ತ್ರಿಭಾಷಾ ಸೂತ್ರದ ವಿರುದ್ಧದ ಕೂಗು ಬಹಳ ಹಿಂದಿನದ್ದು. ಕುವೆಂಪು,ತೇಜಸ್ವಿ ಹಾಗೆ ಅನೇಕ ಸಾಹಿತಿಗಳು ತ್ರಿಭಾಷಾ ಸೂತ್ರದ ವಿರುದ್ಧ ಇದ್ದವರೇ, ಇಂದಿನ ಯುವಕರು ದ್ವಿಭಾಷಾ ಸೂತ್ರದ ಪರ ಧ್ವನಿ ಎತ್ತುವುದರೊಂದಿಗೆ ತ್ರಿಭಾಷಾ ಸೂತ್ರದ ವಿರುದ್ಧದ ಹೋರಾಟವನ್ನು ಮುನ್ನೆಲೆಗೆ ತೆಗೆದುಕೊಂಡು ಬಂದಿರುವುದು ಒಳ್ಳೆಯ ಬೆಳವಣಿಗೆ
#WeWantTwolanguagepolicy
ಹಿಂದಿ ನಮ್ಮ ರಾಜ್ಯದ ಮೇಲೆ ಉತ್ತರ ಭಾರತದಿಂದ ಹೇರಲ್ಪಟ್ಟ ಭಾಷೆ. ಅನಗತ್ಯವಾಗಿ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಹಿಂದಿಯನ್ನು ಪಠ್ಯಕ್ರಮದಲ್ಲಿ ಸೇರಿಸಿ ಮಕ್ಕಳನ್ನು ಒತ್ತಡಕ್ಕೆ ಒಳಗಾಗಿಸುತ್ತಿದ್ದೇವೆ. ಬದಲಿಗೆ ನಮ್ಮದೇ ರಾಜ್ಯದ ತುಳು, ಕೊಡವ ಭಾಷೆಗಳನ್ನು ಕಲಿಯುವ ಆಸಕ್ತಿ ಇದ್ದಲ್ಲಿ ವಿದ್ಯಾರ್ಥಿಗಳಿಗೆ ಅವಕಾಶ ಕೊಡಬಹುದು.
ಮಾತೃಭಾಷಾ ಶಿಕ್ಷಣಕ್ಕೆ ನನ್ನ ಮೊದಲ ಆದ್ಯತೆ, ಅನ್ಯ ರಾಜ್ಯ ಹಾಗೂ ದೇಶಗಳೊಡನೆ ಸಂಪರ್ಕ ಭಾಷೆಯಾಗಿ ಆಂಗ್ಲ ಭಾಷೆಯನ್ನು ದ್ವಿತೀಯ ಭಾಷೆಯಾಗಿ ಸ್ವೀಕರಿಸಲಾಗಿದೆ. ಕೇಂದ್ರ ಸರ್ಕಾರ ಅನಗತ್ಯವಾಗಿ ಹಿಂದಿಯೇತರ ರಾಜ್ಯಗಳ ಮೇಲೆ ಹಿಂದಿ ಹೇರಿಕೆಯ ಮೂಲಕ ಮಾಡುವ ದಬ್ಬಾಳಿಕೆಯನ್ನು ಮೊದಲ ಸಾಲಿನಲ್ಲಿ ನಿಂತು ವಿರೋಧಿಸುತ್ತೇನೆ.
#WeWantTwolanguagepolicy
ಮುಂದಿನ ದಿನಗಳಲ್ಲಿ ದ್ವಿಭಾಷಾ ಸೂತ್ರದ ಜಾರಿಯ ಬಗ್ಗೆ ಒಂದು ವಿಚಾರ ಸಂಕೀರ್ಣವನ್ನು ರಾಜ್ಯದಾದ್ಯಂತ ಆಯೋಜನೆ ಮಾಡಿ ಇದರ ಆಗುಹೋಗುಗಳನ್ನು ಚರ್ಚಿಸೋಣ. ತ್ರಿಭಾಷಾ ಸೂತ್ರದ ವಿರುದ್ಧ ಹೋರಾಟವನ್ನು ತಾರ್ಕಿಕವಾಗಿ ಅಂತ್ಯಗೊಳಿಸಲು ನಾನು ಸದಾ ನಮ್ಮ ಕರ್ನಾಟಕದ ಯುವಕರ ಬೆಂಬಲಕ್ಕೆ ನಿಲ್ಲುತ್ತೇನೆ.
#WeWantTwolanguagepolicy
You can follow @YSV_Datta.
Tip: mention @twtextapp on a Twitter thread with the keyword “unroll” to get a link to it.

Latest Threads Unrolled:

By continuing to use the site, you are consenting to the use of cookies as explained in our Cookie Policy to improve your experience.