#Dubbingbeku #ServeInMyLanguage ಎಂದು ಹೋರಾಡುವ @KannadaGrahaka ದ ಗೆಳೆಯರೇ, ನಿಮಗೆ ಸ್ಪೂರ್ತಿದಾಯಕವಾಗಬಹುದಾದ ವಿಷಯ:
ಈಗ #ಕನ್ನಡದ ಹಲವಾರು ದೂರದರ್ಶನ ವಾಹಿನಿಗಳಿವೆ, ಸಾವಿರಾರು ಜನರಿಗೆ ಅನ್ನ ಕೊಡುತ್ತಿವೆ. ಕೋಟಿ ಕನ್ನಡಿಗರಿಗೆ ಸುದ್ದಿ/ಮನರಂಜನೆ #ಕನ್ನಡದಲ್ಲಿಯೇ ಕೊಡುತ್ತಿವೆ. ಆದರೆ ನಿಮಗೆ ಗೊತ್ತಾ, ದಶಕಗಳ ಹಿಂದೆ ಐವರು ಎಲೆಮರೆಯ ಕಾಯಿಯಂತೆ ಮಾಡಿದ ಮೌನಕ್ರಾಂತಿಯಿಂದಾಗಿ ನಾವು ಈ #ಕನ್ನಡ ವಾಹಿನಿಗಳ ಫಸಲನ್ನು ನೋಡುತ್ತಿದ್ದೇವೆ ಎಂದು ?

ಮುಂದೆ ಓದಿ
2/n
ಕರ್ನಾಟಕದಲ್ಲಿ ದೂರದರ್ಶನ ಮರು ಪ್ರಸಾರ ಕೇಂದ್ರಗಳು ಆರಂಭಗೊಂಡಿದ್ದು 1984ರಲ್ಲಿ. ಆಗ ಈ ಕೇಂದ್ರಗಳು ಕೇವಲ 25 ಕಿ.ಮೀ. ವ್ಯಾಪ್ತಿಯನ್ನು ಹೊಂದಿದ್ದು ಅವು ಕೇವಲ ದಿಲ್ಲಿ ದೂರದರ್ಶನದ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿದ್ದವು. ಆ ಕಾರ್ಯಕ್ರಮಗಳು ಕೇವಲ ಹಿಂದಿ ಕಾರ್ಯಕ್ರಮಗಳಾದ್ದರಿಂದ ಬಹುಪಾಲು ಕನ್ನಡಿಗರಿಗೆ ಅರ್ಥವಾಗುತ್ತಿರಲಿಲ್ಲ.
3/n
ಇಡೀ ಕರ್ನಾಟಕದಲ್ಲಿ ಕೇವಲ ಬೆಂಗಳೂರು ದೂರದರ್ಶನ ಕೇಂದ್ರವೊಂದು ಮಾತ್ರ
ಕನ್ನಡ ಕಾರ್ಯಕ್ರಮಗಳನ್ನು ತಯಾರಿಸಿಕೊಂಡು ಪ್ರಸಾರ ಮಾಡುವ ಸಾಮರ್ಥ್ಯವನ್ನು ಹೊಂದಿತ್ತು. ಆದರೆ ಆ ಕೇಂದ್ರದ ವ್ಯಾಪ್ತಿಯೂ ಸಹ ಬಹಳಷ್ಟು ಚಿಕ್ಕದಾದ ಕಾರಣದಿಂದ ಆ ಕನ್ನಡ ಕಾರ್ಯಕ್ರಮಗಳು ಬಹುಪಾಲು ಕನ್ನಡಿಗರನ್ನು ತಲುಪುತ್ತಲೇ ಇರಲಿಲ್ಲ.
4/n
ನೆರೆ ರಾಜ್ಯಗಳಾದ ಆಂಧ್ರ, ತಮಿಳುನಾಡು ಮತ್ತು ಕೇರಳದಲ್ಲಿ ಸ್ಥಳೀಯ ಭಾಷೆಯ ಕಾರ್ಯಕ್ರಮಗಳು ಇಡೀ ರಾಜ್ಯಕ್ಕೆ ಪ್ರಸಾರವಾಗುತ್ತಿದ್ದರೆ, ಕರ್ನಾಟಕವೊಂದೇ ಸ್ಥಳೀಯ ಭಾಷೆಯ ಪ್ರಸಾರದಿಂದ ವಂಚಿತವಾಗಿತ್ತು. ಬಹುಪಾಲು ಒಳನಾಡು ಕನ್ನಡಿಗರು ಹಿಂದಿ ಮತ್ತು ಗಡಿನಾಡ ಕನ್ನಡಿಗರು ಬೇರೆ ಭಾಷೆಯ ಕಾರ್ಯಕ್ರಮಗಳನ್ನು ಅನಿವಾರ್ಯವಾಗಿ ನೋಡುವಂತಾಗಿತ್ತು.
5/n
ಇದರ ಬಗ್ಗೆ ನಮ್ಮ ಜನ ಪ್ರತಿನಿಧಿಗಳು ದನಿ ಎತ್ತಲೇ ಇಲ್ಲ. ಕೇಂದ್ರ ಸರ್ಕಾರದವಂತೂ ರೋಗಿ ಬಯಸಿದ್ದು ಹಾಲು ಅನ್ನ, ವೈದ್ಯ ಹೇಳಿದ್ದೂ ಹಾಲು ಅನ್ನ ಎನ್ನುವಂತೆ ಈ ಪ್ರಸಾರದ ಮೂಲಕ #ಹಿಂದಿಹೇರಿಕೆ ಯನ್ನು ರಾಜಾರೋಷವಾಗಿ ಮುಂದುವರೆಸಿತ್ತು
6/n
ಈ ತಾರತಮ್ಯವನ್ನು ಗಮನಿಸಿದ ಹುಬ್ಬಳ್ಳಿಯ ಮರೇಗುದ್ದಿ ಕುಟುಂಬದ ಸದಸ್ಯರಾದ ಸರ್ವಶ್ರೀ ಗೋವಿಂದ (ಸೈನ್ಯಅಧಿಕಾರಿ), ವೆಂಕಟೇಶ, ಪ್ರದೀಪ ಹಾಗೂ ಗೋವಿಂದ ಅವರ ಮಕ್ಕಳಾದ ರಾಜೀವ ಮತ್ತು ಮಂಜುನಾಥ ಈ ಐವರು ಈ ತಾರತಮ್ಯವನ್ನು ಹೊಗಲಾಡಿಸಿ ಇಡೀ ಕರ್ನಾಟಕಕ್ಕೆ ಕನ್ನಡ ಕಾರ್ಯಕ್ರಮಗಳು ಪ್ರಸಾರವಾಗುವ ವರೆಗೆ ಹೋರಾಟ ಕೈಗೊಳ್ಳಬೇಕೆಂದು ಸಂಕಲ್ಪ ಮಾಡಿದರು.
7/n
ಈ ಉದ್ದೇಶಕ್ಕಾಗಿ ಅವರು ಅನುಸರಿಸಿದ್ದು ಪತ್ರ ಚಳುವಳಿ, ಆವಾಗ
#ServeInMylangue ಎಂದು ಟ್ವೀಟ್‌ ಚಳುವಳಿಮಾಡುವ ಅವಕಾಶವಿರಲಿಲ್ಲವಲ್ಲಾ! ಈ ಐದು ಜನರು ತಮ್ಮ ಇತರೆ ಮಿತ್ರರೊಂದಿಗೆ ಸೇರಿ ಹುಬ್ಬಳ್ಳಿ ಮತ್ತು ಧಾರವಾಡದ ಎಲ್ಲಾ ಟಿ.ವ್ಹಿ. ಅಂಗಡಿಗಳಿಗೆ ಭೇಟ್ಟಿ ಕೊಟ್ಟು “ಕನ್ನಡ ಕಾರ್ಯಕ್ರಮಗಳು ಇಡೀ ಕರ್ನಾಟಕಕ್ಕೆ ಬಿತ್ತರಗೊಂಡರೆ

8/n
ಹಳ್ಳಿಯಲ್ಲಿರುವ ಅನೇಕ ಜನ ಟಿವಿ ಕೊಳ್ಳಲು ಮುಂದೆ ಬರುತ್ತಾರೆ, ಇದರಿಂದ ನಿಮ್ಮ ವ್ಯಾಪಾರ-ವಹಿವಾಟು ಹೆಚ್ಚುತ್ತದೆ “ ಎಂದು ವಿವರಿಸಿ ಅವರಿಂದ 15 ಪೈಸೆಯ ಕಾರ್ಡ್ಗಳನ್ನು ಇಲ್ಲವೇ ಅವನ್ನು ಕೊಳ್ಳಲು ಹಣವನ್ನು ಸಂಗ್ರಹಿಸಿದರು. ದುರ್ದೈವದ ಸಂಗತಿ ಏನೆಂದರೆ ಅನೇಕ ಟಿ.ವ್ಹಿ. ಅಂಗಡಿಗಳ ಮಾಲೀಕರಿಗೆ ಇವರ ನಿಸ್ವಾರ್ಥ ದೂರದೃಷ್ಢಿ ತಿಳಿಯಲೇ ಇಲ್ಲ.
9/n
ಈ ಉದ್ದೇಶಕ್ಕೆ ಸುಮಾರು 5 ಲಕ್ಷ ಕಾರ್ಡ್ ಗಳು ಬೇಕಾಗಿದ್ದವು. ಅಂದರೆ ಸುಮಾರು 75ಸಾವಿರ ರೂಪಾಯಿಗಳು ಬೇಕಾಗಿತ್ತು. ಇಷ್ಟು ಹಣ ಹುಬ್ಬಳ್ಳಿಯ ಏಷ್ಟೋ ಸಾರ್ವಜನಿಕ ಗಣೇಶಮಂಡಲಿಗಳಲ್ಲಿ ಅನಾಯಾಸವಾಗಿ ಸಂಗ್ರಹವಾಗುತ್ತದೆ. ಆದರೆ ಕನ್ನಡದ ಕೆಲಸವೆಂದರೆ ಮಾತ್ರ ಒಂದು ನಯಾ ಪೈಸೆ ಸಹ ಹುಟ್ಟುವದಿಲ್ಲ!

10/n
ಆದರೂ ಛಲ ಬಿಡದ ತ್ರಿವಿಕ್ರಮನಂತೆ ಹೋರಾಟ ಮಾಡಿದ ಈ ಐವರೂ ಸರಿ
ಸುಮಾರಾಗಿ ಒಂದು ವರ್ಷದ ಅವಧಿಯಲ್ಲಿ ಸುಮಾರು 2 ಲಕ್ಷದ ಹತ್ತಿರ
ಪತ್ರಗಳನ್ನು ಸಂಗ್ರಹಿಸಿದರು. ಈ ಎಲ್ಲಾ ಪತ್ರಗಳನ್ನು ವಿವಿಧ
ರೀತಿಯ ಕೈಬರಹದಿಂದ ಅಲ್ಲದೇ ವಿವಿಧ ರೀತಿಯ ಒಕ್ಕಣೆಯಿಂದ ಬರೆಯಬೇಕಾಗಿತ್ತು. ಕೇವಲ ಐದು ಜನ ಎಷ್ಟು ರೀತಿಯ ಕೈಬರಹ ಮತ್ತು ಒಕ್ಕಣೆ ಹೊಂದಲು ಸಾಧ್ಯ?

11/n
ಇದಕ್ಕಾಗಿ ಕೆಲವು ಖಾಲಿ ಇರುವ ಹುಬ್ಬಳ್ಳಿಯ ಹುಡುಗರನ್ನು ಚಾ-ಚುಮ್ಮರಿ ತಿನ್ನಿಸಿ ತಮಗೆ ತಿಳಿದ ಹಾಗೆ ಕನ್ನಡ ಟಿ.ವ್ಹಿ. ಬರಲು ಒತ್ತಾಯಿಸಿ ಬರೆಯಿರಿ ಎಂದು ಹೇಳಿದರು. ಈ ಎಲ್ಲಾ ಪತ್ರಗಳನ್ನು ಬೇರೆ ಬೇರೆ ಸ್ಥಳಗಳಿಂದ ಬೇರೆ ಬೇರೆ ದಿನಾಂಕಗಳಿಂದ ಅಂದಿನ ವಾರ್ತಾ ಮತ್ತು ಪ್ರಸಾರ ಖಾತೆಯ ಸಚಿವರಾದ ಶ್ರೀ ಪಿ. ಉಪೇಂದ್ರರಿಗೆ ರವಾನಿಸಬೇಕಾಗಿತ್ತು

12/n
ಪ್ರತಿ 2-3 ದಿನಕ್ಕೊಮ್ಮೆ ಸ್ವಲ್ಪ ಸ್ವಲ್ಪ ಪತ್ರಗಳನ್ನು ಅನೇಕ ಊರುಗಳಿಂದ
ಪೋಸ್ಟ್ ಮಾಡಬೇಕೆಂದು ನಿರ್ಧರಿಸಿದ ಇವರು ಈ ಕೆಲಸಕ್ಕಾಗಿ ನೂರಾರು
ಕೆ.ಎಸ್.ಆರ್.ಟಿ.ಸಿ. ಚಾಲಕರನ್ನು ಮತ್ತು ನಿರ್ವಾಹಕರನ್ನು ಯಥೇಚ್ಛವಾಗಿ ಬಳಸಿಕೊಂಡರು.

13/n
ಅಲ್ಲದೇ ಗೆಳೆಯರು, ಸಂಬಂಧಿಕರು ಯಾರೇ ಆಗಲಿ ಊರಿಗೆ ಹೊಗುವರಿದ್ದರೆ
ಅವರನ್ನು ಕಾಡಿ ಬೇಡಿ ಅವರಿಂದ ಸ್ವಲ್ಪ ಸ್ವಲ್ಪ ಪತ್ರಗಳನ್ನು ಅನೇಕಾನೇಕ ಊರುಗಳಿಂದ ಪೋಸ್ಟ್ ಮಾಡಿಸಿದರು.

14/n
ಈ ಎಲ್ಲ ಪ್ರಯತ್ನಗಳ ಫಲವಾಗಿ 1990ರ ನವ್ಹೆಂಬರ್ 1 ರಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆಯ ಸಚಿವರಾದ ಶ್ರೀ ಪಿ. ಉಪೇಂದ್ರ ಅವರು ಬೆಂಗಳೂರಿನಲ್ಲಿ ಕನ್ನಡದ ಕಾರ್ಯಕ್ರಮಗಳನ್ನು ಇಡೀ ಕರ್ನಾಟಕಕ್ಕೆ ವಿಸ್ತರಿಸಿ, ಅವರೂ ಸಹ ಕನ್ನಡದಲ್ಲಿ ಮಾತನಾಡಿ ಈ ಭಾಗದ ಲಕ್ಷಾಂತರ ಜನರ ಮನವಿಗೆ ನಾವು ಸ್ಪಂದಿಸಿ ಈ ಕಾರ್ಯ ಕೈಗೊಂಡೆವು ಎಂದು ಹೇಳಿದರು.

15/n
ಮರೇಗುದ್ದಿ ಕುಟುಂಬದ ಆ ಐದು ನಿಸ್ವಾರ್ಥ ಜೀವಿಗಳು ತಮ್ಮ ಸಂಕಲ್ಪ ಪೂರ್ಣಗೊಂಡದ್ದಕ್ಕೆ ಸಂತೃಪ್ತಗೊಂಡವು.
ಇದು ಶ್ರೀ ಗಿರೀಶ ಮೆಟಗುಡಮಠ ಅವರ ಬರಹದ( http://www.angelfire.com/ok/arunry/TPBalaga-Visheshaanka-2005.pdf.) ಸಂಕ್ಷಿಪ್ತ ರೂಪ .
ಅವರ ಬರಹವನ್ನು ನಾನು ಇಲ್ಲಿ ಹಂಚಿದ್ದಕ್ಕೆ ಅವರ
ಅಭ್ಯಂತರವಿಲ್ಲ ಎಂದು ಕೊಂಡಿದ್ದೇನೆ.

ಶ್ರೀ ಮೆಟಗುಡಮಠ ಮತ್ತು ಮರೆಗುದ್ದಿ ಬಂಧುಗಳು ನನಗೆ ವೈಯಕ್ತಿಕವಾಗಿ ಪರಿಚಿತರಲ್ಲ,

ಅವರ ಕೆಲಸಕ್ಕೆ ಕನ್ನಡಿಗರ ಪರವಾಗಿ ನನ್ನ ನಮನ !
You can follow @kul_guru.
Tip: mention @twtextapp on a Twitter thread with the keyword “unroll” to get a link to it.

Latest Threads Unrolled: