ನಾನು ರಾಜ್ಯದಲ್ಲಿ ಕಂಡ ನಿಜವಾದ ಅಜಾತಶತ್ರು ನಮ್ಮ #ಜೆ_ಎಚ್_ಪಟೇಲರು
@DVSadanandGowda ಪಟೇಲರ ಬಳಿ ಹೋಗಿ ಸಾಹೇಬ್ರೆ ನನ್ನ ಕ್ಷೇತ್ರ ಕೆಲವು ಮಸಿದಿ ಗಳ ನವೀಕರಣಕ್ಕಾಗಿ ಸ್ವಲ್ಪ ಹಣ ಬಿಡುಗಡೆ ಮಾಡಿ ಎಂದು ಕೇಳಿದರಂತೆ ಅದಕ್ಕೆ JH ಏನ್ರಿ ಮಸಿದಿಗಳನ್ನೂ ಒಡೆಯ ಬೇಕೆನ್ನುವ ನೀವು ಅದರ ನವೀಕರಣಕ್ಕಾಗಿ ಹಣ ಕೇಳುತ್ತಿದ್ದೀರಿ ಎಂದು ತಮ್ಮಹಾಸ್ಯಲಹರಿ ಯಲ್ಲಿ ಕೇಳುತ್ತ ತಕ್ಷಣವೇ ಮನವಿಗೆ ಸ್ಪಂದಿಸಿ ಹಣ ಬಿಡುಗಡೆ ಮಾಡಿದರಂತೆ
2.

1994 ರಲ್ಲಿ ಪಟೇಲರು ಮುಖ್ಯಮಂತ್ರಿ ಆಗಬೇಕು ಅಂದಾಗ, ಸೋಮಣ್ಣ, ಜನತಾದಳ ಕಚೇರಿಯಲ್ಲಿ, ಪಟೇಲ್ ಸಾಹೇಬರೇ , ನಿಮಗೆ ಮುಖ್ಯಮಂತ್ರಿಯಾಗಬೇಕೆಂಬ ಆಕಾಂಕ್ಷೆ ಇದ್ದರೆ ಅದು ನಿಮ್ಮ ಸಮಾದಿಯಾ ಮೇಲೆ ಎಂದು ಹೇಳಿ, ದೇವೇಗೌಡರ ಪರ ಬಲವಾಗಿ ನಿಂತರು. @H_D_Devegowda ಮುಖ್ಯಮಂತ್ರಿ ಆದ ತಕ್ಷಣ ಮಾಡಿದ ಮೊದಲ ಕೆಲಸ, ಸೋಮಣ್ಣ ಮಂತ್ರಿ ಆಗದಂತೆ ತಡೆದದ್ದು..
ದೇವೇಗೌಡರು ಪ್ರಧಾನಿಯಾಗಿ ದೆಹಲಿಗೆ ಹೋದಾಗ, ಪಟೇಲರು ಮುಖ್ಯಮಂತ್ರಿ ಆದರು. ಅವರು ಮಾಡಿದ ಮೊದಲ ಕೆಲಸ ಸೋಮಣ್ಣನವರನ್ನು ಮಂತ್ರಿ ಮಾಡಿದ್ದು.
ಆಗ ಸೋಮಣ್ಣ ಪಟೇಲರ ಎರಡು ಕೈಹಿಡಿದು ಕಣ್ಣೀರು ಹಾಕಿದಾಗ, ಪಟೇಲರು ನೀನೂ ಏನೇ ಆದರೂ ನನ್ನ ಹುಡುಗ, ನಿನ್ನ ಅಂದಿನ ಹೇಳಿಕೆಯನ್ನು ಅಂದೇ ಗಾಳಿಗೆ ಬಿಟ್ಬಿಟ್ಟೆ ಅಂತ ಹೇಳಿದ್ದರು ..
3.

ಪಟೇಲರು ಮುಖ್ಯಮಂತ್ರಿಗಳಾಗಿದ್ದ ಸಂಧರ್ಭದಲ್ಲಿ @kharge ಸಾಹೇಬರು ,ಮುಖ್ಯಮಂತ್ರಿಗಳು ವೀರಪ್ಪನ್ ಹಿಡಿಯುವ ವಿಷಯಕ್ಕೆ ಸಂಭಂದಿಸಿದಂತೆ ಸರಿಯಾದ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ ಎಂದಾಗ, ಪಟೇಲರು ಖರ್ಗೆ ಅವರೇ ನೀವೂ ಮಾಲೀಕಯ್ಯ ಗುತ್ತೆದ್ದಾರ್ ಮತ್ತು ನಿಮ್ಮ ಗುಲ್ಬರ್ಗ ಸಹದ್ಯೋಗಿಗಳು ಎಲ್ಲರೂ ಅಜಾನಬಾಹುಗಳು....
ಸರ್ಕಾರ STF ಅನ್ನು ಹಿಂದಕ್ಕೆ ಕರೆಸಿಕೊಳ್ಳುತ್ತದೆ , ನೀವೂ ನಿಮ್ಮ ತಂಡ STF ನವರಿಗಿಂತ ಬಲಶಾಲಿಗಳು, ನೀವುಗಳೇ ಕಾಡಿಗೆ ಹೋಗಿ ವೀರಪ್ಪನ್ ಅನ್ನು ಹಿಡಿದುಕೊಂಡು ಬನ್ನಿ , ರಾಜ್ಯದ ಒಂದು ಸಮಸ್ಯೆ ಪರಿಹಾರವಾಗುತ್ತದೆ ಎಂದು ತಮ್ಮ ಹಾಸ್ಯಧಾಟಿಯಲ್ಲಿ ಹೇಳಿದಾಕ್ಷಣ, ಸ್ವತಃ ಖರ್ಗೆ ಅವರೇ ಗಹಗಹಿಸಿ ನಕ್ಕು ಸುಮ್ಮಾನಾಗಿದ್ದರು.

#ಕಾಡುವ_ಅಜಾತಶತ್ರು
4.

ಪಟೇಲರು CM ಉತ್ತರ ಕರ್ನಾಟಕದಲ್ಲಿ ಯಾರೋ ಕಿಡಿಗೇಡಿಗಳು ಸಂವಿದಾನ ಶಿಲ್ಪಿ ಬಾಬಾ ಸಾಹೇಬ್ ವಿಗ್ರಹವನ್ನು ವಿಘ್ನ ಗೊಳಿಸಿದಾಗ ಇಡೀ ಉ-ಕ ಗಲಬೆಗಳು ನಡೆದಾಗ ಮಾಧ್ಯಮದವರು ಪಟೇಲರನ್ನು ಏನು ಸರ್ ಗಲಬೆ ನಡೆಯುತ್ತಿದೆ ಎಂದಾಗ ಪಟೇಲರು ಯಾವನ್ರಿ ಆ ಪುಂಡು ಪೋಕ್ರಿಗಳಿಗೆ ಮಹನೀಯರ ವಿಗ್ರಹ ಗಳನ್ನೂ ಸಾರ್ವಜನಿಕ ಸ್ಥಳದಲ್ಲಿ ಹಾಕಕ್ಕೆ ಹೇಳಿದು ....
ಪುಂಡು ಪೋಕರಿಗಳು ಕುಡಿದು ಮಹನಿಯರ ವಿಗ್ರಹಗಳನ್ನು ದ್ವಂಸ ಮಾಡುತ್ತಾರೆ ಎಂಬ ಕನಿಷ್ಠ ಜ್ಞಾನ ಬೇಡವೇ,ಅವರಿಗೆ ಅಭಿಮಾನವಿದ್ದರೆ ಮಹನಿಯರ ವಿಗ್ರಹಗಳನ್ನು ಅವರ ಮನೆಯಲ್ಲಿ ಇಟ್ಟುಪೂಜೆ ಮಾಡಲಿ ಅವರ ಆದರ್ಶಗಳನ್ನು ಪಾಲಿಸಲಿ ಅದು ಬಿಟ್ಟು ಕಂಡ ಕಂಡ ಕಡೆ ವಿಗ್ರಹ ಇಟ್ಟರೆ ಎಲ್ಲಾ ವಿಗ್ರಹಗಳಿಗೆ ಸುರಕ್ಷತೆ ಒದಗಿಸಲು ಸಾಧ್ಯವೇ ಎಂದು ಮಾರುತ್ತರ ನೀಡಿದ್ದರು.
5.

ಪಟೇಲರು ಸಮಾಜವಾದ ಸಿದ್ದಾಂತದಿಂದ ಬಂದವರು,ಲೋಹಿಯಾವಾದಿ. ಒಮ್ಮೆ ಪತ್ರಕರ್ತರು ನೀವೂ ಸಮಾಜವಾದಿ ಸಿದ್ದಾಂತದಿಂದ ಬಂದವರು,ಅದನ್ನು ಆಡಳಿತದಲ್ಲಿ ಅಳವಡಿಸಿಕೊಂಡು ಮುಂದುವರೆಯುತ್ತಿರಾ ಎಂದು ಕೇಳಿದಾಗ, ರೀ ಜನರ ಸಮಸ್ಯೆ ಪರಿಷ್ಕರಣಗೆ ಯಾವ ಸಿದ್ದಾಂತ ಅನೂಕೂಲ ಅನಿಸುತ್ತೋ ಅಂತಹ ಎಲ್ಲಾ ಸಿದ್ದಾಂತಗಳನ್ನೂ ಆಡಳಿತದಲ್ಲಿ ಅಳವಡಿಸಿಕೊಳ್ಳುತ್ತೇನೆ....
ನಿಜ ನಾನೂ ಸಮಾಜವಾದಿ, ನಾನೂ ಸಾರ್ವಜನಿಕ ಬದುಕಿಗೆ ಬಂದಾಗ ಸಮಾಜವಾದದ ಅಗತ್ಯತೆ ಇತ್ತು, ದಶಕಗಳೇ ಕಳೆದಿವೆ, ಸಮಾಜ ಬದಲಾಗಿದೆ, ಬದಲಾದ ಸಮಾಜಕ್ಕೆ ಅನುಗುಣವಾಗಿ ನಾನು ನನ್ನ ಸಿದ್ದಾಂತಗಳನ್ನು ಬದಲಿಸಿಕೊಳ್ಳಬೇಕಿದೆ, ಅದರಂತೆ ನಾನೂ ನಡೆಯುತ್ತೇನೆ ಎಂದು ಹೇಳಿದ್ದರು.
6. J.H Patel and M.P. Prakash..

ಪಟೇಲರು ಮುಖ್ಯಮಂತ್ರಿಗಳಾಗಿದ್ದಾಗ ಪ್ರಕಾಶ್ ರವರ ಜೊತೆ ಉಡುಪಿ ಪೇಜಾವರ ಮಠಕ್ಕೆ ಬೇಟಿ ನೀಡಿ ಪಟೇಲರು ಪೇಜಾವರ ಸ್ವಾಮಿಗಳ ಪಾದಗಳಿಗೆ ನಮಸ್ಕರಿಸಿದರಂತೆ(ಪಟೇಲರು ನಾಸ್ತಿಕರಾಗಿದ್ದರು ಪದ್ಧತಿ ಸಂಸ್ಕರ ಸಂಪ್ರದಾಯ ಆಚರಿಸುವವರನ್ನು ವಿರೋದ ಮಾಡುತ್ತಿರಲಿಲ್ಲ) ....
ನಂತರ ಪ್ರಕಾಶ್ ರವರು ಕೋಣೆಯಾ ಬಾಗಿಲನ್ನು ಹಾಕಿ ಅವರ ಪಾದಗಳಿಗೆ ನಮಸ್ಕರಿಸಿದರಂತೆ!! ಆಗ ಪಟೇಲರು ಪ್ರಕಾಶ್ ರವರನ್ನುದ್ದೇಶಿಸಿ ನಮಸ್ಕರಿಸ ಬೇಕೆಂದರೆ ನಮಸ್ಕರಿಸಿ ಇಷ್ಟವಿಲ್ಲದಿದ್ದರೆ ನಮಸ್ಕರಿಸಬೇಡಿ ಅದನ್ನು ಬಿಟ್ಟು ಈ ಡೋಂಗಿತನ ಅವಶ್ಯಕತೆ ಇದೆಯೇನ್ರಿ ಅಂತ ಕೇಳಿದ್ದರಂತೆ....
You can follow @Sudhana2302.
Tip: mention @twtextapp on a Twitter thread with the keyword “unroll” to get a link to it.

Latest Threads Unrolled: