ಮುಟ್ಟಿನ ಜೊತೆಗೆ ಅಂಟಿದ ಕೆಲವು ಮಿಥ್ಯ ಗಳ ಬಗ್ಗೆ ಹೇಳಲು ಇಷ್ಟ ಪಡುತ್ತೇನೆ.

1. ಮುಟ್ಟಾದರೆ ಅವಳು ಹೊರಗಿರಬೇಕು - ಅಶುದ್ಧ!

ನಿಜವಾಗ್ಲೂ ಇದು ಹೆಣ್ಣಿನ ವಿಶ್ರಾಂತಿಗಾಗಿ ಮಾಡಿದ ನಿಯಮ.
ಎಷ್ಟೇ ಹುಷಾರಿಲ್ಲ ಅಂದ್ರೂ ಹೆಣ್ಣು ಕೆಲ್ಸ ಮಾಡೋದು ಕಮ್ಮಿ ಮಾಡಲ್ಲ! ಏನಾದ್ರೂ ಹುಡುಕಿ ಮಾಡ್ತಾಳೆ 🤦🏻‍♀️

ಅವಳಿಗೆ ಸ್ವಲ್ಪ ರೆಸ್ಟ್ ಸಿಗಲಿ ಅಂತ ಇದನ್ನ
ಉದ್ದೇಶ ಇಟ್ಕೊಂಡ್ ಮಾಡಿದ್ದು..

ಹೆಣ್ಣು ಅಶಕ್ತಳಲ್ಲ.. ಆದ್ರೂ ಅತಿಯಾಗಿ ಕೆಲ್ಸ ಮಾಡ್ತಾಳೆ - ಇಡೀ ಕುಟುಂಬದ ಜವಾಬ್ದಾರಿ ತಗೊಂಡ್ ಇರ್ತಾಳೆ.

ಮುಟ್ಟಿನ ಸಮಯದಲ್ಲಾದರೂ ಸ್ವಲ್ಪ ರೆಸ್ಟ್ ಮಾಡ್ಲಿ ಅಂತ ಶುರು ಮಾಡಿದ ಪದ್ಧತಿ ಇದು..

ನಮ್ಮ ಆಚರಣೆಯಲ್ಲಿ ಮಹಿಳೆಯರಿಗೆ ಎಷ್ಟೊಂದು ವಿಶಿಷ್ಟ ಸ್ಥಾನಮಾನ ಇತ್ತು..

ಎಲ್ಲೋ ಮರೆತು ಬಿಟ್ವಿ..
2. ಮುಟ್ಟಾದಾಗ ದೇವಸ್ಥಾನಕ್ಕೆ, ಪೂಜೆಗೆ ಹೋಗಬಾರದು - ಅವಳು ಅಶುದ್ಧ..

ಇದು ಕೂಡಾ ತಪ್ಪಾಗಿ ಅರ್ಥೈಸಲಾಗಿದೆ..

ದೇವಸ್ಥಾನಗಳು ಶಕ್ತಿ ಕೇಂದ್ರಗಳು.
ಅದರ ವಾಸ್ತು, construction ನೋಡಿದ್ರೆ ಗೊತ್ತಾಗುತ್ತೆ.
ನಮ್ಮಲ್ಲಿ ಶಕ್ತಿಯ ಹರಿವನ್ನು "ಮೂಲಾಧಾರ ಚಕ್ರದಿಂದ ಸಹಸ್ರಾರ" ಕಡೆಗೆ ಕಳಿಸಲು ಸಹಾಯ ಮಾಡುತ್ತೆ.
(Refer temple architecture)
ಅಸ್ಸಾಮಿನ "ಕಾಮಾಖ್ಯ ದೇವಿ" ದೇವಸ್ಥಾನದಲ್ಲಿ ನಾವು "ಮುಟ್ಟನ್ನು" ಪೂಜೀಸುತ್ತಿವಿ!

ಹಾಗಾದ್ರೆ ಯಾಕೆ ದೇವಸ್ಥಾನಕ್ಕೆ ಹೋಗಬಾರದು?
1. ಮುಟ್ಟಿನ ಸಮಯದಲ್ಲಿ ಶಕ್ತಿಯು ಮೂಲಾಧಾರ ದಿಂದ ಕೆಳಮುಖವಾಗಿ ಹರಿಯುವ ಕಾರಣ ದೇವಸ್ಥಾನದಲ್ಲಿ ಇರುವಂತಹ ಮೇಲ್ಮುಖ ಹರಿವುಳ್ಳ ಶಕ್ತಿಯ ಜೊತೆ ಸೇರಿ - ಋತುಸ್ರಾವದ ಮೇಲೆ ತೊಂದ್ರೆ ಆಗದೆ ಇರಲಿ ಅಂತ.
2. ಇನ್ನೊಂದು -
ಈ ಸಮಯದಲ್ಲಿ ಹೆಣ್ಣು ದೇವರಿಗೆ ಸಮ, ದೇವಸ್ಥಾನದಲ್ಲಿ ಇರೋ ಮೂರ್ತಿಯಷ್ಟೇ ಶಕ್ತಳು - ನಡೆದಾಡುವ ದೇವಿ (as per certain beliefs)

ಆದ್ರೂ ಹಾರ್ಮೋನ್ ಬದಲಾವಣೆ ಆಗುತಿರೋ ಈ ಸಮಯದಲ್ಲಿ ಶಾಂತತೆ, ಆರಾಮ ಸಿಕ್ಕರೆ ಇನ್ನೂ ಒಳ್ಳೇದು - ಮುಂದಿನ ಋತುಚಕ್ರ + ಆರೋಗ್ಯ ಚೆನ್ನಾಗಿರಲಿ ಅನ್ನೋ ಕಾರಣದಿಂದ ಜನಜಂಗುಳಿ ಪ್ರದೇಶದಿಂದ ದೂರ ಉಳಿಯುವ ಸಲಹೆ ಅಷ್ಟೇ
ಹಾಗೆ ಮುಟ್ಟಿನ ಜತೆಗೂಡಿದ ಹೆಚ್ಚಿನ ಆಚರಣೆ, ಸಂಪ್ರದಾಯಗಳು ಹೆಣ್ಣಿನ ಒಳ್ಳೇದಕ್ಕೆ, ಆರೋಗ್ಯ ವೃದ್ಧಿಗಾಗಿ ಹೊರತೇ ಅವಳನ್ನು ಕೀಳಾಗಿ ನೋಡಲು ಅಲ್ಲಾ..

ಹೆಣ್ಣು ಅತ್ಯಂತ ಶಕ್ತಳು. 😇

ಆದ್ರೂ ಇತ್ತೀಚಿನ ದಿನದಲ್ಲಿ stress, modernization hesralli ಹೆಣ್ಣು ತನ್ನ ಆರೋಗ್ಯದ ಬಗ್ಗೆ ಗಮನ ಕಮ್ಮಿ ಮಾಡಿದ್ದಾಳೆ

ಇದು ಆಗದೆ ಇರ್ಲಿ ಅಂತ ನನ್ ಆಸೆ!
ದೇವಸ್ಥಾನದ - ನಮ್ಮ ಶರೀರ, ಮನಸ್ಸಿನ ಮೇಲೆ ಆಗುವಂತಹ effects ಹಾಗೂ ಶಕ್ತಿ ಕೇಂದ್ರದ ಬಗ್ಗೆ ಹಲವು ಲೇಖನಗಳಿವೆ - ಓದಿ ನೋಡಿ.
ಇನ್ನೂ ಜಾಸ್ತಿ ವಿಷಯ ತಿಳಿಬಹುದು..

Take these tweets with pinch of salt.

ನನ್ನ ಉದ್ದೇಶ ನಮ್ಮ ಸಂಪ್ರದಾಯ ಹಾಗೂ ಮಹಿಳೆಯರ ಬಗ್ಗೆ ಇರುವ ಕಾಳಜಿ ಬಗ್ಗೆ.
ಇದನ್ನ ತಪ್ಪಾಗಿ ಅರ್ಥೈಸಬೇಡಿ

#women #Hinduism
You can follow @TheGolgappa.
Tip: mention @twtextapp on a Twitter thread with the keyword “unroll” to get a link to it.

Latest Threads Unrolled: