ಯಾಕೆ ಮೂಕನಾದ್ಯೋ ಗುರುವೆ ನೀ ಯಾಕೆ ಮೂಕನಾದ್ಯೋ ।
ಯಾಕೆ ಮೂಕನಾದೆ ಲೋಕಪಾಲಕ ಎನ್ನ ।
ಸಾಕುವರ್ಯಾರಯ್ಯ ಶ್ರೀಕರ ರಾಘವೇಂದ್ರ ॥

ಹಿಂದಕ್ಕೆ ನೀ ಎನ್ನ ಮುಂದೆ ಸುಳಿದಾಡಿದಿ ।
ಮಂದಿಯೊಳಗೆ ಎನ್ನ ಮಂದನ್ನ ಮಾಡಿದ್ಯಲ್ಲೋ ॥ ೧ ॥
#jagannathaDasaru 1/n
ಬೇಕಾಗದಿದ್ದರಿನ್ಯಾಕೆ ಕೈಯನು ಪಿಡಿದೆ ।
ಕಾಕುಜನರೊಳೆನ್ನ ನೂಕಿಬಿಟ್ಟು ನೀನು (/ನೀ) ॥ ೨ ॥

ಈಗ ಪಾಲಿಸದಿರೆ ಯೋಗಿಕುಲವರ್ಯ ।
ರಾಘವೇಂದ್ರನೆ ಭವ ಸಾಗುವದ್ಹ್ಯಾಂಗಯ್ಯ ॥ ೩ ॥

#jagannathadasaru 2/n
ನಿನ್ನಂಥ ಕರುಣಿಯಿಲ್ಲ ಎನ್ನಂಥ ಕೃಪಣಿಯಿಲ್ಲ ।
ಘನ್ನಮಹಿಮ ನೀ ಎನ್ನನು ಬಿಟ್ಟೀಗ ॥ ೪ ॥

ಜನನಿಯು ನೀ ಎನ್ನ ಜನಕನಯ್ಯ ।
ಮನ್ನಿಸೊ ನೀ ನಿತ್ಯಾನನ್ಯ ಶರಣನೆ (/ಶರಣ್ಯ) ॥ ೫ ॥

#jagannathadasaru 3/n
ಎಂದಿಗಾದರು ನಿನ್ನ ಪೊಂದಿಕೊಂಡವನಲ್ಲೋ ।
ಇಂದು ನೀ ಕೈಬಿಟ್ಟರೆನ್ನ ಮುಂದೆ ಕಾಯುವರ್ಯಾರೋ ॥ ೬ ॥

ನಾಥನು ನೀ ಅನಾಥನು ನಾನಯ್ಯ ।
ಪಾತಕರರಿ ಜಗನ್ನಾಥವಿಠ್ಠಲದೂತ (/ಜಗನ್ನಾಥವಿಠ್ಠಲದಾಸ) ॥ ೭ ॥

#jagannathadasaru 4/n
Jagannatha dasaru 1727 - 1809

Original name : Srinivasa

He is said to have commented about Sri Vijaya Dasaru that "Kannada pada heluva aa kUsi maganenu dasanaguttane"

#jagannathadasaru
One thing lead to the other .. Vijaya Dasaru advised Srinivasa to meet Gopala Dasaru

GopalaDasaru and Srinivasa went to Tirupathi

#jagannathadasaru 7/n
Due to previous ill-health & the strain of travelling to Tirupathi, Srinivasa expired on Bhadrapada Shukla Navami
Vijaya Daasaru appeared in an astral form before Gopala Daasaru & directed him to donate 40 years of his life-span to Srinivasa & revive him.

#jagannathadasaru 8/n
Gopala Daasaru immediately complied & by the grace of the Lord, Srinivasa came back to life again

Srinivasa decided to become a Haridaasa

Gopala daasaru gave him Haridaasa Deekshe & directed him to Pandarapur for ankitha.

#jagannathadasaru 9/n
There Srinivasa found a stone bearing the words "Jagannatha Vittala".

The jewel in his devotional crown was of course “Hari Kathaamrutha Saara.”

Popularly known as Kannada nyaya Sudha

#Jagannathadasaru 10/n
A person who once condemned Kannada went on to produce some of the jewel crowns of Kannada literature!!

#jagannathadasaru 11/n
“A forciable writer and known chiefly for his prodgious schloarship in Sanskrit and mastery of original sanskrit texts of the system.”

#Harikathamruthasara is written in the Bhamini Satpadi meter consisting of 32 sandhis (chpaters).

#Jagannathadasaru 12/n
Ending this brief introduction of #Jagannathadasaru with this

ಮಲಗಿ ಪರಮಾದರದಿ ಪಾಡಲು |
ಕುಳಿತು ಕೇಳುವ | ಕುಳಿತು ಪಾಡಲು ನಿಲುವ |
ನಿಂತರೆ ನಲಿವ | ನಲಿದರೆ ಒಲಿವೆ |
ನಿಮಗೆಂಬ ಸುಲಭನೋ ಹರಿ|
ತನ್ನವರನರಘಳಿಗೆ ಬಿಟ್ಟಗಲನು |
ರಮಾಧವನೊಲಿಸಲರಿಯದೆ |
ಪಾಮರರು ಬಳಲುವರು ಭವದೊಳಗೆ

🙏🏽
What is Shadguna Aishwarya?
1. Aishwarya
2. Veerya
3. Yashassu
4. Shri
5. Jnana
6. Vijnana

The one who has all these qualities in fullest is called “Bhagavantha”
#HKS
#jagannathadasaru
Vykhyanas on #HKS are written by

1. Shri Sankarshana Odeyaru
2. Thamra Parneeyaru
3. Bhavaprakashika
4. Bhavadarpana Teeka
5. Guru Hridaya Prakashika
6. Jamakandi Vadirajacharyaru

#jagannathadasaru
In the first sandhi #Jagannathadasaru prays Brahma Devaru

pretty rare if you think of it

ನಿರುಪಮಾನಂದಾತ್ಮಭವ ನಿ |
ರ್ಜರಸಭಾಸಂಸೇವ್ಯ ಋಜುಗಣ |
ದರಸೆ ಸತ್ತ್ವ ಪ್ರಚುರ ವಾಣಿಮುಖಸರೋಜೇನ ||
ಗರುಡ ಶೇಷ ಶಶಾಂಕದಳ ಶೇ |
ಖರರ ಜನಕ ಜಗದ್ಗುರುವೇ ತ್ವ |
ಚರಣಗಳಿಗಭಿವಂದಿಸುವೆ ಪಾಲಿಪುದು ಸನ್ಮತಿಯ ||

#HKS
Total number in RujuGana is 200

Among them

Brahma Devaru is known as “ShathaNanda” (RujuPunga) that’s after doing 100 Kalpa Sadhane

Brahma Devaru doesn’t have the following Doshas
-Asuravesha
-Bhavarupa Agnana
-Aporaksha TiroDhana
Etc

#jagannathadasaru #HKS
On Shri Saraswathi Devi - vedabhimami

ಚತುರವದನನ ರಾಣಿ ಅತಿರೋ
ಹಿತ ವಿಮಲ ವಿಜ್ಞಾನಿ ನಿಗಮ
ಪ್ರತತಿಗಳಭಿಮಾನಿ ವೀಣಾಪಾಣಿ ಬ್ರಹ್ಮಾಣಿ।।
ನತಿಸಿ ಬೇಡವೆ ಜನನಿ ಲಕುಮಿ
ಪತಿಯ ಗುಣಗಳ ತುತಿಪುದಕೆ ಸ
ನ್ಮತಿಯ ಪಾಲಿಸಿ ನೆಲಸು ನೀ ಮದ್ವದನ ಸದನದಲಿ।।

#jagannathadasaru #HKS
Do you know the name of the VEENA held by Shri Saraswathi Devi ?

ಕಚ್ಛಪೀ कच्छपी kacchapi

#jagannathadasaru #HKS
Vasudeva + Maya => Brahma
Sankarshana + Jaya => Vayu
Pradhyumna + Kruthi => prakruthi (Saraswathi) + Shradde (Bharathi)
Aniruddha + Shanthi

#jagannathadasaru #HKS
24 Tatwa taratamyas

Dashendriyagalu (10)
Pancha Bhootagalu (5)
Panchatanmatragalu (5)
Avyakta (1)
Ahankara (1)
Buddhi (1)
Manaha(1)

#Mangalacharane
@Bhattavakya
#jagannathadasaru #HKS
ಮಳೆಯ ನೀರೋಣಿಯಲಿ ಪರಿಯಲು
ಬಳಸರೊರೊಳಗಿದ್ದ ಜನರಾ।
ಜಲವು ಹೆದ್ದೊರೆಗೊಡೆ ಮಜ್ಜನಪಾನಗೈದಪರು।।
ಕಲುಷ ವಚನಗಳಾದರಿವು ಬಾಂ
ಬೊಳೆಯ ಪೆತ್ತನ ಪಾದಮಹಿಮಾ।
ಜಲಧಿ ಪೊಕ್ಕದರಿಂದ ಮಾಣ್ದಪರೇ ಮಹೀಸುರರು।।

Dasaru is saying even though it’s in Prakrutha, Since it’s talking abt God’s Mahavishesha its ग्राह्य

#HKS #karunasandhi
ಜಗವನೆಲ್ಲವ ನಿರ್ಮಿಸುವ ನಾ।
ಲ್ಮೊಗನೊಳಗೆ ತಾನಿದ್ದು ಸಲಹುವ।
ಗಗನಕೇಶನೊಳಿದ್ದು ಸಂಹರಿಸುವನು ಲೋಕಗಳ।।
ಸ್ವಗತಭೇದವಿವರ್ಜಿತನು ಸ।
ರ್ವಗ ಸದಾನಂದೈಕದೇಹನು।
ಬಗೆಬಗೆಯ ನಾಮದಲಿ ಕರಸುತ ಭಕುತರನ್ನು ಪೊರೆವ।।

worldly business via Brahma, Rudra; ಸ್ವಗತಭೇದವಿವರ್ಜಿತ,ಸರ್ವಗ, ಸದಾನಂದೈಕದೇಹ r describing SriHari

#HKS #karunasandhi
ಸ್ವಗತಭೇದವಿವರ್ಜಿತ: There is no difference b/w his true form & his avataras

ಸರ್ವಗ: Omnipresent

ಸದಾನಂದೈಕದೇಹ: Always an embodiment of Gnana and Happiness.(No happiness without Gnana)

#HKS #karunasandhi
Quite similar to the above padya is ಕನಕದಾಸರು In #ಹರಿಭಕ್ತಿಸಾರ

ಇಲ್ಲಿಹನು ಅಲ್ಲಿಲ್ಲವೆಂಬೀ।
ಸೊಲ್ಲು ಸಲ್ಲದು ಹೊರಗೊಳಗೆ ನೀ।
ನಿಲ್ಲ ದಿನ್ನಿಲ್ಲ ನ್ಯತ್ರನೆಂಬುವನೆಲ್ಲ ಕೆಲಕೆಲರು।।
ಬಲ್ಲರಿಳೆಯೊಳು ಭಾಗವತರಾ।
ದೆಲ್ಲರಿಗೆ ವಂದಿಸದ ಕುಜನರಿ।
ಗಿಲ್ಲ ಸದ್ಗತಿ ನೋಡಿ ರಕ್ಷಿಸು ನಮ್ಮನನವರತ।।

#HKS #karunasandhi
ಸರ್ವವ್ಯಾಖ್ಯಾನಸಾರಸಂಗ್ರಹ goes deeper into this phrase

“ಒಳಗೆ ತಾನಿದ್ದು ಸಲಹುವ”

BrahmaDevaru-Aja
RudraDevaru-jayapathi Sankarshana
Padabhimani-Jayantha-Damodara
Netrabhimani-Surya-Madhusudana
Hastabhimani-Dakshaprajapathi-Padmanabha
Vagendriya-Agni-hrishikesha
Etc

#HKS #karunasandhi
ಮಿಾನ ಕೊರ್ಮ ವರಾಹ ನರಪಂ।
ಚಾನನಾತುಳಶೌರ್ಯ ವಾಮನ|
ರೇಣುಕಾತ್ಮಜ ರಾವಣಾದಿ ನಿಶಾಚರಧ್ವಂಸಿ।।
ಧೇನುಕಾಸುರಮಥನ ತ್ರಿಪುರವ।
ಹಾನಿಗೈಸಿದ ನಿಪುಣ ಕಲಿಮುಖ।
ದಾನವರ ಸಂಹರಿಸಿ ಧರ್ಮದಿ ಕಾಯ್ದ ಸುಜನರನು।।

#hks #karunasandhi
ನರಪಂಚಾನನ : Narasimha

ಶ್ರೀ ಮನೋಹರ ಶಮಲವರ್ಜಿತ ।
ಕಾಮಿತಪ್ರದ ಕೈರವದಳ ।
ಶ್ಯಾಮ ಶಬಲಶರಣ್ಯ ಶಾಶ್ವತ ಶರ್ಕರಾಕ್ಷಸಖ।।
ಸಾಮಸನ್ನುತ ಸಕಲಗುಣಗಣ।
ಧಾಮ ಶ್ರೀ ಜಗನ್ನಾಥವಿಠ್ಠಲ ।
ನೀಮಹಿಯೊಳವತರಿಸಿ ಸಲಹಿದ ಸಕಲಸುಜನರನು||

#karunasandhi
#hks
ಶಮಲವರ್ಜಿತ : without Doshas
ಕೈರವದಳಶ್ಯಾಮ : Blue bodied (Neela Megha Shyam)
ಶಬಲಶರಣ್ಯ : one who is praised by one and all
ಶರ್ಕರಾಕ್ಷಸಖ: Friends of Other Gods
ಸಾಮಸನ್ನುತ : Praised by SamaVedas

With this #karunasandhi concludes #HKS
Panchatanmatragalu

१. गन्ध
२. रस
३. रूप
४. स्पर्श
५. शब्द

#hks #vyapthisandhi
Jagannatha Dasaru when he says
ಹರಿಯು “ನಿರ್ಲಿಪ್ತನು” .. it shows his deep knowledge of Puranas and his scholarship in sanatana Dharma etc 🙏🏽
#hks #vyapthisandhi
5 ಜ್ಞಾನೇಂದ್ರಿಯಗಶು

1.ಶ್ರವಣ (ಕಿವಿ)
2.ನಯನ (ಕಣ್ಣು)
3. ಫ್ರಾಣ (ಮೊಗು)
4.ತ್ವಕ್ (ಚರ್ಮ)
5. ರಸ (ನಾಲಿಗೆ)

#hks #vyapthisandhi
There are 2 types of karma/ಕರ್ಮ/कर्म

1. ಸಂಚಿತ(संचित)- past karma/ಹಿಂದೆ ಮಾಡಿದ ಕರ್ಮಗಳು

2. ಆಗಾಮಿ (आगामि)- future karma/ಮುಂದೆ ಮಾಡುವ ಕರ್ಮಗಳು

#hks #vyapthisandhi
ಶ್ರವಣ ನಯನ ಘ್ರಾಣ ತ್ವಗ್ರ ಸ
ನಿವುಗಳಲಿ ವಾಕ್ ಪಾಣಿಪಾದಾ
ದ್ಯವಯವಗಳಲಿ ತದ್ಗುಣಗಳಲಿ ತತ್ಪತಿಗಳೊಳಗೆ
ಪ್ರವಿತತನು ತಾನಾಗಿ ಕೃತಿಪತಿ
ವಿವಿಧಕರ್ಮವ ಮಾಡಿ ಮಾಡಿಸಿ
ಭವಕೆ ಕಾರಣನಾಗಿ ತಿರುಗಿಸುತಿಹನು ತಿಳಿಸದಲೆ||

Jnanendraya to life&death cycle to business of karmas etc is explained in just one padya

#hks #vyapthisandhi
ರೂಪ ಚತುಷ್ಟಯಗಳು
1.ಅಹಂಕಾರ - ಅನಿರುದ್ಧ
2.ಬುದ್ಧಿ - ಪ್ರದ್ಯುಮ್ನ
3.ಚಿತ್ತ - ವಾಸುದೇವ
4.ಮನಸ್ಸು - ಸಂಕರ್ಷಣ

(ಮನೋವೃತ್ತಿಗಳು - ಭಗವದ್ರೊಪ)

1.ವಿದ್ಯೆ
2.ಬುದ್ಧಿ
3.ಸಿದ್ಧಿ
4.ಪ್ರಸಿದ್ಧಿ

Here ವಿದ್ಯೆ means ಬ್ರಹ್ಮವಿದ್ಯೆ

ಈ ಚತುಷ್ಟಯಗಳನ್ನು ಅರಿತವರು ಪಾಂಚರಾತ್ರಾಗಮ ತಿಳಿದ ಪಂಡಿತರು ..
#hks #vyapthisandhi
Jagannathdasaru describes the above in this padya

ವಿದ್ಯೆ ತಾನೆಂದಿಸಿಕೊಂಬನಿ
ರುದ್ಧ ದೇವನು ಸರ್ವಜೇವರ
ಬುದ್ಧಿಯೋಳ್ ನೆಲೆಸಿದ್ದು ಕೃತಿಪತಿ ಬುದ್ಧಿಯೆನಿಸುವನು।।
ಸಿದ್ಧಿಯೆನಿಸುವ ಸಂಕರುಷಣ ಪ್ರ
ಸಿದ್ಧ ನಾಮಕ ವಾಸುದೇವನ
ವದ್ಯರೊಪ ಚತುಷ್ಟಯಗಳರಿತವನೆ ಪಂಡಿತನು।।
#hks #vyapthisandhi
What are the reasons for पाप/पुण्य कर्म?

1.ಅಧಿಷ್ಠಾನ
2.ಕರ್ತಾ
3.ಇಂದ್ರಿಯಗಳು
4.ಚೇಷ್ಟಾ
5.ದೈವ(ಅದೃಷ್ಟ)

Src: ಸಾಂಖ್ಯಾಶಾಸ್ತ್ರ

#hks #vyapthisandhi
On Ganesha Chathurthi we invoke विश्व॰भर

“ವಿಶ್ವ” ನಾಮಕ ಪರಮಾತ್ಮನಿಗೆ 19 ಮುಖಗಳು

- ಬಲ 9 ಮುಖಗಳು ಪುರುಷಪ್ರೇರಕ ರೂಪಗಳು
- ಎಡ 9 ಮುಖಗಳು ಸ್ತ್ರೀಪ್ರೇರಕ ರೂಪಗಳು
- ಮಧ್ಯದಲ್ಲಿರುವ ಮುಖವು ಆನೆಯ ಸೊಂಡಲಿನಂತಿದೆ

ಗಣಪತಿಯು “ವಿಶ್ವಂಭರೋಪಾಸಕನು “ (ವಿಶ್ವ) ಆದ್ದರಿಂದ ಗಣಪತಿಗೊ ಗಜ ಮುಖ

#hks #vyapthisandhi
ನಿತ್ಯನಿಗಮಾತೀತ ನಿರ್ಗುಣ
ಭಕ್ತವತ್ಸಲ ಭಯವಿನಾಶನ
ಸತ್ಯಕಾಮ ಶರಣ್ಯ ಶಾಮಲ ಕೋಮಲಾಂಗ ಸುಖೀ।।
ಮತ್ತನಂದದಿ ಮರ್ತ್ಯರೊಳಹೊರ
ಗೆತ್ತನೋಡಲು ಸುತ್ತಲಿಪ್ಪನು
ಅತ್ಯಧಿಕ ಸಂತೃಪ್ತ ತ್ರಿಜಗದ್ವ್ಯಾಪ್ತ ಪರಮಾಪ್ತ।।

ಭಕ್ತ ವೃಂದಕ್ಕೆ ಪರಮಾಪ್ತ ಎಂದು ..

ನಿಗಮ => ಋಗಾದಿ ನಾಮಗಳಿಂದ ಯುಕ್ತವಾದ ಅನಂತ ವೇದ ಸಮೊಹಗಳಿಗೆ

#hks #vyapthisandhi
Whenever you hear the word “nigama” #purandaradasara song comes to your mind

ಜಗದೋದ್ದಾರನ ಆಡಿಸಿದಳೆಶೋದಾ
ಜಗದೋದ್ದಾರನ ಮಗನೆಂದು ತಿಳಿಯುತ
ಸುಗುಣಾಂತರಂಗನ ಆಡಿಸಿದಳೆಶೋದಾ

ನಿಗಮಕೆ ಸಿಲುಕದ ಅಗಣಿತ ಮಹಿಮನ
ಮಗುಗಳ ಮಾಣಿಕ್ಯನ ಆಡಿಸಿದಳೆಶೋದಾ

(Contd)

#hks #vyapthisandhi
ಅಣೋರಣೀಯನ ಮಹತೋಮಹೀಯನ
ಅಪ್ರಮೇಯನ ಆಡಿಸಿದಳೆಶೋದಾ

ಪರಮಪುರುಷನ ಪರವಾಸುದೇವನ
ಪುರಂದರವಿಠಲನ ಆಡಿಸಿದಳೆಶೋದಾ

In the voice of Shri Vidyabhushanaru 🙏🏽🙏🏽



#hks #vyapthisandhi
ಎಲ್ಲಿ ಕೇಳಿದರೆಲ್ಲಿ ನೊಡಿದ।
ರೆಲ್ಲಿ ಬೇಡಿದರೆಲ್ಲಿ ನೀಡಿದ
ರೆಲ್ಲಿ ಓಡಿದರೆಲ್ಲಿ ಆಡಿದರೆಲ್ಲಿ ಇರುತಿಹನು।।
ಬಲ್ಲಿದರಗತಿಬಲ್ಲಿದನು ಸರಿ।
ಇಲ್ಲ ಇವಗಾವಲ್ಲಿ ನೋಡಲು।
ಖುಲ್ಲ ಮಾನವರೊಲ್ಲನಪ್ರತಿಮಲ್ಲ ಜಗಕೆಲ್ಲ।।

ಇಲ್ಲಿ ಶ್ರೀಹರಿಯ ಕ್ರಿಯಾವೈಭವವನ್ನು ವಿವರಿಸುತ್ತಾರೆ

#hks #vyapthisandhi
ತಪ್ತಲೋಹವು ನೋಳ್ಪಜನರಿಗೆ।
ಸಪ್ತಜಿಹ್ವನ ತೆರದಿ ತೋರ್ಪದು ।
ಲುಪ್ತಪಾವಕ ಲೋಹಕಾಂಬುದು ಪೊರ್ವದೋಪಾದಿ।।
ಸಪ್ತವಾಹನ ನಿಖಿಳಜನರೊಳು।
ವ್ಯಾಪ್ತನಾದುದರಿಂದ ಸರ್ವರು।
ಆಪ್ತರಾಗಿಹರೆಲ್ಲ ಕಾಲದಿ ಹಿತವ ಕೈಕೊಂಡು।।

ಶ್ರೀಪರಮಾತ್ಮನು ಸಕಲ ಚೇತನರುಗಳಲ್ಲಿ ವ್ಯಾಪ್ತನು ಎಂಬ ಸನ್ನಿಧಾನ ವಿಶೇಷದ ಮಹಿಮೆಯನ್ನು ವಿವರಿಸುತ್ತಾರೆ

#hks #vyapthisandhi
Shri Sankarshana Wodeyaru gives the pramana for ಸಪ್ತಜಿಹ್ವೆಗಳು from Bhagavatha 7 skanda

नैषां मतिस्तावदुरुक्रमांघ्रिं स्प्रशत्यनर्थागापगमो यदुत्थ:

#hks #vyapthisandhi
ಅಗ್ನಿದೇವರಿಗೆ
2 ಮುಖಗಳು
7 ನಾಲಿಗೆಗಳು(ಜಿಹ್ವೆ)

ಎಡಮುಖ - 3 ಜಿಹ್ವೆಗಳು
ಬಲಮುಖ - 4 ಜಿಹ್ವೆಗಳು

7 types of ಜಿಹ್ವೆ /ವರ್ಣ/ಸ್ವೀಕಾರವಿಧಿ

1.ಕಾಲೀ (ಹಿರಣ್ಯ)
2.ಕಪಾಲೀ (ಕನಕ)
3.ಮನೋಜವಾ (ರಕ್ತ)
3.ಸುಲೋಹಿತಾ (ಕೃಷ್ಣ)
5.ಸುಧೊಮ್ರವರ್ಣ (ಸುಪ್ರಭ)
6.ಸ್ಪುಲಿಂಗಿನೀ (ಅತಿರಕ್ತ)
7.ವಿಶ್ವರುಚೀ (ಬಹುರೊಪ)

#hks #vyapthisandhi
ಜಲವನಪಹರಿಸುವ ಘಳಿಗೆ ಬ।
ಟ್ಟಲನುಳಿದು ಜೈಘಂಟೆ ಕೈಪಿಡಿ।
ದೆಳೆದು ಹೊಡೆವಂದದಲಿ ಸಂತತ ಕರ್ತೃ ತಾನಾಗಿ।।
ಹಲಧರಾನುಜ ಪುಣ್ಯಪಾಪದ ।
ಫಲಗಳನು ದೇವಾಸುರರ ಗಣ।
ದೊಳು ವಿಭಾಗವಮಾಡಿ ಉಣಿಸುತ ಸಾಕ್ಷಿಯಾಗಿಪ್ಪ।।

ಘಳಿಗೆ ಬಟ್ಟಲು- ಇದರ ದೃಷ್ಟಾಂತವನ್ನು ಮನಮುಟ್ಟುವಂತೆ ನಿರೊಪಿಸಿದ್ದಾರೆ.

What is ಘಳಿಗೆ ಬಟ್ಟಲು?
Cont’d

#hks #vyapthisandhi
ಭಾವಪ್ರಕಾಶಿಕೆ ವ್ಯಾಖ್ಯಾನದಲ್ಲಿ “ಘಳಿಗೆ ಬಟ್ಟಲು” ಮಾಡುವ ಕ್ರಮವನ್ನ ಭಾಗವತದ ಶ್ಲೋಕದ ಮೊಲಕ ತಿಳಿಸಿದ್ದಾರೆ

द्वादशार्धपलोन्मानं चतुर्भिश्चतुरंगुलै: ।।
स्वर्ण माष्यै: कृतच्छिद्रं यावत्प्रस्थं जलं पिबेत्।।

#hks #vyapthisandhi
ಎಲ್ಲರೊಳು ತಾನಿಪ್ಪ ತನ್ನೊಳ
ಗೆಲ್ಲರನು ಧರಿಸಿಹನು ಅಪ್ರತಿ
ಮಲ್ಲ ಮನ್ಮಥಜನಕ ಜಗದಾದ್ಯಂತ ಮಧ್ಯಗಳ।।
ಬಲ್ಲ ಬಹುಗುಣಭರಿತ ದಾನವ
ದಲ್ಲಣ ಜಗನ್ನಾಥವಿಠ್ಠಲ
ಸೊಲ್ಲಲಾಲಿಸಿ ಸ್ತಂಭದಿಂದಲಿ ಬಂದ ಭಕುತನಿಗೆ।।

ಮನ್ಮಥಜನಕ ಹೇಗೆ?

#hks #vyapthisandhi
ಮನ್ಮಥಜನಕ => ಮನ್ಮಥನ ತಂದೆ

ರುದ್ರದೇವರಿಂದ ಭಸ್ಮನಾದ “ಅನಂಗ”ನೆಂದು ಪ್ರಸಿದ್ಧನಾದ “ಮನ್ಮಥ”ನನ್ನು ಕೃಷ್ಣಾವತಾರ ಕಾಲದಲ್ಲಿ
“ಜಾಂಬುವತಿ”ಯಿಂದ “ಸಾಂಬ”ನಾಗಿ ಪುತ್ರತ್ವೇನ ಪಡೆದನು

ಮೇಲಿನ ಪದ್ಯದ ಮೊಲಕ “ವ್ಯಾಪ್ತಿ” ಸಂಧಿಯನ್ನು
ದಾಸರಾಯರು ಮುಕ್ತಾಯಗೊಳಿಸುತ್ತಾರೆ

ಮುಂದಿನದು 4ನೆ ಸಂಧಿ #ಭೋಜನರಸವಿಭಾಗಸಂಧಿ
#hks #vyapthisandhi
ವಾರಿವಾಚ್ಯನು ವಾರಿಯೊಳಗಿ।
ದ್ದಾರು ರಸವೆಂದೆನಿಸಿ ಮೊವ।
ತ್ತಾರು ಸಾವಿರ ಸ್ತ್ರೀಪುರುಷನಾಡಿಯೊಳು ತದ್ರೊಪ।।
ಧಾರಕನು ತಾನಾಗಿ ಸರ್ವಶ।
ರೀರಗಳಲಿ ಅಹಶ್ಚರಾತ್ರಿ ವಿ।
ಹಾರಮಾಳ್ಪನು ಬೃಹತಿಯೆಂಬ ಸುನಾಮದಿಂ ಕರೆಸಿ।।

72,000 नाडि
ಸ್ತ್ರೀಪುರುಷ 36,000 each
ಬೃಹತಿ - छंदस्

6 रस/ರಸಗಳು Cont’d

#ಭೋಜನರಸವಿಭಾಗಸಂಧಿ #hks
6 रस/ರಸಗಳು vs ಅಭಿಮಾನಿ ದೇವತೆಗಳು

1.ಉಪ್ಪು - ನಿರ್ಋತಿ
2.ಹುಳಿ - ಪಾರ್ವತಿ
3.ಖಾರ - ದಕ್ಷಪ್ರಜಾಪತಿ
4.ಸಿಹಿ - ಇಂದ್ರ
5.ಕಹಿ - ಯಮ
6.ಒಗರು - ಭಾಗೀರಥಿ ದೇವಿ

- ಶ್ರೀ ಸಂಕರ್ಷಣ ಒಡೆಯರ ವ್ಯಾಖ್ಯಾನ

#ಭೋಜನರಸವಿಭಾಗಸಂಧಿ #hks
ಸುತಪನೇಕೋತ್ತರ ಸುಪಂಚಾ।
ಶತವರಣ ಕರಣದಿ ಚತುರ್ವಿಂ।
ಶತಿ ಸುತತತ್ತ್ವದಿ ಧಾತುಗಳೊಳಗಿದಿದು ವಿರತನಿರುದ್ಧ।।
ಜತನ ಮಾಳ್ಪನು ಜಗದಿ ಜೀವ।
ಪ್ರತತಿಗಳ ಷಣ್ಣವತಿನಾಮಕ।
ಚತುರಮೊರ್ತಿಗಳರ್ಚಿಸುವರದರಿಂದ ಬಲ್ಲವರು।।೨೨।।

ಅನುಸಂಧಾನ ಅರಿತವರು ಪಿತೃಕಾರ್ಯಗಳಲ್ಲಿ ಅನಿರುದ್ಧಾದಿ ರೊಪಗಳ ಈ ರೀತಿ ಅರ್ಚಿಸುತ್ತಾರೆ ಅಂತ ಅರ್ಥ

#ಭೋಜನರಸವಿಭಾಗಸಂಧಿ #hks
ಶ್ರೀ ಸಂಕರ್ಷಣ ಒಡೆಯರ ವ್ಯಾಖ್ಯಾನ

ಪಂಚಾಶತ = 51 ವರ್ಣಗಳು
ಷಣ್ಣವತಿ = 96
ಷಣ್ಣವತಿನಾಮಕ = ಅನಿರುದ್ಧ = ಶ್ರಾದ್ಧಾಕಾಮಿ

“ಭಾವಪ್ರಕಾಶಿಕೆ” ವ್ಯಾಖ್ಯಾನ

51 ವರ್ಣಗಳು ವರ್ಣಪ್ರತಿಪಾದ್ಯನಾದ ಪರಮಾತ್ಮನ ರೊಪಗಳು 51
Cont’d
#ಭೋಜನರಸವಿಭಾಗಸಂಧಿ #hks
51 bhagawadrupagalu

1.ಅಜ(अज)
2.ಆನಂದ(आनंद)
3.ಇಂದ್ರ(इंद्र)
4.ಈಶಾನ(इशान)
5.ಉಗ್ರ(उग्र)
6.ಊರ್ಜ(ऊर्ज)
7.ಋತಂಭರ(ऋतंभर)

#ಭೋಜನರಸವಿಭಾಗಸಂಧಿ #hks
8. ಋೊಘ (ऋघ)
9. ಲೃಶ (लृश)
10.ಲೃೊಜ(लुृज)
11.ಏಕಾತ್ಮ(ऐकात्म)
12.ಐರ(ऐरा)
13.ಓಜೋಭೃತ (ओजोभृत)
14.ಔರಸ (औरस)

#ಭೋಜನರಸವಿಭಾಗಸಂಧಿ #hks
15. ಅಂತ (अंत)
16. ಅರ್ಧಗರ್ಭ (अर्धगर्भ)
17. ಕಪಿಲ (कपिल)
18. ಖಪತಿ (खपति)
19. ಗರುಡ (गरुड)
20. ಘರ್ಮ (घर्म)
21. ಔಸಾರ (औसार)

#ಭೋಜನರಸವಿಭಾಗಸಂಧಿ #hks
22. ಚಾರ್ವಾಂಗ (चार्वांग)
23. ಛಂದೋಗಮ್ಯ (छंदोगम्य)
24. ಜನಾರ್ದನ (जनार्दन)
25. ಝೊಟತಾರಿ (झूटतारि)
26. ಞಮ (ङम)
27. ಟಂಕಿ (टंकि)
28. ಠಲಕ (ठलक)

#ಭೋಜನರಸವಿಭಾಗಸಂಧಿ #hks
29. ಡರಕ (डरक)
30. ಢರಿಣ (ढरिण)
31. ಣಾತ್ಮ(णात्म)
32. ತಾರಾ (तारा)
33. ಥಭ (थभ)
34. ದಂಡೀ (दंडी)
35. ಧನ್ವೀ (धन्वि)

#ಭೋಜನರಸವಿಭಾಗಸಂಧಿ #hks
36. ನಮ್ಯ (नम्य)
37. ಪರ (पर)
38. ಫಲೀ (फली)
39. ಬಲೀ (बली)
40. ಭಗ (भग)
41. ಮನ (मन)
42. ಯಜ್ಞ (यज्ञ)

#ಭೋಜನರಸವಿಭಾಗಸಂಧಿ #hks
43. ರಾಮ (राम)
44. ಲಕ್ಷ್ಮೀಪತಿ (लक्ष्मीपति)
45. ವರಾಹ (वराह)
46. ಶಾಂತ ಸಂವಿತ್ (शांत संवित्)
47. ಷಡ್ಗುಣ (षड्गुण)
48. ಸಾರಾತ್ಮ (सारात्म)
49. ಹಂಸ (हंस)
50. ಳಾಳುಕ (ळाळुक)
51. ಲಕ್ಷ್ಮೀನರಸಿಂಹ (लक्ष्मीनरसिंह)

#ಭೋಜನರಸವಿಭಾಗಸಂಧಿ #hks
51 Alphabets 51 Bhagawadrupagalu

That’s how one should do अनुसंधान

Here is details in Kannada

#ಭೋಜನರಸವಿಭಾಗಸಂಧಿ #hks
Jagannatha Dasaru In HKS shares interesting numbers in #bhaminishatpadi #informatics

ಐದುಲಕ್ಷಂಭತ್ತರೊಂಭ।
ತ್ತಾದ ಸಾವಿರದೇಳುನೊರರ।
ಐದು ರೊಪವ ಧರಿಸಿ ಭೋಕ್ತೃಗ ಭೋಜ್ಯನೆಂದೆನಿಸಿ।।
ಶ್ರೀಧರಾ ದುರ್ಗಾರಮಣ ಪಾ।
ದಾದಿ ಶಿರಪರ್ಯಂತ ವ್ಯಾಪಿಸಿ।
ಕಾದುಕೊಂಡಿಹ ಸಂತತ ಜಗನ್ನಾಥವಿಠಲನು||30||

#ಭೋಜನರಸವಿಭಾಗಸಂಧಿ #hks
ಗುರುಹೃದಯ ಪ್ರಕಾಶಿಕೆಯ ವ್ಯಾಖ್ಯಾನ

5,89,705 ರೊಪಗಳು
ಭೋಜನ ಮಾಡುವರಲ್ಲಿ
ಭೋಜನ ಪದಾರ್ಥಗಳಲ್ಲಿ
ಶ್ರೀ ಭೊದುರ್ಗಾದೇವಿಯ ಪತಿಯು ಕಾಲಿನಿಂದ ತಲೆ ಪರ್ಯಂತ ಸನ್ನಿಹಿತನಾಗಿ ವ್ಯಾಪ್ತನಾಗಿ ಜೀವರನ್ನು ರಕ್ಷಿಸುತ್ತಿರುವನು ಎಂದು ತಾತ್ಪರ್ಯ

#ಭೋಜನರಸವಿಭಾಗಸಂಧಿ #hks
ಗುರುಹೃದಯ ಪ್ರಕಾಶಿಕೆಯ ವ್ಯಾಖ್ಯಾನ

The same topic #Vijayadasaru has covered in “ಪ್ರಾಣಾಗ್ನಿಹೋತ್ರ ಸುಳಾದಿ” by referring to चांद्योग्योपनिषत् 6 अद्याय

Even with internet & access to almost all literary content ever produced we don’t produce/appreciate these works

#ಭೋಜನರಸವಿಭಾಗಸಂಧಿ #hks
#Bhagavadgita chapter 7

बहूनाम् जन्मनाम् अन्ते ज्ञानवान् मां प्रपद्यते
वासुदेवः सर्वम् इति स महात्मा सुदुर्लभः

“वासुदेवः सर्वम् इति”

In #HKS vyapthi sandhi Jagannatha Dasaru clearly explains “Vasudeva”
ಪುರುಷರೊಪತ್ರಯ ಪುರಾತನ
ಪುರುಷ ಪುರುಷೋತ್ತಮ ಕ್ಷರಾಕ್ಷರ
ಪುರುಷಪೊಜಿತಪಾದ ಪೊರ್ಣಾನಂದಜ್ಞಾನಮಯ ।।

ಪುರುಷಸೊಕ್ತ ಸುಮೇಯ ತತ್ತ
ತ್ಪುರುಷ ಹೃತ್ಪುಷ್ಕರನಿಲಯ ಮಹ
ಪುರುಷಜಾಂಡಾಂತರದಿ ಬಹಿರದಿವ್ಯಾಪ್ತ ನಿರ್ಲಿಪ್ತ ।।೧।।

ಪುರುಷರೊಪತ್ರಯ is the most important aspect of this shloka

#HKS #vyapthi sandhi
ಪುರುಷರೊಪತ್ರಯ =>

3 ಪುರುಷ ರೊಪಗಳನ್ನು ಧರಿಸಿದ
ಪ್ರಥಮತಃ ಸೃಷ್ಟಿ ಪ್ರಾರಂಭದಲ್ಲಿ ವಟಪತ್ರಶಾಯಿಯಾದ ಶ್ರೀಮನ್ನಾರಯಣ ದೇವರಿಂದ ಅಭಿವ್ಯಕ್ತವಾದ “ವಾಸುದೇವ”ನಿಗೆ ಪುರುಷ ಎಂದು ಪ್ರಸಿದ್ಧ.

“ಪರಮಾತ್ಮನು ಎಂಥಾವನೆಂದರೆ ಪುರುಷ ಎಂತ ಕರೆಸಿಕೊಂಡು 3 ರೊಪಗಳಿಂದ 3 ವಿಧ ವ್ಯಾಪಾರ ಮಾಡಿದವ” - ಶ್ರೀಸಂಕರ್ಷಣಒಡೆಯರು

#hks
ಪುರುಷರೊಪತ್ರಯ
ರೊಪ 1. ಮಹತ್ತತ್ವದಲ್ಲಿ
ರೊಪ 2. ಬ್ರಹ್ಮಾಂಡದಲ್ಲಿ
ರೊಪ 3.ಸರ್ವಜೇವರುಗಳಲ್ಲಿ

ಅನಿರುದ್ಧಾದಿರೊಪಗಳು ಅಭಿವ್ಯಕ್ತವಾಗುವುದಕ್ಕಿಂತಲೊ ಮುಂಚಿತವಾಗಿ ಅಭಿವ್ಯಕ್ತವಾದವನಾದ ವಾಸುದೇವರೊಪ ಉಳ್ಳವನು.

ಆದಕಾರಣ ಇವನು ಪುರಾತನಪುರುಷ

ಶ್ರೀಸಂಕರ್ಷಣಒಡೆಯರು

#hks
ವಾಸುದೇವನು

ಲಕ್ಷ್ಮೀದೇವೇರಕ್ಕಿಂತಲೊ , ಬ್ರಹ್ಮಾದಿ ಜೀವರಕ್ಕಿಂತಲೊ ಉತ್ತಮನಾದವ

ಆ ಲಿಂಗದೇಹನಾಶ ಐದತಕ್ಕ ಬ್ರಹ್ಮಾದಿತೃಣಾಂತಜೀವರಿಗೊ

ಲಿಂಗದೇಹವಿಲ್ಲದ ನಿತ್ಯಮುಕ್ತಳಾದ ಲಕ್ಷ್ಮಿಗೊ ವಿಲಕ್ಷಣನಾಗಿ

ಅವರ ಅಂತರ್ಗತನಾಗಿ

ಅವರಿಂದ ಪೊಜೆ ಮಾಡಿಸಿಕೊಳಲ್ಪಟ್ಟ ಪಾದದ್ವಯವುಳ್ಳವನು.

ಶ್ರೀಸಂಕರ್ಷಣಒಡೆಯರು

#hks
ಪೊರ್ವೋಕ್ತ ತ್ರಿವಿಧರಲ್ಲಿ ಇದ್ದಾಗ್ಯೊ ಅವಿಕಾರನಾಗಿ ಸಂತೋಷ, ಜ್ಞಾನ ಇವುಗಳಿಂದ ಪ್ರಚುರವಾದ ಶರೀರ ಉಳ್ಳವನು.

ವೇದಸೊಕ್ತವಾದ ಪುರುಷಸೊಕ್ತದಿಂದ ಛಂದಾಗಿ ತಿಳಿಸಿಕೋತಕ್ಕವ.

ಇಂಥಾ ಪರಮಾತ್ಮ ತನ್ನ ಅವಯವಗಳಿಂದ ಅಂಡದ ಒಳಗೆ ಜಗತ್ಸೃಷ್ಟಿ ಮಾಡಿ...

ಶ್ರೀಸಂಕರ್ಷಣಒಡೆಯರು

#hks
ಆ ಜಗತ್ತಿನಲ್ಲೊ ಅದರಲ್ಲಿರುವಂಥಾ ರಮಾದೇವೇರ ಸ್ವರೊಪ ದೇಹದಲ್ಲೊ

ತ್ರಿವಿಧ ಜೀವರ ಸ್ಥೊಲ ದೇಹದಲ್ಲೊ ಆವಾಸನಾಗಿ ಮತ್ತು ತಾನೇ 3 ರೊಪ ಧರಿಸಿದವನಂಥಾವನಾಗಿ

ಒಂದು ರೊಪದಿಂದ ಬ್ರಹ್ಮಾಂಡ ಖರ್ಪರದಲ್ಲಿ

ಇನ್ನೊಂದುರೊಪದಿಂದ ಬ್ರಹ್ಮಾಂಡಧ ಒಳಗೆ

ಇನ್ನೊಂದುರೊಪದಿಂದ ಅಂಡದಹೊರಗೆ ಪೃಥಿವ್ಯಾವರಣ ಆರಂಭಮಾಡಿ..

ಶ್ರೀಸಂಕರ್ಷಣಒಡೆಯರು

#hks
ನವಾವರಣಪರ್ಯಂತ ವ್ಯಾಪ್ತನಾಗಿರತಕ್ಕವ

ನವಾವರಣಗಳು
1.ಜಲ
2.ಅಗ್ನಿ
3.ವಾಯು
4.ಆಕಾಶ
5.ಅಹಂಕಾರತತ್ವ
6.ಮಹತ್ತತ್ವ
7.ತಮೋ ಆವರಣ
8.ರಜೋ ಆವರಣ
9.ಸತ್ವಾವರಣ

ಶ್ರೀಸಂಕರ್ಷಣಒಡೆಯರು

#hks
ಹೀಂಗೆ ವ್ಯಾಪ್ತನಾಗಿದ್ದಾಗ್ಯೊನೊ ತತ್ತ್ಸಂಬಧಪಡದೆ ಇರತಕ್ಕವ.

ರಮಾದೇವೇರಿಗೆ ಕೊಡ ಲಭ್ಯವಾಗದ ಸ್ವಾಖ್ಯಪ್ರದೇಶ ಉಳ್ಳವನಾಗಿ ಅಪರಿಚ್ಛಿನ್ನವ್ಯಾಪ್ತನಾಗಿರತಕ್ಕವ ..

ಶ್ರೀಸಂಕರ್ಷಣಒಡೆಯರು

#hks
ಯಾಕೆಂದರೆ ರಮಾದೇವಿ ಗುಣತಃ ಅಸಮಳು.

ಆದಪ್ರಯುಕ್ತ ಸಮವ್ಯಾಪ್ತಿ ಇಲ್ಲ.

ಪ್ರಮಾಣ 👇🏽

ಶ್ರೀಸಂಕರ್ಷಣಒಡೆಯರು

#hks
ವಿಭೊತಿ ಶಬ್ದಾರ್ಥವೇನು?

विभूतयोनाम विविधतया नानारूपतया रामकृष्णादितया भूता निरूपाणि ।।
यद्वयेषां विष्णुस्वरूपणां सन्निधेरन्यवस्तुषु विशिष्टत्वं स्वजातेः स्याद्विभूत्याख्यानितानितु।।

गीता विवृतिः

#HKS #vibhutisandhi #ವಿಭೊತಿ
यद्यद्विभूतिमत्सित्वं श्रीमदूर्जितमेववा
तत्तदेवागच्चत्वं ममतेजोंश संभवम्।।
ಭಗ್ವದ್ಗೀತೆ ಅಧ್ಯಾಯ 10 ಶ್ಲೋಕ 14
#HKS #vibhutisandhi #ವಿಭೊತಿ
ವಿಭೂತಿ ವಿವಿಧತಯಾ ವಿಭೂತಯಃ ನಾನಾವಿಧವಾಗಿ ರಾಮಕೃಷ್ಞಾದಿ ರೂಪಗಳನ್ನ ಸ್ವೀಕರಿಸುವುದಕ್ಕೆ ವಿಭೂತಿ ಎಂದು ಹೆಸರು

#HKS #vibhutisandhi
You can follow @v2l2b2.
Tip: mention @twtextapp on a Twitter thread with the keyword “unroll” to get a link to it.

Latest Threads Unrolled: