್ನು refer ಮಾಡಬಹುದು. ಜಗತ್ತಿನಾದ್ಯಂತ language rights ಅನ್ನು human rights ಎಂದು ಕೂಡ consider ಮಾಡಲಾಗುತ್ತದೆ.
ಕೊನೆಯದಾಗಿ ಕನ್ನಡಿಗರಾದ ನಾವು ತೆರಿಗೆ ಕಟ್ಟುತ್ತೇವೆ, ನಮ್ಮ ತೆರಿಗೆ ದುಡ್ಡನ್ನು ಸರಕಾರ ಹೇಗೆ ಬಳಸುತ್ತಿದೆ, ತೆರಿಗೆ ಬಳಸಿ ರೂಪಿಸುತ್ತಿರುವ ಕಾನೂನು ಕಟ್ಟಳೆಗಳು ಹೇಗಿವೆ ಎನ್ನುವುದನ್ನು ನಮ್ಮ ಭಾಷೆಯ ಮೂಲಕ ತಿಳಿಯುವ ಹಕ್ಕು ನಮಗಿದೆ. Free ಆಗಿ Translate ಮಾಡಿ ಅಂತ ಕೇಳ್ತಿಲ್ಲಾ. 😃
You can follow @ajavgal.
Tip: mention @twtextapp on a Twitter thread with the keyword “unroll” to get a link to it.

Latest Threads Unrolled: